High Heels: (ಜ.22) ಈಗಿನ ಕಾಲಕ್ಕೆ ತಕ್ಕಂತೆ ಯುವತಿಯರು ಫ್ಯಾಶನ್ ವಿಷಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಬಟ್ಟೆಯಿಂದ ಹಿಡಿದು ಮೇಕಪ್, ಬ್ಯಾಗ್, ಜಿವೆಲ್ಲರಿ ಸೇರಿದಂತೆ ಕಾಲಿಗೆ ಹಾಕುವ ಚಪ್ಪಲಿ ಗಳು ಕೂಡ ವಿಭಿನ್ನವಾಗಿರಲಿ ಎಂದು ಬಯಸುತ್ತಾರೆ.
ಮಹಿಳೆಯರು ಧರಿಸುವ ಫ್ಲಾಟ್, ಸೆಮಿ ಹೀಲ್ಸ್, ಚಪ್ಪಲಿಗಳನ್ನು ದಿನನಿತ್ಯದ ಕೆಲಸಗಳಿಗೆ ಓಡಾಟಕ್ಕೆ ಬಳಸುತ್ತಾರೆ. ಕೆಲವರು ಪಾರ್ಟಿಗಳಿಗೆ ವಿಶೇಷವಾಗಿ ಹೈ ಹಿಲ್ಸ್ ಚಪ್ಪಲಿಗಳು, ಪಾಯಿಂಟೆಡ್ ಹೀಲ್ಸ್ ಚಪ್ಪಲಿಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಹೈ ಹಿಲ್ಸ್ ಧರಿಸುವುದರಿಂದ ಎತ್ತರ ಕಡಿಮೆ ಇರುವವರು ತಮ್ಮ ಎತ್ತರವನ್ನ ಜಾಸ್ತಿ ಮಾಡಿಕೊಳ್ಳಲು ಸುಲಭವಾಗುತ್ತದೆ.
ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಹೈ ಹೀಲ್ಸ್ ಚಪ್ಪಲಿ ತರಿಸುವುದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅದನ್ನು ಧರಿಸುವವರಿಗೆ ಆಗುವ ನೋವು ಗೊತ್ತಿರುತ್ತದೆ. ಹಿಮ್ಮಡಿಗೆ ತುಂಬಾ ನೋವನ್ನು ಉಂಟುಮಾಡುವುದರ ಜೊತೆಗೆ ಮುಂದೆ ಯಾವಾಗಲೂ ಧರಿಸದೆ ಬೇಡ ಎನ್ನುವ ಮನಸ್ಸು ಕೂಡ ಆಗುತ್ತದೆ. ಆದರೆ ಹೈ ಹೀಲ್ಸ್ ಚಪ್ಪಲಿಗಳನ್ನು ಯಾವುದೇ ನೋವು ಇಲ್ಲದೆ ಧರಿಸಬಹುದಾಗಿದೆ. ಚಪ್ಪಲಿಗಳನ್ನು ಹೇಗೆ ಆಯ್ಕೆ ಮಾಡ್ಬೇಕು ಇಲ್ಲಿದೆ ಮಾಹಿತಿ.
ಪಾದದ ಗಾತ್ರವನ್ನು ಗಮನಿಸಿ:
ಅಂಗಡಿಗಳಲ್ಲಿ ಚಪ್ಪಲಿಗಳನ್ನು ಖರೀದಿಸುವ ಮುನ್ನ ಸರಿಯಾದ ಪಾದದ ಅಳತೆಯನ್ನು ಹೇಳಬೇಕು. ಯಾಕೆಂದರೆ ನೀವು ಬೆಳೆಯುತ್ತಿರುವಂತೆ ನಿಮ್ಮ ಪಾದಗಳ ಅಳತೆ ಗಾತ್ರವು ಕೂಡ ಬದಲಾಗುತ್ತದೆ. ವರ್ಷಕ್ಕೆ ಎರಡು ಬಾರಿಯಾದರೂ ನಿಮ್ಮ ಪಾದದ ಅಳತೆಯನ್ನು ಪರಿಶೀಲಿಸುವುದು ಉತ್ತಮ.
ಪಾದಗಳ ಆಕಾರ:
ಎಲ್ಲರಿಗೂ ಪಾದದ ಅಳತೆ ಒಂದೇ ಇರುವುದಿಲ್ಲ. ಕೆಲವರಿಗೆ ಕಿರಿದಾದ ಪಾದಗಳು ಇರುತ್ತದೆ ಕೆಲವರಿಗೆ ಅಗಲವಿರುತ್ತದೆ ಕೆಲವರು ಸಣ್ಣ ಬೆರಳುಗಳನ್ನು ಹೊಂದಿದ್ದಾರೆ ಕೆಲವರು ಉದ್ದವಾದ ಬೆರಳುಗಳನ್ನು ಹೊಂದಿರುತ್ತಾರೆ. ಉದ್ದವಾದ ಬೆರಳುಗಳನ್ನು ಉಳ್ಳವರು ಯಾವಾಗಲೂ ಮೊನಚಾದ ಬೂಟುಗಳನ್ನು ಧರಿಸದಂತೆ ನೋಡಿಕೊಳ್ಳಬೇಕು. ಅಗಲವಾದ ಅಥವಾ ತೆರೆದ ಚಪ್ಪಲಿಗಳನ್ನು ಧರಿಸುವುದು ಉತ್ತಮ. ನೋಡುತ್ತಾ ದಾತುಗಳು ನಿಮ್ಮ ಕಾಲುಗಳಿಗೆ ನೋವು ಉಂಟು ಮಾಡಬಹುದು.
ಪಾದಗಳನ್ನು ಮಾಶ್ಚಿರೈಸ್ ಮಾಡಿ:
ಹೈ ಹೀಲ್ಸ್ ಧರಿಸುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೇವಗೊಳಿಸಿ ಅಥವಾ ಮಾಶ್ಚಿರೈಸ್ಮ್ ಮಾಡಿ, ಎಣ್ಣೆಯನ್ನು ಸಹ ಬಳಸಬಹುದು. ಇದರಿಂದ ಪಾದಗಳಲ್ಲಿ ಗಾಯಗಳನ್ನು ಆಗುವುದನ್ನು ತಪ್ಪಿಸಬಹುದು..
ಹೈಹೀಲ್ಡ್ ಚಪ್ಪಲಿಗಳನ್ನು ಆಯ್ಕೆಮಾಡುವಾಗ ಉತ್ತಮ ಗುಣಮಟ್ಟದ ಶೂಗಳನ್ನು ಆಯ್ಕೆ ಮಾಡಿ. ಚಪ್ಪಲಿಗಳಲ್ಲಿ ಕುಶನ್ ಇರುವಂತಹದ್ದು ಆಯ್ಕೆ ಮಾಡಿ. ಇನ್ನು ತೆಳುವಾದ ಅಡಿಭಾಗವನ್ನು ಹೊಂದಿದ್ದರೆ ಅವುಗಳು ಉತ್ತಮವಾಗಿರುತ್ತದೆ.ಹೈ ಹೀಲ್ಸ್ ಧರಿಸಿದಾಗ ಪಾದಗಳಿಗೆ ವಿಶ್ರಾಂತಿಯನ್ನು ನೀಡಬೇಕಾಗುತ್ತದೆ. ಪಾದಗಳಿಗೆ ಸ್ವಲ್ಪ ಮಸಾಜ್ ಮಾಡಿಕೊಳ್ಳಿ.
ಸೂಚನೆ: ಯಾವಾಗಲೂ ಹೈ ಹೀಲ್ಸ್ ಹಾಕುವುದರಿಂದ ಪಾದಗಳಿಗಲ್ಲದೆ, ಬೆನ್ನುಮೂಳೆಗಳಿಗೂ ತೊಂದರೆಯಾಗುತ್ತದೆ.