ಬೆಂಗಳೂರು: Persian Cat: ಬೆಂಗಳೂರು ನಗರದಲ್ಲಿ ಅಪರೂಪದ ಪ್ರಕರಣವೊಂದು ದಾಖಲಾಗಿದೆ. ಬೆಂಗಳೂರಿನ ತಿಲಕ್ ನಗರಲ್ಲಿ ಬೆಕ್ಕು ಕಳ್ಳತನ ಆಗಿದೆ ಎಂದು ಮಾಲೀಕರು ದೂರು ನೀಡಿದ್ದಾರೆ.
ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಟಾ ಶರೀಫ್ ಎಂಬುವವರು ಪರ್ಷಿಯನ್ ಬೆಕ್ಕು ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. ಜ.15 ರಂದು ದುಬಾರಿ ಬೆಲೆಯ ಬೆಕ್ಕು ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ ಬೆಕ್ಕನ್ನು ಹುಡುಕಿಕೊಟ್ಟವರಿಗೆ 35000 ರೂಪಾಯಿ ಕೊಡುವುದಾಗಿ ಮಾಲೀಕರು ಪ್ರಕಟಣೆ ಹೊರಡಿಸಿದ್ದಾರೆ. ಇನ್ನೂ ಬೆಕ್ಕಿಗಾಗಿ ತಿಲಕ್ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ

ಬಿಳಿ ಬಣ್ಣದ ಪರ್ಷಿಯನ್ ಬೆಕ್ಕು ಕಾಣೆಯಾಗಿದೆ, ಕೊನೆಯದಾಗಿ #72 ಜಯನಗರ ಮೂರನೇ ಹಂತ, ಮೂರನೇ ಅಡ್ಡರಸ್ತೆ, ಆರ್ಬಿಐ ಬಡಾವಣೆ ಬೆಂಗಳೂರು, ಬೈರಸಂದ್ರ ಕೆರೆಯ ಹತ್ತಿರ ಕೊನೆಯದಾಗಿ ನೋಡಲಾಗಿತ್ತು ಎಂದು ತಿಳಿಸಿದ್ದಾರೆ. ಹುಡುಕಿಕೊಟ್ಟವರಿಗೆ 35 ಸಾವಿರ ಬಹುಮಾನ ನೀಡುವುದಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Parakram Diwas: ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ