Parakram diwas: (ಜ.22) ಸ್ವತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ಬ್ರಿಟಿಷರಿಂದ ದೇಶವನ್ನ ಮುಕ್ತಿಗೊಳಿಸಲು ಶ್ರಮಿಸಿದ್ದ ಇವರು ಜನಿಸಿದ್ದು ಒರಿಸ್ಸಾದ ಬಂಗಾಳಿ ಕುಟುಂಬದಲ್ಲಿ. ಶ್ರೀಮಂತ ಕುಟುಂಬದಿಂದ ಬಂದವರು ತಮ್ಮ ದೇಶವನ್ನು ಪ್ರೀತಿಸುತ್ತಾ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಅರ್ಪಿಸಿದ್ದರು.

ಜನವರಿ 23, 1897 ರಂದು ಸುಭಾಷ್ಚಂದ್ರಬೋಸ್ರ ಕಟಕ್ ಒರಿಸ್ಸಾದಲ್ಲಿ ಜನಿಸಿದರು. ತಾಯಿ ಪ್ರಭಾವತಿ ತಂದೆ ಜನಕೀನಾಥ ಬೋಸ್ ಇವರಿಗೆ ಒಟ್ಟು 7 ಸಹೋದರರು ಹಾಗೂ 6 ಸಹೋದರಿಯರು ಇದ್ದರು. ತಂದೆ ಜನಕೀನಾಥ ಅವರು ಪ್ರಸಿದ್ಧ ವಕೀಲರಾಗಿದ್ದರು.
ಬಾಲ್ಯದಿಂದಲೂ ಅಧ್ಯಯನದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಕಲ್ಕತ್ತಾದಲ್ಲಿರುವ ಪ್ರೆಸಿಡೆನ್ಸಿ ತತ್ವಶಾಸ್ತ್ರದಲ್ಲಿ ಬಿಎ ಅಧ್ಯಯನ ಮಾಡುತ್ತಿರುವಾಗಲೇ ಅದೇ ಕಾಲೇಜಿನ ಇಂಗ್ಲಿಷ ಪ್ರಾಧ್ಯಾಪಕರಿಂದ ಭಾರತೀಯರ ಕಿರುಕುಳವನ್ನು ವಿರೋಧಿಸುತ್ತಿದ್ದರು. ಇದೇ ಸಮಯದಲ್ಲಿ ಜಾತಿವಾದ ವಿಷಯವನ್ನು ಬಹಳಷ್ಟು ತರಲಾಗಿತ್ತು ಅವರ ಮನಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಪ್ರಾರಂಭವಾದದ್ದು.

ಅಂದಿನ ಸಮಯದಲ್ಲಿ ಬ್ರಿಟಿಷ್ ಆಡಳಿತ ಇರುವ ಕಾರಣ ಭಾರತೀಯರು ನಾಗರಿಕ ಸೇವೆಗೆ ಹೋಗುವುದು ತುಂಬಾ ಕಷ್ಟವಾಗಿತ್ತು. ಭಾರತೀಯ ನಾಗರಿಕ ಸೇವೆಗೆ ಸಿದ್ಧತೆಗಾಗಿ ಇಂಗ್ಲೆಂಡಿಗೆ ಅವರ ತಂದೆ ಕಳುಹಿಸಿದರು. ಪರೀಕ್ಷೆಯಲ್ಲಿ ನೇತಾಜಿಯವರು ನಾಲ್ಕನೇ ಸ್ಥಾನ ಪಡೆದು ಇಂಗ್ಲಿಷ್ ಭಾಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದರು.
ನೇತಾಜಿ ಅವರು ಸ್ವಾಮಿ ವಿವೇಕಾನಂದ ಅವರನ್ನು ಗುರುಗಳೆಂದು ಪರಿಗಣಿಸಿ ಅವರನ್ನು ಅನುಸರಿಸಿದರು.
ದೇಶದ ಬಗ್ಗೆ ಅಪಾರ ಪ್ರೀತಿ ಇದ್ದ ಕಾರಣ 1921 ರಲ್ಲಿ ಭಾರತೀಯ ನಾಗರಿಕ ಸೇವೆ ಕೆಲಸವನ್ನು ನಿರಾಕರಿಸಿದರು.
ಭಾರತಕ್ಕೆ ಮರಳಿದ ನೇತಾಜಿ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸೇರಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಲ್ಕತ್ತಾ ಕಾಂಗ್ರೆಸ್ ಪಕ್ಷದ ನಾಯಕರಾದರು.

1922 ರಲ್ಲೀ ಕಾಂಗ್ರೆಸ್ಸ ತೊರೆದು ತಮ್ಮದೇ ಆದ ಸ್ವರಾಜ್ ಪಕ್ಷವನ್ನು ರಚಿಸಿದರು.1942 ರಲ್ಲಿ, ನಾಯಕ ಸುಭಾಷ್ ಚಂದ್ರ ಬೋಸ್ ಅವರು ಹಿಟ್ಲರನ ಬಳಿಗೆ ಹೋಗಿ ಭಾರತವನ್ನು ಸ್ವತಂತ್ರಗೊಳಿಸಲು ಪ್ರಸ್ತಾಪಿಸಿದರು, ಆದರೆ ಹಿಟ್ಲರ್ ಭಾರತವನ್ನು ಸ್ವತಂತ್ರಗೊಳಿಸಲು ಆಸಕ್ತಿ ಹೊಂದಿರಲಿಲ್ಲ ಮತ್ತು ನೇತಾಜಿಗೆ ಯಾವುದೇ ಸ್ಪಷ್ಟ ಭರವಸೆಯನ್ನು ನೀಡಲಿಲ್ಲ.
ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಹೃದಯ ಕದಡುವ ದೃಶ್ಯದಿಂದ ನೇತಾಜಿ ಬಹಳವಾಗಿ ತೊಂದರೆಗೀಡಾದರು ಮತ್ತು ನಂತರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

ಬ್ರಿಟಿಷರಿಗೆ ತಿರುಗೇಟು ಕೊಡಲು ಆಜಾದ್ ಹಿಂದ್ ಫೌಜ್ ಎಂಬ ಮಿಲಿಟರಿ ರೆಜಿಮೆಂಟ್ ರಚಿಸಿದ್ದರು. ರಾಣಿ ಝಾನ್ಸಿ ಹೆಸರಿನಲ್ಲಿ ಮಹಿಳಾ ರೆಜಿಮೆಂಟ್ ಕೂಡ ರೂಪಿಸಿದ್ದರು. ತಮ್ಮ ವಿಭಿನ್ನ ಮಾದರಿಯ ಸ್ವಾತಂತ್ರ್ಯ ಹೋರಾಟದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಲಕ್ಷಾಂತರ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಜನ್ಮದಿನವನ್ನು 2021ರಿಂದ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ.