Coronavirus: (ಜ.21) ಕರ್ನಾಟಕದಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು ಇಂದು ರಾಜ್ಯದಲ್ಲಿ ಒಂದೇ ದಿನ 48,049 ಕೇಸ್ ದಾಖಲಾಗಿದೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ 29,068 ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಪಾಸಿಟಿವಿಟಿ ರೇಟ್ ಶೇ.19.23 ರಷ್ಟಿದೆ. ಹಾಗೂ ಇಂದು 18,115 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3,23,143 ಲಕ್ಷ ಪ್ರಕರಣಗಳು ಇದ್ದರೆ, ಬೆಂಗಳೂರಿನಲ್ಲಿ 223 ಸಾವಿರ ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಕೊರೊನಾದಿಂದ ಇಂದು ರಾಜ್ಯದಲ್ಲಿ 22 ಮಂದಿ ಸಾವನ್ನಪ್ಪಿದ್ದು, ರಾಜಧಾನಿ ಬೆಂಗಳೂರಿನಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಇಂದು 2,49,832 ಲಕ್ಷ ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದು ಎಲ್ಲಾ ಆಯಾಮಗಳನ್ನು ಪರಿಗಣಿಸಿ ವಾರಾಂತ್ಯ ಕರ್ಫ್ಯೂವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ನಾಳೆಯಿಂದಲೇ ವಾರಾಂತ್ಯ ಕರ್ಫ್ಯೂ ಹೊರತುಪಡಿಸಿ, ರಾತ್ರಿ ಕರ್ಫ್ಯೂ ಹಾಗೂ ಉಳಿದೆಲ್ಲ ನಿರ್ಬಂಧಗಳು ಮುಂದುವರೆಯಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ರೆಸ್ಟೋರೆಂಟ್, ಪಬ್, ಚಿತ್ರಮಂದಿರಗಳು 50% ರಷ್ಟು ಕಾರ್ಯ ನಿರ್ವಹಿಸಲಿದೆ. ಹೆಚ್ಚು ಜನರು ಒಂದೆಡೆ ಸೇರುವುದಕ್ಕೆ ಅವಕಾಶವಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
COVID numbers in Karnataka today:
— Dr Sudhakar K (@mla_sudhakar) January 21, 2022
◾New cases in State: 48,049
◾New cases in B'lore: 29,068
◾Positivity rate in State: 19.23%
◾Discharges: 18,115
◾Active cases State: 3,23,143 (B'lore- 223k)
◾Deaths:22 (B'lore- 06)
◾Tests: 2,49,832#COVID19 #Omicron #Karnataka