ಚಂಡೀಗಢ: (ಜ 26) Panjab Election: ಚುನಾವಣೆ ಹತ್ತಿರಕ್ಕೆ ಬರುತ್ತಿದೆ ಎನ್ನುವಾಗಲೇ ಪಕ್ಷಗಳು ತಮ್ಮ ತಮ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿರುತ್ತಾರೆ. ಆಯ ಪಕ್ಷಗಳನ್ನು ಸರಿಯಲು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ. ಈಗಿನ ಕಾಲದ ಸೋಶಿಯಲ್ ಮೀಡಿಯಾ ದ ಮೂಲಕ ಮತ್ತಷ್ಟು ಮತದಾರರಿಗೆ ಹತ್ತಿರವಾಗಲು ನಾನಾ ತಂತ್ರಗಳನ್ನು ಬಳಸುತ್ತಾರೆ.
ಅಂದಹಾಗೆ ಪಂಜಾಬ್ ಚುನಾವಣೆಯಲ್ಲಿ ಕೂಡ ಹೀಗೊಂದು ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಅದರಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ ಚನ್ನಿ ಅವರನ್ನು ಸೂಪರ್ ಹೀರೋ ಮಾಡಲಾಗಿದೆ ಹಾಗೂ ಇದಕ್ಕೆ ‘ಕಾಂಗ್ರೆಸ್ ಹಿ ಆಯೇಗಿ’ ಎಂಬ ಹ್ಯಾಶ್ ಟ್ಯಾಗ್ ಹಾಕಲಾಗಿದೆ.

ವಿಡಿಯೋ ಮಾಡಲು ಹಾಲಿವುಡ್ ಚಿತ್ರವಾದ ಅವೆಂಜರ್ಸ್ ಇನ್ಫಿನಿಟಿ ವಾರ ಚಿತ್ರದ ದೃಶ್ಯವನ್ನು ಎಡಿಟ್ ಮಾಡಲಾಗಿದೆ. ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು. ರಾಹುಲ್ ಗಾಂಧಿಗೆ ನವಜ್ಯೋತ್ ಸಿಂಗ್ ಸಿಧು, ಜೊತೆಗೆ ಚರಂಜಿತ್ ಸಿಂಗ್ ಚನ್ನಿ ಅವರನ್ನು ಥಾರ್, ಬ್ರೂಸ್ ಬ್ಯಾನರ್ ಮತ್ತು ಕ್ಯಾಪ್ಟನ್ ಅಮೆರಿಕ ಪಾತ್ರಗಳಲ್ಲಿ ತೋರಿಸಲಾಗಿದೆ.
ಇನ್ನು ಸಿನಿಮಾ ಎಂದ ಮೇಲೆ ಶತ್ರುಗಳು ಇದ್ದೇ ಇರುತ್ತಾರೆ, ಇದರಲ್ಲಿ ಶತ್ರುಗಳ ಪಾತ್ರಕ್ಕೆ ಪಿಎಂ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರ ಮುಖಗಳನ್ನು ತೋರಿಸಲಾಗಿದೆ. ಏಲಿಯನ್ಸ್ ಗಳನ್ನು ಹೇಗೆ ಸೋಲಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿಕ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಪಕ್ಷವನ್ನು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ವಿಡಿಯೋದಲ್ಲಿ ಅನ್ಯಗ್ರಹದ ಜೀವಿಗಳಂತೆ ಚಿತ್ರಸಿಲಾಗಿದೆ.
We will do whatever it takes to redeem our beloved state from the clutches of evil forces working against the interest of Punjab and its people. #CongressHiAyegi pic.twitter.com/6lVxqkN4VC
— Punjab Congress (@INCPunjab) January 24, 2022