IAS Officers Posting: (ಜ.22) ಭಾರತೀಯ ನಾಗರಿಕ ಸೇವೆ ಅಧಿಕಾರಿಗಳ ಕೇಂದ್ರೀಯ ನಿಯೋಜನೆಯ ನಿಯಮದ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಐಎಎಸ್ ಅಧಿಕಾರಿಗಳ ಕೇಂದ್ರಿಯ ನಿಯೋಜನೆಯ ನಿಯಮದಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಮುಂದಾಗಿದ್ದು, ನಿಯೋಜನೆಯಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.ಇದೇ ವಿಚಾರವಾಗಿ ಬಿಕ್ಕಟ್ಟು ಮೂಡಿದೆ.
ಮೊದಲಿದ್ದ ನಿಯಮವೇನು?
ಭಾರತೀಯ ಆಡಳಿತ ಸೇವೆಯಲ್ಲಿ ಮೊದಲಿದ್ದ ನಿಯಮದ ಪ್ರಕಾರ, ಐಎಎಎಸ್ ರೂಲ್ಸ್ 1954 , ರೂಲ್ 6(1) 1969ರ ಮೇ ತಿಂಗಳಲ್ಲಿ ಸೇರ್ಪಡೆಗೊಂಡಿದೆ. ಇದರ ಪ್ರಕಾರದಂತೆ ಸಂಬಂಧಿತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಸರ್ಕಾರದ ಒಪ್ಪಿಗೆಯ ಮೇರೆಗೆ ಒಬ್ಬ ಕೇಡ ಅಧಿಕಾರಿಗಳು ಕೇಂದ್ರ ಸರ್ಕಾರ ಅಥವಾ ಬೇರೊಂದು ರಾಜ್ಯ ಸರ್ಕಾರದ ಅಧೀನದಲ್ಲಿ ಅಥವಾ ಕಂಪನಿ, ಸಂಗಾತ ವ್ಯಕ್ತಿಗಳ ಸಂಸ್ಥೆಯ ಅಧೀನದಲ್ಲಿ ಸೇವೆಗೆ ನಿಯೋಜಿಸಬಹುದು.
ಅದು ಸಂಘಟಿತ ವಾಗಿರಲಿ ಅಥವಾ ಸಂಘಟಿತವಾಗದಿರಲಿ ಅಥವಾ ಕೇಂದ್ರ ಸರ್ಕಾರದಿಂದ ಅಥವಾ ಇನ್ನೊಂದು ರಾಜ್ಯ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತದೆ.ಯಾವುದೇ ಭಿನ್ನಾಭಿಪ್ರಾಯವಿದ್ದರೆ ವಿಷಯವನ್ನು ಕೇಂದ್ರ ಸರ್ಕಾರವೇ ಅಂತಿಮ ನಿರ್ಧರಿಸುತ್ತದೆ. ಸಂಬಂಧಪಟ್ಟ ರಾಜ್ಯ ಸರಕಾರಗಳ ರಾಜ್ಯಸರ್ಕಾರಗಳು ಕೇಂದ್ರಸರ್ಕಾರದ ನಿರ್ಧಾರವನ್ನು ಜಾರಿಗೆ ತರುತ್ತೇವೆ ಎಂಬ ನಿಯಮವಿದೆ.

ಬದಲಾವಣೆ ಮಾಡಬೇಕಾಗಿರುವ ನಿಯಮವೇನು?
ಕಳೆದ ಡಿಸೆಂಬರ್ 20ರಂದು ಡಿಪಾರ್ಟ್ಮೆಂಟ್ ಆಫ್ ಪರ್ಸೇನೆಲ್ ಅಂಡ್ ಟ್ರೈನಿಂಗ್ ರಾಜ್ಯಸರ್ಕಾರಗಳಿಗೆ ಬರೆದ ಪತ್ರ ಬರೆದಿತ್ತು. ವಿವಿಧ ರಾಜ್ಯ ಜಂಟಿ ಕೇಡರ್ ಕೇಂದ್ರೀಯ ನಿಯೋಜನೆಗೆ ಮೀಸಲಿನ ಭಾಗವಾಗಿ ಕೇಂದ್ರ ಸರ್ಕಾರದ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನೀಡುತ್ತಿಲ್ಲ. ಇದರ ಪರಿಣಾಮವಾಗಿ ಕೇಂದ್ರದ ಡೆಪ್ಯೂಟೇಶನ್ ಗೆ ಲಭ್ಯವಿರುವ ಅಧಿಕಾರಿಗಳ ಸಂಖ್ಯೆ ಕೇಂದ್ರದಲ್ಲಿನ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ನಿಯಮ 6(1) ರಲ್ಲಿ ಹೆಚ್ಚುವರಿ ಷರತ್ತನ್ನು ಸೇರಿಸುವ ಪ್ರಸ್ತಾಪವಿದ್ದು, ನಿಯಮ 4(1) ರಲ್ಲಿ ಕೇಂದ್ರ ಸರ್ಕಾರ ನಿಯೋಜನೆಗಾಗಿ ಪ್ರತಿ ರಾಜ್ಯ ಸರ್ಕಾರವು ಒದಗಿಸಬೇಕಾಗಿ ಇರುವ ಅಧಿಕಾರಿಗಳು ಯಾವ ಸ್ತರದವರು ಎಂಬುದನ್ನು ಉಲ್ಲೇಖಿಸಲಾಗಿದೆ.
ನಿರ್ದಿಷ್ಟ ಸಮಯದಲ್ಲಿ ರಾಜ್ಯದ ಒಟ್ಟು ಅಧಿಕೃತ ಸಾಮರ್ಥ್ಯಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರದಲ್ಲಿ ಲಭ್ಯವಿರುವ ಅಧಿಕಾರಿಗಳ ಸಂಖ್ಯೆಗೆ ಅನುಗುಣವಾಗಿ ಹೊಂದಿಸಲಾಗುತ್ತದೆ.
ಕೇಂದ್ರ ಸರ್ಕಾರಕ್ಕೆ ನಿಯೋಜಿಸ ಬೇಕಾಗಿರುವ ಅಧಿಕಾರಿಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯ ಸರ್ಕಾರದೊಂದಿಗೆ ಚರ್ಚೆ ಮಾಡಿ ನಿರ್ಧರಿಸುತ್ತದೆ.
ಕೇಂದ್ರದ ಸೇವೆಗೆ, ಅವರ ಸೇವೆಯ ಅಗತ್ಯ ಇದ್ದಾಗ ಅವರನ್ನು ನಿಯೋಜಿಸುವ ಪೂರ್ಣ ಅಧಿಕಾರ ಕೇಂದ್ರಕ್ಕೆ ಇರುತ್ತದೆ ಎಂಬ ಅಂಶವನ್ನು ಸೇರಿಸಲಾಗಿದೆ. ಐಎಎಸ್ ಅಧಿಕಾರಿಗಳನ್ನು ಕೇಂದ್ರೀಯ ಸೇವೆಗೆ ನಿಶ್ಚಿತ ದ ಸಮಯದೊಂದಿಗೆ ಕಳುಹಿಸದೆ ಇದ್ದಲ್ಲಿ, ಅವರನ್ನು ಕರೆಸಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ ಎಂಬುದು ತಿದ್ದುಪಡಿಯಲ್ಲಿ ಉಲ್ಲೇಖವಾಗಿದೆ.
ಅಧಿಕಾರಿಗಳ ಹುದ್ದೆ ಹಾಗೂ ಕೊಟ್ಟಿರುವ ಸಂಖ್ಯೆಗಳ ಪ್ರಕಾರ, 6553 ಐಎಎಸ್ ಅಧಿಕಾರಿಗಳ ಹುದ್ದೆ ಇದ್ದು ಈ ಪೈಕಿ 5104 ಐಎಎಸ್ ಅಧಿಕಾರಿಗಳ ಸಂಖ್ಯೆ ಇದೆ. 1440 ಖಾಲಿ ಇರುವ ಐಎಎಸ್ ಅಧಿಕಾರಿಗಳ ಹುದ್ದೆ, 458 ಕೇಂದ್ರೀಯ ನಿಯೋಜನೆಯಲ್ಲಿರುವ ಐಎಎಸ್ ಅಧಿಕಾರಿಗಳ ಸಂಖ್ಯೆ.

ಪಶ್ಚಿಮ ಬಂಗಾಳ ಸಿಎಂ ಪತ್ರ:
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಮೇಘಾಲಯ ರಾಜ್ಯಗಳು ಐಎಎಸ್ ಅಧಿಕಾರಿಗಳ ಯೋಜನೆಯ ನಿಮ್ಮದಾ ವಿರುದ್ಧ ವಿರೋಧ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಭಾರತೀಯ ಆಡಳಿತ ಸೇವೆಯ ಸಿಬ್ಬಂದಿಗಳ ನಿಯಮವನ್ನು ತಿದ್ದುಪಡಿ ಮಾಡುವುದರ ಮೂಲಕ ರಾಜ್ಯಗಳ ಆಡಳಿತಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ. ಇದನ್ನು ವಿರೋಧಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ.
ರಾಜ್ಯಗಳಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ ಇದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಇದಕ್ಕೂ ಮೊದಲು ಪ್ರತಿಪಕ್ಷಗಳ ಜೊತೆ ಚರ್ಚೆ ನಡೆಸಿ ಪತ್ರಬರೆಯಲು ಒತ್ತಾಯಿಸಿದ್ದಾರೆ. ತಿದ್ದುಪಡಿಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಬೇಕೆಂದಾಗ ಕೇಂದ್ರಕ್ಕೆ ಕರೆಸಿಕೊಳ್ಳುವ ಅಥವಾ ಬೇಡವಾದ ರಾಜ್ಯಗಳಿಗ ವಾಪಸು ಕಳಿಸುವ ಪ್ರಸ್ತಾಪ ಇದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದರ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ. ಸಹಕಾರಿ ಫೆಡರಲಿಸಂ ಆಶ್ರಯಕ್ಕೆ ವಿರೋಧವಾದ ಪ್ರಸ್ತಾವನೆ ಯಾಗಿದ್ದು, ಪ್ರಸ್ತಾಪಿತ ತಿದ್ದುಪಡಿ ಮೂಲಕ ಅಧಿಕಾರಿಗಳನ್ನು ಬಲವಂತವಾಗಿ ಕೇಂದ್ರೀಯ ನಿಯೋಜನೆಗೆ ಒಳಪಡಿಸಿದರೆ ರಾಜ್ಯದ ಆಡಳಿತ ಗಳ ಮೇಲೆ ಪರಿಣಾಮ ಉಂಟಾಗಲಿದೆ. ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯದ ಆಡಳಿತ ನಡೆಸುವುದು ಕಷ್ಟವಾಗಿದೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಯಾವಾಗ ಬೇಕೆಂದರಲ್ಲಿ ವಾಪಸ್ ಕರೆಸಿಕೊಳ್ಳುತ್ತಿದೆ ಎಂಬ ಸುಳಿವು ರಾಜ್ಯಗಳಿಗೆ ಇರುವುದಿಲ್ಲ ಎಂದು ಹೇಳಿದ್ದಾರೆ.