ಚೆನ್ನೈ:( ಜ.21) Sexual Harrasment: ನಟಿ ವಿಜಯಲಕ್ಷ್ಮಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಹರಿ ನಡಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಟಿಗೆ ಲೈಂಗಿಕ ಕಿರುಕುಳ ಹಾಗೂ ಜೀವಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಕಳೆದ 2020ರಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡ ಲಾಗಿತ್ತು ಹಾಗಾಗಿ ವಿಜಯಲಕ್ಷ್ಮಿಯವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಎನ್ ಟಿ ಕೆ ಪಕ್ಷದ ನಾಯಕ ಸೀಮನ್ ಕುಮ್ಮಕ್ಕಿನ ನಾಡಾರ್ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು.
ತಿರುನೆಲ್ವೇಲಿ ನಿವಾಸಿ ಹರಿ ನಾಡರ್ ಅಲಿಯಾಸ ಗೋಪಾಲಕೃಷ್ಣ ನಾಡರ್ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಲಂಗುಲಂ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ. ಅನಂತರ ಉದ್ಯಮಿಯೊಬ್ಬರಿಗೆ ಬ್ಯಾಂಕ್ ಲೋನ್ ಕೊಡಿಸುವುದಾಗಿ ನಂಬಿಸಿ ಏಳು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಈತನನ್ನು 2021 ಮೇ ತಿಂಗಳಿನಲ್ಲಿ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಆನಂತರ ಬಿಡುಗಡೆಯಾಗಿತ್ತು.
ನಟಿ ವಿಜಯಲಕ್ಷ್ಮಿ ಅವರು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿ ಜನರಲ್ಲಿ ಸಹಾಯ ಮಾಡಲು ಅಂಗಲಾಚಿದರು. ಅಭಿಮಾನಿಗಳು ಹಾಗೂ ಸಂಘದವರು 3,2,900 ರೂಪಾಯಿಯನ್ನು ಸಂಗ್ರಹಮಾಡಿ ವಾಣಿಜ್ಯ ಮಂಡಳಿಯ ಮೂಲಕ ವಿಜಯಲಕ್ಷ್ಮಿ ಅವರಿಗೆ ಹಸ್ತಾಂತರಿಸಿದರು.