ನವದೆಹಲಿ:(ಜ.25): Republic Day: ದೇಶದ 73ನೇ ಗಣರಾಜ್ಯೋತ್ಸವದ ಸಂಭ್ರಮದ ಹಿನ್ನೆಲೆ ಇಂದು ರಾತ್ರಿ 7 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಗಣರಾಜ್ಯೋತ್ಸವ ದಿನವು ಬ್ರಿಟಿಷ್ ಆಡಳಿತದ ವಿರುದ್ಧದ ಮೊದಲ ಕ್ರಾಂತಿಯ ಸೂಚಕವಾಗಿದೆ.
ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದರ ನಡುವೆ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ಸೇರಿದಂತೆ ಜನವರಿ, 26ರಂದು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಹಬ್ಬದ ರೀತಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದರ ನಡುವೆ ಈ ವರ್ಷ ಆಚರಿಸುತ್ತಿರುವ 73ನೇ ಗಣರಾಜ್ಯೋತ್ಸವವನ್ನು ಎಂದಿಗಿಂತ ವಿಭಿನ್ನ ಮತ್ತು ವಿಶೇಷವಾಗಿ ಪ್ರಸಾರ ಮಾಡುವುದಕ್ಕೆ ದೂರದರ್ಶನದ ಸಿದ್ಧತೆ ನಡೆಸಿದೆ.

ಸಂವಿಧಾನ ಅಂಗೀಕರಿಸಿದ ದಿನ:
1950ರ ಜನವರಿ 26ರಂದು ಭಾರತವು ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ನವದೆಹಲಿಯಲ್ಲಿ ಈ ವರ್ಷ ಗಣರಾಜ್ಯೋತ್ಸವದ ಕವರೇಜ್‌ಗಾಗಿ ರಾಷ್ಟ್ರಪತಿ ಭವನದಿಂದ ರಾಜ್‌ಪಥ್ ಮೂಲಕ ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದವರೆಗೆ ಸಂಪೂರ್ಣ ವಿಸ್ತಾರವಾಗಿ ವ್ಯವಸ್ಥೆ ಮಾಡಲಾಗಿದೆ.

ನವದೆಹಲಿಯಲ್ಲಿ ಈ ವರ್ಷ ಗಣರಾಜ್ಯೋತ್ಸವದ ಕವರೇಜ್‌ಗಾಗಿ ರಾಷ್ಟ್ರಪತಿ ಭವನದಿಂದ ರಾಜ್‌ಪಥ್ ಮೂಲಕ ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದವರೆಗೆ ಸಂಪೂರ್ಣ ವಿಸ್ತಾರವಾಗಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 59 ಕ್ಯಾಮೆರಾಗಳು ಮತ್ತು 160ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.
75 ವರ್ಷಗಳ ಸ್ಮರಣಾರ್ಥವಾಗಿ 75 ವಿಮಾನಗಳು ವಿಶೇಷ ರಚನೆಯೊಂದಿಗೆ ಆಕಾಶದಲ್ಲಿ ಹಾರಾಟ ನಡೆಸಲಿವೆ.ದೆಹಲಿಯಲ್ಲಿ ಎಲ್ಲೆಡೆ ಪೊಲೀಸ್ ಸರ್ಪಗಾವಲು ಏರ್ಪಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಒಟ್ಟು 27,723 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಫ್ಲೈ ಪಾಸ್ಟ್ ಸೇನೆ ಪ್ರದರ್ಶನ:
ಈವರೆಗೆ ರಾಜ್‌ಪಥ್‌ನಲ್ಲಿ ನಡೆದ ಎಲ್ಲ ಪರೇಡ್‌ಗಳಿಗಿಂತ ಈ ಬಾರಿ ಅತ್ಯಂತ ಭವ್ಯವಾದ ಫ್ಲೈ ಪಾಸ್ಟ್ ಸೇನೆ ಪ್ರದರ್ಶನ ಮಾಡಲಿದೆ. 17 ಜಾಗ್ವಾರ್ ವಿಮಾನಗಳು 75 ನೇ ವರ್ಷದ ಅಮೃತ ಮಹೋತ್ಸವದ ಆಕಾರವನ್ನು ಆಗಸದಲ್ಲಿ ರೂಪಿಸಲಿದೆ ಎಂದು ವಾಯುಪಡೆಯ ಪ್ರೊ ವಿಂಗ್ ಕಮಾಂಡರ್ ಇಂದ್ರನೀಲ್ ನಂದಿ ಎಂದು ತಿಳಿಸಿದ್ದಾರೆ
ಒಟ್ಟು ಪಡೆಗಳಲ್ಲಿ 71 ಉಪ ಪೊಲೀಸ್ ಆಯುಕ್ತರು (ಡಿಸಿಪಿಗಳು), 213 ಎಸಿಪಿಗಳು, 713 ಇನ್ಸ್‌ಪೆಕ್ಟರ್‌ಗಳು, ದೆಹಲಿ ಪೊಲೀಸ್ ಕಮಾಂಡೋಗಳು, ಸಶಸ್ತ್ರ ಬೆಟಾಲಿಯನ್ ಅಧಿಕಾರಿಗಳು ಮತ್ತು ಜವಾನರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 65 ಕಂಪನಿಗಳು ಸೇರಿವೆ.
ಈ ಬಾರಿ ಗಣರಾಜೋತ್ಸವಕ್ಕೆ ವಿಶೇಷವಾಗಿ ಕೊರೊನಾ ಜಾಗೃತಿ ಮೂಡಿಸಲು ಒತ್ತು ನೀಡಲಾಗುತ್ತದೆ. ಗಣರಾಜೋತ್ಸವ ಆಹ್ವಾನ ಪತ್ರಿಕೆಯಲ್ಲಿ ಔಷಧೀಯ ಬೀಜಗಳಿವೆ. ಇವುಗಳನ್ನು ಹೂವಿನ ಮಡಕೆ ಅಥವಾ ಉದ್ಯಾನದಲ್ಲಿ ಬಿತ್ತಬಹುದು. ಜೊತೆಗೆ ಈ ಬಾರಿ ಡ್ರೋನ್ ಪ್ರದರ್ಶನ ನಡೆಯಲಿದೆ. ಸಾವಿರ ಡ್ರೋನ್‌ಗಳು ಪ್ರದರ್ಶನ ನೀಡಲಿವೆ. ಚೀನಾ, ರಷ್ಯಾ ಹಾಗೂ ಯುನೈಟೆಡ್ ಕಿಂಗ್ ಡಮ್ ನಂತರ ನಾಲ್ಕನೇ ದೇಶವಾಗಿ ಭಾರತದಲ್ಲಿ ಡ್ರೋನ್ ಪ್ರದರ್ಶನ ನಡೆಯಲಿದೆ.
ಇದನ್ನೂ ಓದಿ: Snowfall:ಕಾಬೂಲ್ ನಲ್ಲಿ ಭಾರಿ ಹಿಮಪಾತ: ಹಲವರ ಜೀವಹಾನಿ