Director Pradeep Raj: (ಜ.20) ಕಿರಾತಕ ಚಿತ್ರವನ್ನು ನಿರ್ದೇಶನ ಮಾಡಿದ ಪ್ರದೀಪ್ ರಾಜ್ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಿಗೆ ನಿರ್ದೇಶನ ಮಾಡಿ ಫೇಮಸ್ ಆಗಿದ್ದ ಪ್ರದೀಪ್ ರಾಜ್ ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚಿಗೆ ಕೊರೊನಾ ಸೋಂಕು ತಗುಲಿತ್ತು. ಇಂದು ಪ್ರದೀಪ್ ರಾಜ್ ಅವರು ನಿಧನರಾದರು ಎಂದು ಸಹೋದರ ಪ್ರಶಾಂತ ರಾಜ್ ಅವರು ಮಾಹಿತಿ ನೀಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರಕ್ಕೆ ನಿರ್ದೇಶನ ಮಾಡಿ ಅವರ ಖ್ಯಾತಿ ಹೆಚ್ಚಾಗಿತ್ತು. ಅಲ್ಲಿಂದ ಅನೇಕ ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶನದ ಮಾಡಿದ್ದರು.

ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಪ್ರದೀಪ ರಾಜ್. ಹಾಗೂ ಆರು ತಿಂಗಳಿಂದ ವಿವರ ಕೂಡಾ ಸಮಸ್ಯೆಯಾಗಿತ್ತು ಹೀಗೆ ಅನೇಕ ಆಸ್ಪತ್ರೆಗಳಿಗೆ ತೋರಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್ ಡೌನ್ಲೋಡ್ ಸಮಯದಲ್ಲಿ ಸರಿಯಾಗಿ ಕಾಳಜಿ ವಹಿಸಲಿಲ್ಲ ಇದರಿಂದ ಮತ್ತಷ್ಟು ಆರೋಗ್ಯ ಹದಗೆಡುತ್ತಿತ್ತು.
ನಿರ್ದೇಶಕ ಪ್ರದೀಪ್ ರಾಜ್ ನಿಧನಕ್ಕೆ ಸ್ಯಾಂಡಲ್ವುಡ್ ನಟ-ನಟಿಯರು ಗಣ್ಯರು ಕಂಬನಿ ಮಿಡಿದಿದ್ದಾರೆ.. ಅಂಜದಗಂಡು, ಬೆಂಗಳೂರು 560023, ರಜನಿಕಾಂತ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.ಪ್ರದೀಪ ರಾಜ್ ಅವರು ಪತ್ನಿ ಇಬ್ಬರು ಮಕ್ಕಳನ್ನು ಆಗಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಪಾಂಡಿಚರಿಯಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.