ಮೆಲ್ಬರ್ನ್: (ಜ.19) Saniya MirZa: ಮೂಗುತಿ ಸುಂದರಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ವೃತ್ತಿಯಿಂದ ನಿವೃತ್ತಿ ಪಡೆದಿದ್ದಾರೆ. ಟೆನ್ನಿಸ್ ಅಂಗಳಕ್ಕೆ ತಿಳಿಯುವುದಿಲ್ಲ ಎಂದು ಸಾನಿಯಾ ಮಿರ್ಜಾ ಅವರು ಘೋಷಿಸಿದ್ದಾರೆ. ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ ಹಾಗೂ ಶಕ್ತಿಯನ್ನು ಸೇರಿಸಲು ಸಾಲುತ್ತಿಲ್ಲ ಎಂದು ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನ ಸೋಲಿನ ನಂತರ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
ಸಾನಿಯಾ ಮಿರ್ಜಾ ಅವರು ಇಂದು ಪಂದ್ಯದ ಮಧ್ಯೆ ಮೊಣಕಾಲು ನೋವಿತ್ತು ಆದರೆ ಇದು ಪಂದ್ಯಕ್ಕೆ ಸೋಲಲು ಕಾರಣವಲ್ಲ ಆದರೆ ವಯಸ್ಸಾಗುತ್ತಿದೆ ಚೇತರಿಸಿಕೊಳ್ಳಲು ಆಗುತ್ತಿಲ್ಲ ಎಂಬುದರ ಅರಿವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು 35 ವರ್ಷದಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ತುಂಬಾ ಸಮಯಗಳ ಕಾಲ ಆಟದಿಂದ ಹೊರಗೆ ಉಳಿದಿದ್ದರು. 2019 ರ ಮಾರ್ಚ್ ನಲ್ಲಿ ಮತ್ತೆ ಆಟ ಆಡಲು ತಿರ್ಮಾನಿಸಿದರು, ಆದರೆ ಅದಾದ ಕೆಲವೇ ತಿಂಗಳಲ್ಲಿ ಅವರಿಗೆ ಕೊರೋನ ಸೋಂಕು ತಗುಲಿತ್ತು. ಕೊರೋನಾ ಸೋಂಕಿನಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡರು.
ಇದೀಗ ಪಂದ್ಯ ಮಾಡಲು ನಿರ್ಧರಿಸಿ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲಿದ ನಂತರ ಈ ತೀರ್ಮಾನ ಕೈಗೊಂಡಿದ್ದಾರೆ.
ನನ್ನ ಚೇತರಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ನನ್ನ ಮಗನಿಗೆ ಮೂರು ವರ್ಷ ವಯಸ್ಸಾಗಿದೆ ನಾನು ಅವನೊಂದಿಗೆ ತುಂಬಾ ಪ್ರಯಾಣಿಸುವ ಮೂಲಕ ಅವನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ ಎಂದು ಹೇಳಿದ್ದಾರೆ.