ಬೆಂಗಳೂರು: (ಜ.24) Trafic Rules: ನಗರದಲ್ಲಿ ಎಲ್ಲೆಂದರಲ್ಲಿ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಫೈನ್ ಹಾಕುವ ಮೂಲಕ ಅಥವಾ ವಾಹನ ಚಾಲನೆ ಮಾಡುವ ಮೂಲಕ ಬಿಸಿ ಮುಟ್ಟಿಸುತ್ತಿದ್ದರು.ಆದರೆ ವಾಹನಗಳಲ್ಲದೆ ರಸ್ತೆ ದಾಟುವ ಪಾದಚಾರಿಗಳಿಗೂ ಇನ್ನೂ ಮುಂದೆ ಫೈನ್ ಬೀಳುತ್ತೆ.
ರಸ್ತೆಯಲ್ಲಿ ಇರುವ ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದ್ರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಈ ರೋಲ್ಸ್ ಜಾರಿಗೆ ಬರಲಿದೆ.

ಹೊಸ ವರ್ಷಕ್ಕೆ ಹೊಸ ಐಡಿಯಾ:
ಹಿಂದೆಲ್ಲಾ ರಸ್ತೆಯನ್ನು ದಾಟಲು ಝೀಬ್ರಾ ಕ್ರಾಸ್ ಬಿಟ್ಟು ಬೇರೆ ರಸ್ತೆ ದಾಟುತ್ತಿದ್ದ ಪಾದಚಾರಿಗಳು ಬಲಿಯಾಗಿರುವ ಉದಾಹರಣೆಗಳು ನಡೆದಿದೆ. ಕಳೆದ ವರ್ಷ ಜೀಬ್ರಾ ಕ್ರಾಸ್ ಬಿಟ್ಟು ಬೇರೆ ರಸ್ತೆ ದಾಟುತ್ತಿದ್ದ 69 ಪಾದಚಾರಿಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ಪಾದಚಾರಿಗಳಿಗೆ ಇರುವ ಜೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ಪಾದಚಾರಿಗಳು ರಸ್ತೆ ದಾಟಿದರೆ ಹತ್ತು ರೂಪಾಯಿ ದಂಡ ವಿಧಿಸುವ ಯೋಜನೆ ಹಾಕಿಕೊಂಡಿದ್ದಾರೆ.

ವಾಹನ ಸಂಚಾರಿಗಳಿಗೆ ವಾಹನ ಓಡಿಸಲು ರಸ್ತೆಯೇ ಸರಿ ಇಲ್ಲದಿರುವಾಗ ಇನ್ನೂ ಪಾದಚಾರಿಗಳಿಗೆ ಜೀಬ್ರಾ ಕ್ರಾಸ್ ಎಲ್ಲಿದೆ ಎಂದು ಹಲವರಿಗೆ ಪ್ರಶ್ನೆ ಮೂಡುವುದು ಸಹಜ.
ನಗರದ ಎಷ್ಟೋ ರಸ್ತೆಗಳಲ್ಲಿ ಸರಿಯಾದ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆನೇ ಇಲ್ಲ. ಪಾದಚಾರಿ ಮಾರ್ಗಗಳು ಕೂಡ ಸರಿಯಾಗಿಲ್ಲ. ಹೀಗಿರುವಾಗ ಪಾದಾಚಾರಿಗಳಿಗೆ ಫೈನ್ ಹಾಕುವ ಕಾರ್ಯ ಹೇಗೆ ಮಾಡುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.