ಬೆಂಗಳೂರು, ಜ.19- Electric Shock:ನೀರಿನ ಸಂಪ್ ಸ್ವಚ್ಛಗೊಳಿಸುವಾಗ ವಿದ್ಯುತ್ ಪ್ರವಹಿಸಿ ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಆರ್.ಟಿ. ನಗರದ ರಾಮಕೃಷ್ಣ ಅಪಾರ್ಟ್ಮೆಂಟ್ನಲ್ಲಿ ಬುಧವಾರ ನಡೆದಿದೆ.
ರಾಜು ಹಾಗೂ ಈತನ 10 ವರ್ಷದ ಮಗ ಸಾಯಿ ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ. ಆರ್.ಟಿ. ನಗರದ ಸುಲ್ತಾನ್ ಪಾಳ್ಯ ಬಳಿಯಿರುವ ರಾಮಕೃಷ್ಣ ಅಪಾರ್ಟ್ಮೆಂಟ್ನಲ್ಲಿ ಬೆಳಗ್ಗೆ ಸಂಪ್ ಕ್ಲೀನ್ ಮಾಡುವುದಕ್ಕೆ ಹೋಗಿದ್ದ ರಾಜು ಎಂಬುವರಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪ್ಪನ ಜೊತೆಗೆ ಬಂದಿದ್ದ 10 ವರ್ಷದ ಮಗ ಸಾಯಿ, ತಂದೆಯ ಚೀರಾಟ ಕಂಡು ರಕ್ಷಿಸಲು ಹೋಗಿದ್ದಾನೆ. ಆಗ ಬಾಲಕನಿಗೂ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ. ರಾಜು ಸಂಪ್ ಸ್ವಚ್ಛತಾ ಕೆಲಸಕ್ಕೆಂದು ಮಗನೊಂದಿಗೆ ಅಪಾರ್ಟ್ಮೆಂಟ್ಗೆ ಬಂದಿದ್ದ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆರ್.ಟಿ.ನಗರ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇನ್ನೂ, ಘಟನೆಗೆ ಅಪಾರ್ಟ್ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Cm Stalin: ಸ್ತಬ್ಧಚಿತ್ರದ ವಿಚಾರದಲ್ಲಿ ಕೇಂದ್ರಕ್ಕೆ ಸಡ್ಡು ಹೊಡೆದ ತಮಿಳುನಾಡು ಸಿಎಂ ಸ್ಟಾಲಿನ್!