Amulya :(ಜ,20): ಕನ್ನಡ ಚಿತ್ರರಂಗದ ಬಬ್ಲಿ ಹೀರೋಯಿನ್ ನಟಿ ಅಮೂಲ್ಯ ಸೀಮಂತ ಶಾಸ್ತ್ರ ಇಂದು ನಡೆಯಿತು. ಇತ್ತೀಚಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವಿಚಾರವನ್ನು ಹಂಚಿಕೊಂಡಿದ್ದರು.

ಅಮೂಲ್ಯ ಅವರ ಸೀಮಂತ ಶಾಸ್ತ್ರದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ಅಮೂಲ್ಯ ಅವರು 7 ತಿಂಗಳ ಗರ್ಭಿಣಿಯಾಗಿದ್ದು, ಶ್ರೀಮಂತ ಶಾಸ್ತ್ರಕ್ಕೆ ಹಲವಾರು ಚಿತ್ರರಂಗದ ನಟ-ನಟಿಯರು ಭಾಗಿಯಾಗಿದ್ದರು.
ಬಾಲನಟಿಯಾಗಿ ಚಿತ್ರರಂಗಕ್ಕೆ ಅಮೂಲ್ಯ ಅವರು ಕಾಲಿಟ್ಟರು. ನಂತರ ಚಲನಚಿತ್ರ ಸಿನಿಮಾ ಮೂಲಕ ನಟಿಯಾಗಿ ಕಾಣಿಸಿಕೊಂಡರು. ಗಣೇಶ್, ಯಶ್, ಪ್ರೇಮ್, ಅಜಯ್ ರಾವ್ ದುನಿಯಾ ವಿಜಯ್ ಸೇರಿದಂತೆ ನಟರಿಗೆ ನಾಯಕಿಯಾಗಿ ನಟಿಸಿದ್ದರು. ಬಹುಭಾಷಾ ಕಲಾವಿದ ಪ್ರಕಾಶ್ ರೈ ಅವರ ಜೊತೆ ನಾನು ನನ್ನ ಕನಸು ಎಂಬ ಸಿನಿಮಾ ಮೂಲಕ ಸಾಕಷ್ಟು ಹೆಗ್ಗಳಿಕೆಗೆ ಪಾತ್ರರಾದರು.

2017ರಲ್ಲಿ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ವರಿ ಅಮೂಲ್ಯ ಅವರು ಸಪ್ತಪದಿ ತುಳಿದರು.ಹಸಿರು ಬಣ್ಣದ ವೇದಿಕೆಯಲ್ಲಿ ಹೂವಿನಿಂದ ಅಲಂಕೃತಗೊಂಡ ವೇದಿಕೆಯಲ್ಲಿ ನಟಿ ಅಮೂಲ್ಯ ಅವರ ಶಾಸ್ತ್ರಗಳು ನೆರವೇರಿತು.
ಇದನ್ನೂ ಓದಿ: Badava Rascal: ಗಣರಾಜ್ಯೋತ್ಸವಕ್ಕೆ ಓಟಿಟಿಯಲ್ಲಿ ‘ಬಡವ ರಾಸ್ಕಲ್’ ರಿಲೀಸ್