Padma Award: (ಜ.25) ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುಂದಿನ ದಿನ ಸಲಾಗುತ್ತದೆ. ಆದ್ದರಿಂದ ಇಂದು ಪದ್ಮಶ್ರೀ ಪ್ರಶಸ್ತಿಯಿಂದ ಘೋಷಣೆ ಮಾಡಲಾಗಿದೆ. ಪ್ರಶಸ್ತಿಗಳ ಪಟ್ಟಿಯಲ್ಲಿ ಇತ್ತೀಚಿಗೆ ನಿಧನರಾದ ಶಸ್ತ್ರಾಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಕಾಂಗ್ರೆಸ್ಸ ನಾಯಕ ಗುಲಾಮ ನಬಿ ಅಜಾದ್ ಅವರಿಗೆ ಪದ್ಮಭೂಷಣ ಪುರಸ್ಕಾರ, ನಟ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪುರಸ್ಕಾರ, ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ 128 ಸಾಧಕರಿಗೆ ಪದ್ಮ ಪುರಸ್ಕಾರ ನೀಡಲಾಗಿದೆ.
ಪದ್ಮ ಪ್ರಶಸ್ತಿಗಳನ್ನು ಶಿಕ್ಷಣ ಕಲೆ ಸಾಹಿತ್ಯ ವಿಜ್ಞಾನ ನಟನೆ ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಾಗಿ ಭಾರತದ ನಾಗರಿಕರಿಗೆ ನೀಡಲಾಗುತ್ತದೆ.
ಕರ್ನಾಟಕದಲ್ಲಿ ಐವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.
ಶ್ರೀ ಸುಬ್ಬಣ್ಣ ಅಯ್ಯಪ್ಪನ್ – ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರ, ಹೆಚ್ಆರ್ ಕೇಶವಮೂರ್ತಿ – ಕಲಾಕ್ಷೇತ್ರ, ಅಬ್ದುಲ್ ಖಾದರ್ ನಡಕಟ್ಟಿನ್ ನಾವಿನ್ಯತೆ ಕ್ಷೇತ್ರ, ಅಮೈ ಮಹಾಲಿಂಗ ನಾಯ್ಕ್- ಕೃಷಿ ಕ್ಷೇತ್ರ ಡಾ. ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಾಶ್ರೀ ಪದ್ಮಶ್ರೀ ಪ್ರಶಸ್ತಿ. ಈ ಬಾರಿಯೂ ಪದ್ಮವಿಭೂಷಣ ಪದ್ಮಭೂಷಣ ಪ್ರಶಸ್ತಿಗಳು ಕರ್ನಾಟಕಕ್ಕೆ ಲಭಿಸದಿರುವುದು ಬೇಸರದ ಸಂಗತಿಯಾಗಿದೆ.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ,ಗೂಗಲ್ ಸಿಇಒ ಸುಂದರ್ ಪಿಚೈ, SII ಎಂಡಿ ಪೂನಾವಾಲಾ, ಕೊರೋನಾ ಲಸಿಕೆ ಕೋವಾಕ್ಸೀನ್ ಯತಾರಕ ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ, ಸಹ ಸಂಸ್ಥಾಪಕಿ ಸುಚೇತಾ ಎಲ್ಲಾ ಪದ್ಮಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾಋfಯ ಪದ್ಮಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ.
ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ, ಪ್ರಮೋದ್ ಭಗತ್, ವಂದನಾ ಕಟಾರಿಯಾ, ಗಾಯಕ ಸೋನು ನಿಗಮ್ ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿದ್ದಾರೆ.