Badava Rascal: (ಜ.20): ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಪಡೆದ ಬಳಿಕ ಒಟಿಟಿಗೆ ಬರಲು ಸಿದ್ಧವಾಗಿದೆ. ರೋಮ್ಯಾಂಟಿಕ್ ಡ್ರಾಮಾದಲ್ಲಿ ಡಾಲಿ ಧನಂಜಯ್, ಅಮೃತ ಅಯ್ಯಂಗಾರ್ ರಂಗಾಯಣ,ರಘು, ತಾರಾ, ಸ್ಪರ್ಶ ಚಿತ್ರದ ನಾಯಕಿ ರೇಖಾ, ನಾಗಭೂಷಣ್, ಪೂರ್ಣಚಂದ್ರ ಹಾಗೂ ಮಾಸ್ತಿ ಮಂಜು ಸೇರಿದಂತೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಬಡವ ರಾಸ್ಕಲ್ ಸಿನಿಮಾ ಜನವರಿ 26ರಂದು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಶಂಕರ್ ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಈಗಾಗಲೇ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಮಧ್ಯಮವರ್ಗದವರಿಗೆ ಫೇವರಿಟ್ ಸಿನಿಮಾವಾಗಿದೆ ಎಂದೇ ಹೇಳಬಹುದು. ಇದೇ ಗಣರಾಜ್ಯೋತ್ಸವ ದಿನದಂದು ಚಿತ್ರವನ್ನು ಓಟಿಟಿ ಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಚಿತ್ರದ ಬಗ್ಗೆ ಮಾತನಾಡಿರುವ ನಟ ಡಾಲಿ ಧನಂಜಯ ಅವರು, ಚಿತ್ರ ನನಗೆ ಎರಡು ಕಾರಣಗಳಿಂದ ಹತ್ತಿರ ಎನಿಸುತ್ತದೆ. ಇದರಲ್ಲಿ ಒಂದು ಚಿತ್ರತಂಡವಾದರೆ ಮತ್ತೊಂದು ಚಿತ್ರದ ಕಥೆ. ಸಾಮಾನ್ಯ ಮನುಷ್ಯನ ಕನಸುಗಳು ಬೆನ್ನಟ್ಟಿ ಬಂದು ಯಶಸ್ವಿಯಾಗುತ್ತಾನೆ ಹಾಗೆಯೇ ಪ್ರೀತಿಯನ್ನು ಬಿಟ್ಟುಕೊಡದೆ ಹೇಗೆ ಕಷ್ಟಪಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನ್ ನಲ್ಲಿ ಜನರು ಚಿತ್ರ ಮಂದಿರಗಳಿಗೆ ಬರುತ್ತಿಲ್ಲ ಹಾಗಾಗಿ ನಮ್ಮ ಚಿತ್ರವೇ ಎಲ್ಲರ ಮನೆ ಬಾಗಿಲಿಗೆ ಬರಲಿದೆ. ಪ್ರತಿಯೊಬ್ಬರೂ ವೂಟ್ ನಲ್ಲಿ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಬಡವ ರಾಸ್ಕಲ್❤️
— Dhananjaya (@Dhananjayaka) January 19, 2022
ಇದೇ ಜನವರಿ 26 ರಿಂದ @VootSelect ನಲ್ಲಿ @ColorsKannada #BadavaRascal@amrutha_iyengar @dir_shankarguru @vasukivaibhav @dr_bhushana @PoornaMysore @KRG_Studios @Karthik1423 @yogigraj @daali_pictures @KRG_Connects @aanandaaudio pic.twitter.com/Mt5FlyTvkf
ಇದನ್ನೂ ಓದಿ:Director Pradeep Raj: ಕೊರೋನಾ ಸೋಂಕಿನಿಂದ ಕಿರಾತಕ ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ನಿಧನ