ನವದೆಹಲಿ:( ಜ.26) B K Hari Prasad: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಡಿಕೆ ಶಿವಕುಮಾರ್ ಮಧ್ಯೆ ಮುಖ್ಯಮಂತ್ರಿ ಆಗಲು ತೀವ್ರ ಪೈಪೋಟಿ ಎದುರಾಗಿದೆ. ಈ ನಡುವೆ ಪಕ್ಷದ ಹಿರಿಯ ಮುಖಂಡರಾದ ಉತ್ತರ ಕರ್ನಾಟಕದ ಎಂಬಿ ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಲಾಗಿತ್ತು ಆದರೆ ಇಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಹಿರಿಯ ನಾಯಕ ಬಿ.ಕೆ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯದ ವಿಧಾನಪರಿಷತ್ ವಿರೋಧಪಕ್ಷದ ನಾಯಕರನ್ನಾಗಿ ಬಿಕೆ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಅನೇಕ ಕಾರಣಗಳು ಇವೆಯೆಂದು ಹೇಳಲಾಗಿದೆ. ಕಾಂಗ್ರೆಸ್ ಸಿದ್ಧಾಂತಗಳನ್ನು ಚಾಚುತಪ್ಪದೆ ಅನುಸರಿಸುತ್ತಿರುವ ಮುಖಂಡ ಹಾಗೂ ಬಿಜೆಪಿ ವಿರೋಧಿ. ಧರ್ಮದ ಹೆಸರಿನಲ್ಲಿ ನಡೆಸುವ ರಾಜಕಾರಣವನ್ನು ಇವರು ಬಹಿರಂಗವಾಗಿ ವಿರೋಧ ಮಾಡುತ್ತಾರೆ ಎಂದು ಹೇಳಲಾಗಿದ
ಒಕ್ಕಲಿಗ ಸಮುದಾಯದ ಕೆ ಗೋವಿಂದ್ ರಾಜ್ ಅವರನ್ನು ವಿಧಾನಪರಿಷತ್ ವಿರೋಧಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ಲಂಬಾಣಿ ಸಮುದಾಯದ ಪ್ರಕಾಶ ರಾತೋಡ್ ಅವರಿಗೆ ವಿಧಾನ ಪರಿಷತ್ತ ಮುಖ್ಯಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:Panjab Election:ಚುನಾವಣೆಗಾಗಿ ಸಿನಿಮೀಯ ಶೈಲಿಯಲ್ಲಿ ವಿಡಿಯೋ ಬಿಡುಗಡೆ: ವಿಡಿಯೋ ವೈರಲ್