Abdul Gaffer Khan: (ಜ.20): ಇಂದು ಗಡಿನಾಡ ಗಾಂಧಿ ಎಂದು ಕರೆಯಲ್ಪಡುವ ಅಬ್ದುಲ್ ಗಫಾರ್ ಖಾನ್ ಪುಣ್ಯಸ್ಮರಣೆ. ಸ್ವತಂತ್ರ ಹೋರಾಟ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಇವರು ಹುಟ್ಟಿದ್ದು ಜೂನ್ 3, 1890 ಪಾಕಿಸ್ತಾನದ, ಉತಮನಜೈಯಲ್ಲಿ.
ಗಾಂಧಿ ನೀಡಿದ ಬಿರುದು:
ಗಡಿನಾಡ ಗಾಂಧಿ ಎಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧಿಯವರ ನಿಕಟವರ್ತಿಯಾಗಿದ್ದ ಅಬ್ದುಲ್ ಗಫಾರ್ ಖಾನ್ ಅವರಿಗೆ ನೀಡಿದ ಬಿರುದಾಗಿತ್ತು. ಗಫರ್ ಖಾನ್ ಅವರು ಭಾರತದೊಂದಿಗೆ ಅಪಾರ ಒಲವು ಹೊಂದಿದ್ದರಿಂದ ಪಾಕಿಸ್ತಾನದಲ್ಲಿ ಹಲವಾರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಕಾಂಗ್ರೆಸ್ಸಿಗರಾಗಿ ಸಂಪೂರ್ಣವಾಗಿ ಹಿಂದೂ-ಮುಸ್ಲಿಂ ಏಕತೆ ಮತ್ತು ಜಾತ್ಯತೀತತೆಯ ಪರಿಕಲ್ಪನೆಯನ್ನು ಮನಗಂಡಿದ್ದರು.

1987ರಲ್ಲಿ ಭಾರತ ಸರ್ಕಾರವು ಗಫಾರ್ ಖಾನ್ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ದೆಹಲಿಯಲ್ಲಿ ಈ ಮಹಾನ್ ನಾಯಕನ ಸ್ಮರಣಾರ್ಥವಾಗಿ ಒಂದು ಮಾರುಕಟ್ಟೆಯನ್ನು ನಿರ್ಮಿಸಿದ್ದು ಇದಕ್ಕೆ ಖಾನ್ ಮಾರ್ಕೆಟ್ ಎಂದು ಹೆಸರಿಡಲಾಗಿದೆ ಹಾಗೂ ಇನ್ನೊಂದಕ್ಕೆ ಗಫರ್ ಮಾರುಕಟ್ಟೆ ಎಂದು ನಾಮಕರಣ ಮಾಡಲಾಗಿದೆ.
20ರ ಹರೆಯದಲ್ಲೇ ತಮ್ಮ ಸಮುದಾಯದ ಸ್ತ್ರೀ ಹಾಗೂ ಪುರುಷರಿಗಾಗಿ ಶಾಲೆಯನ್ನು ಕಟ್ಟುವ ಮೂಲಕ ಸಮಾಜದ ಉನ್ನತಿಗಾಗಿ ಪರಿಶ್ರಮ ಪಟ್ಟಿದ್ದರು. ಅಲ್ಲಿಂದ ಪ್ರಾರಂಭವಾದ ಅವರ ಸಮಾಜಸೇವೆ ಬ್ರಿಟಿಷ ಸಾಮ್ರಾಜ್ಯಶಾಹಿಯ ಭಾರತವನ್ನು ಮುಕ್ತಗೊಳಿಸಬೇಕು ಎಂಬ ಮಹತ್ವಾಕಾಂಕ್ಷೆ ಅವರ ಮನದಲ್ಲಿ ಬೆಳೆದಿತ್ತು.
ಬ್ರಿಟಿಷರ ವಿರುದ್ಧ ಆಂದೋಲನ:
ಖಾನ್ ಅವರು ಧಾರ್ಮಿಕ ನೆಲೆಯಲ್ಲಿ ಅಹಿಂಸೆ ಎನ್ನುವುದು ಪ್ರವಾದಿಯ ಆಯುಧ ಎಂಬುದನ್ನು ಮನಗಂಡಿದ್ದರು. ಬ್ರಿಟಿಷರ ವಿರುದ್ಧ ಶಾಂತಿಯುತ ಚಳುವಳಿಗಾಗಿ ಆಂದೋಲನ ಪ್ರಾರಂಭಿಸಿದರು. ಅವರ ಅನುಯಾಯಿಗಳು ಕೂಡ ಅವರಂತೆಯೇ ದೇಶಕ್ಕೆ ನಿಷ್ಠಾವಂತ ರಾಗಿದ್ದರು.

ಗಫಾರ್ ಖಾನ್ ಅವರು ಜಾತ್ಯತೀತ ಭಾರತದ ಕನಸನ್ನು ಕಂಡಿದ್ದರು ಹಾಗೂ ದೇಶದ ವಿಭಜನೆಯ ವಿರುದ್ಧ ವ್ಯಾಪಕವಾಗಿ ಧ್ವನಿಯೆತ್ತಿದ್ದರು. ತಮ್ಮದೇ ಆದ ಕಾಂಗ್ರೆಸ್ ಪಕ್ಷವನ್ನು ದೇಶವಿಭಜನೆ ಮಾಡುವ ಪ್ರಸ್ತಾವವನ್ನು ಅಂಗೀಕರಿಸಿ ದಾಗ ಅವರಿಗೆ ದ್ರೋಹಕೊಳ್ಳಗಾದ ಭಾವನೆ ಉಂಟಾಯಿತು. ಆದರೂ ಗಾಂಧೀಜಿ ಅವರೊಂದಿಗೆ ಇದ್ದ ಸ್ನೇಹ ಮುಂದುವರೆದಿತ್ತು. ರಾಷ್ಟ್ರೀಯ ನಾಯಕ ನೇಮಿಸಿಕೊಳ್ಳ ಬೇಕಾಗಿತ್ತಾ ಖಾನರು ತಮ್ಮ ಬದುಕಿನ ಬಹುತೇಕ ವರ್ಷಗಳ ಜೈಲುವಾಸದ ಅಲ್ಲೇ ಕಳೆಯಬೇಕಾಯಿತು. ಯಾರನ್ನು ನಂಬಿದ್ದರು ಅವರಿಂದಲೇ ಚಿತ್ರಹಿಂಸೆ ಒಳಪಟ್ಟು ಕೊನೆಗೆ ಆಫ್ಘಾನಿಸ್ತಾನದ ಜಲಲಾಬಾದ್ ನಲ್ಲಿ ಮರಣಹೊಂದಿದರು.
ಸ್ವಾತಂತ್ರ್ಯ ಹೋರಾಟಗಾರ ಗಫಾರ್ ಖಾನ್ ಅವರಿಗೆ ಭಾರತ ಸರ್ಕಾರದ ಜವಾಹರ್ಲಾಲ್ ನೆಹರು ಅಂತರರಾಷ್ಟ್ರೀಯ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿಗಳನ್ನು ಅಬ್ದುಲ್ ಗಫಾರ್ ಖಾನ್ ಅವರಿಗೆ ನೀಡಲಾಗಿತ್ತು ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಶಸ್ತಿ ಸಹ ಅವರಿಗೆ ಒದಗಿತ್ತು.