ಅಮೈ ಮಹಾಲಿಂಗ ನಾಯ್ಕ್ ಅವರ ಬದುಕಿನ ಕಥೆ ಓದಿ
Amai Mahalinga Naik: (ಜ.26) ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಸಮಾನ್ಯ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಇಂಥವರ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಯೊಬ್ಬರ ಬಗ್ಗೆ ನೀವು ತಿಳಿಯಲೇಬೇಕು.
ಯಾವುದೇ ವಿದ್ಯಾಭ್ಯಾಸವಿಲ್ಲದೆ ಭೂಮಿಯಲ್ಲಿ ಬಂಗಾರವನ್ನೇ ಬೆಳೆದವರು, ಹಲವು ಬೆಳೆಗಳೊಂದಿಗೆ, ಪಶುಸಂಗೋಪನೆ, ಜೇನುಸಾಕಣೆ ಮಾಡುತ್ತಾ ಜೀವನವನ್ನು ಸಾಗಿಸಿದ ಇವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ, ಇವರು ಕುಡಿಯುವ ನೀರಿಗಾಗಿ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ.

ಇವರು ಮಾಡಿದ ಸಾಧನೆ ಏನು?
ಈಗಿನ ಕಾಲದಲ್ಲಿ ಇರುವ ಸೌಲಭ್ಯಗಳು, ಅಂದು ಇರಲಿಲ್ಲ ಅದರಲ್ಲೂ ಕೃಷಿಭೂಮಿ ಹೊಂದಿರುವವರಿಗೆ ಕೃಷಿಗೆ ನೀರು ಹಾಕಲು ಪಂಪುಗಳು, ಹಾಗೂ ಇನ್ನಿತರ ಯಾವುದೇ ಸೌಲಭ್ಯಗಳು ಇರಲಿಲ್ಲ. ಹಿಂದಿನ ಕಾಲದಲ್ಲಿ ಅವಲಂಬಿಸಿದ್ದ ಸುರಂಗದಲ್ಲಿ ವ್ಯವಸ್ಥೆಯಲ್ಲಿ ಕೃಷಿಯನ್ನು ಮಾಡುತ್ತಿದ್ದರು.
ಇದೇ ವ್ಯವಸ್ಥೆಯಲ್ಲಿ ವಿದ್ಯುತ ರಹಿತವಾಗಿ ಗುರುತ್ವಾಕರ್ಷಣೆಯ ಮೂಲಕ ಕೃಷಿಗೆ ತುಂತುರು ನೀರಾವರಿ ಹಾಗೂ ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಮಹಾಲಿಂಗ ನಾಯಕ್ ಅವರು ಒಬ್ಬರೇ 7 ಸುರಂಗಗಳನ್ನು ಕೊರೆದಿದ್ದಾರೆ.

40 ವರ್ಷಗಳ ಹಿಂದೆ ತಮ್ಮ ಸ್ವಂತ ಊರಿನ ಕೃಷಿಕರ ತೋಟಗಳಲ್ಲಿ ಕೆಲಸ ಮಾಡುವಾಗ, ಸ್ವಂತ ತೋಟವನ್ನು ಮಾಡುವ ಕನಸು ಕಂಡಿದ್ದರು. ಆದರೆ ಒಂದು ತುಂಡು ಭೂಮಿಯ ಇಲ್ಲದ ಅವರು, ಕನಸನ್ನ ನನಸು ಮಾಡಲು ಬಹಳಷ್ಟು ಶ್ರಮವಹಿಸಿದ್ದರು. ಭೂಮಾಲೀಕ ಆಮೈ ಮಹಾಬಲ ಭಟ್ಟರ ತೋಟದಲ್ಲಿ ದಿನಾನು ಕೂಲಿ ಕೆಲಸ ಮಾಡಿಕೊಂಡು ಇದ್ದರು. ಮಹಾಬಲ ಭಟ್ ಅವರು ಮಹಾಲಿಂಗ ಅವರಿಗೆ ಎರಡು ಎಕರೆ ಜಮೀನನ್ನು ನೀಡಲು ಒಪ್ಪಿಕೊಂಡಿದ್ದರು.
1978 ರಲ್ಲಿ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡು ಎಕರೆ ಗುಡ್ಡ ದರ್ಖಾಸ್ತು ರೂಪದಲ್ಲಿ ಸಿಕ್ಕಿತು. ಆ ಭೂಮಿಯಲ್ಲಿ ಮನೆ ಇರಲಿ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ಮಾಡುವುದು ಅಸಾಧ್ಯವಾಗಿತ್ತು. ಭವಿಷ್ಯ ರೂಪಿಸುವ ಉದ್ದೇಶದಿಂದ ಜಾಗವನ್ನು ಸಮತಟ್ಟು ಮಾಡಿ ಸಣ್ಣದೊಂದು ಗುಡಿಸಲನ್ನು ಕಟ್ಟಿಕೊಂಡಿದ್ದರು.
ಕುಡಿವ ನೀರಿಗಾಗಿ ಪಕ್ಕದ ಮನೆಯನ್ನು ಆಶ್ರಯಿಸಿದ್ದ ಇವರಿಗೆ, ಬಾವಿಯನ್ನು ತೊಡಿಸಲು ಸಹ ದುಡ್ಡಿರಲಿಲ್ಲ. ಹಾಗಾಗಿ ಏಕಾಂಗಿಯಾಗಿ ಸುರಂಗವನ್ನು ಕೊರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಅರ್ಧ ದಿನ ಕೂಲಿ ಕೆಲಸ ಮಾಡಿಕೊಂಡು ಉಳಿದ ದಿನ ಹಾಗೂ ಮಧ್ಯರಾತ್ರಿಯವರೆಗೂ ಸುರಂಗ ಕೊರೆಯುವ ಮೂಲಕ ನೀರನ್ನ ಹುಡುಕುವ ಪ್ರಯತ್ನ ಮಾಡಿದರು.

ಮೊದಲ ದಿನ 30 ಮೀಟರ್ ಕೊರೆದರೂ ನೀರು ಸಿಗಲಿಲ್ಲ,, ಹೀಗೆ ಪ್ರತಿದಿನ ಸುರಂಗಗಳನ್ನು ಕೊರೆದು ತಮ್ಮ ಕನಸನ್ನು ಕಾಣುತ್ತಿದ್ದರು. ಇವರ ಕೆಲಸವನ್ನು ನೋಡಿ ಹಲವಾರು ಗೇಲಿ ಮಾಡಿದ್ದರು. ಯಾರು ಏನೇ ಹೇಳಿದರೂ ತಮ್ಮ ಪ್ರಯತ್ನವನ್ನು ಬಿಡದೆ, ಕೆಲಸ ಮಾಡಿದ್ದರಿಂದ 25 ಮೀಟರ್ ಉದ್ದದ ಸುರಂಗದಲ್ಲಿ ಸಿಕ್ಕಿದ ನೀರಿನಲ್ಲಿ ಕೃಷಿ ಮಾಡುವುದು ಅಸಾಧ್ಯ ಎಂದು ಮತ್ತೆ 75 ಮೀಟರ್ ಉದ್ದದ ಸುರಂಗ ತೊಡುವ ಹೊತ್ತಿಗೆ ನೀರು ಸಿಕ್ಕಿತ್ತು.
ಸುರಂಗದ ನೀರನ್ನು ಸಂಗ್ರಹಿಸಲು ಮಾಡಲು ಮಣ್ಣಿನ ಬಾವಿಯನ್ನು ನಿರ್ಮಾಣ ಮಾಡಿದರು. ತೋಟ ಮಾಡುವ ಕನಸು ನನಸಾಯಿತು. ಇದೀಗ ಗುಡ್ಡವಿದ್ದ ಪ್ರದೇಶವು ಸಮತಟ್ಟಾಗಿ ಈಗ ಭತ್ತ, ಅಡಿಕೆ, ತೆಂಗು ಸೇರಿದಂತೆ ಬಾಳೆ ಕೃಷಿಯನ್ನು ಮಾಡುತ್ತಿದ್ದಾರೆ.
ಅಂದು ಇದ್ದ ಭೂಮಿ ಇದು ಹೇಗಿದೆ?
ಮಹಾಲಿಂಗ ನಾಯ್ಕ ಅವರು ಒಂದು ಎಕರೆಯಲ್ಲಿ ಭೂಮಿಯಲ್ಲಿ ಅಡಿಕೆ ತೆಂಗು ಬಾಳೆ ಕಾಳುಮೆಣಸು ಕೃಷಿಯ ನಾ ಮಾಡಿದ್ದಾರೆ. ಇನ್ನೊಂದು ಎಕರೆಯಲ್ಲಿ ಕಾಡು ಬೆಳೆಸಿದ್ದು, ಗೋಡಂಬಿಯ ಕೃಷಿ ಮಾಡುತ್ತಿದ್ದಾರೆ.

ಮಣ್ಣಿನ ಟ್ಯಾಂಕಿನಿಂದ ವಿದ್ಯುತ ಖರ್ಚಿಲ್ಲದೆ ಗುರುತ್ವಾಕರ್ಷಣೆಯ ಮೂಲಕ ಬೆಳೆಗಳಿಗೆ ನೀರನ್ನು ಹಾಕುತ್ತಿದ್ದಾರೆ. ಹಟ್ಟಿಗೊಬ್ಬರ, ಕಾಂಪೋಸ್ಟ್ ಗೊಬ್ಬರ ಬಿಟ್ಟು ಬೇರೆ ಯಾವ ಗೊಬ್ಬರದ ಬಗ್ಗೆ ಮಾಹಿತಿ ಸಿಗಲಿಲ್ಲ. ಜಮೀನಿನಲ್ಲಿರುವ ಇಂಗುಗುಂಡಿಗಳ ಮೂಲಕ ನೀರು ಕೊಯ್ಲು ಮಾಡುತ್ತಾರೆ.
ನಾಲ್ಕು ವರ್ಷಗಳ ಹಿಂದೆ ಎರಡು ಬೋರ್ವೆಲ್ ಅನ್ನು ತೆಗೆಸಿದ್ದರು. ಬೋರ್ವೆಲ್ 400 ಅಡಿ ಸಾಗಿದ್ದರೂ ನೀರು ಸಿಕ್ಕಲಿಲ್ಲ ಹಾಗಾಗಿ ಎರಡನೆ ಬೋರ್ ನಲ್ಲಿ 372 ತಾಲೂಕು ಹೊತ್ತಿಗೆ ಒಂದು ಇಂಚು ನೀರು ಸಿಕ್ಕಿದೆ.
ಕಾಲ್ ಬಂದಿತ್ತು:
ಮಹಾಲಿಂಗ ನಾಯ್ಕ ಅವರಿಗೆ ಮಧ್ಯಾಹ್ನ ಫೋನ್ ಬಂದಿತ್ತು, ಹಿಂದಿಯನ್ನು ಇಂಗ್ಲೀಷಿನಲ್ಲಿ ಮಾತನಾಡಿದರು ಆದರೆ ನನಗೇನು ಅರ್ಥವಾಗಲಿಲ್ಲ. 1 ಗಂಟೆಗೆ ವಿಟ್ಲದ ಕೃಷಿ ಇಲಾಖೆಯ ಅಧಿಕಾರಿಗಳು ಪ್ರಶಸ್ತಿ ಮಾಹಿತಿಯನ್ನು ನೀಡಿದರು. ಅಂದೇ ನನಗೆ ಗೊತ್ತಾಗಿದ್ದು ಎಂದು ಹೇಳಿದ್ದಾರೆ
ದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕೆಂದು ಹೇಳಿದ್ದಾರೆ, ಪ್ರಶಸ್ತಿ ಪಡೆಯುವಂತಹ ಭಾಗ್ಯ ಸಿಕ್ಕಿದೆ ಇದು ದೇವರ ಅನುಗ್ರಹ ಎಂದು ಹೇಳಿದ್ದಾರೆ ಮಹಾಲಿಂಗ ನಾಯ್ಕ.