ಚೆನ್ನೈ: (ಜ.19) Cm Stalin: ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಒಂದು ಸ್ತಬ್ಧಚಿತ್ರ ಹೊರತುಪಡಿಸಿ ರಾಜ್ಯದ ಎಲ್ಲಾ ಸ್ತಬ್ಧಚಿತ್ರಗಳನ್ನು ಪ್ರದರ್ಶನಕ್ಕೆ ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸಿಎಂ ಕಿಡಿಕಾರಿದ್ದಾರೆ.
ಕೇಂದ್ರದ ನಿರ್ಧಾರಕ್ಕೆ ಸಡ್ಡು ಹೊಡೆಯಲು ಸಿಎಂ ಸಾಲಿನ ನಿರ್ಧರಿಸಿದ್ದಾರೆ. ಕೇಂದ್ರದಿಂದ ತಿರಸ್ಕೃತಗೊಂಡ ಸ್ತಬ್ಧಚಿತ್ರವನ್ನು ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

ಚೆನ್ನೈನಲ್ಲಿ ಸ್ತಬ್ಧಚಿತ್ರ ಪ್ರದರ್ಶನ:
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಗಣರಾಜ್ಯೋತ್ಸವ ದಿನದಂದು ಚೆನ್ನೈನಲ್ಲಿ ಸ್ತಬ್ಧಚಿತ್ರದ ಮೆರವಣಿಗೆ ನಡೆಸಲಾಗುತ್ತದೆ ಜಿಲ್ಲೆಗಳಲ್ಲಿ ಮಾದರಿ ಚಿತ್ರವನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವಕ್ಕೆ ಪ್ರತಿವರ್ಷ ಸ್ತಬ್ಧ ಚಿತ್ರಗಳಿಗೆ ಥೀಮ್ ಇಡಲಾಗುತ್ತದೆ. ಅದರಂತೆ ಸ್ವಾತಂತ್ರ್ಯ ಹೋರಾಟಕ್ಕೆ ತಮಿಳುನಾಡಿನ ಕೊಡುಗೆ ಎಂದು ಥೀಮ್ ಇಡಲಾಗಿತ್ತು. ಕೇಂದ್ರ ರಕ್ಷಣಾ ಇಲಾಖೆ ಸೂಚಿಸಿದ್ದ ಬದಲಾವಣೆಗಳಿಗೆ ನಾವು ಮೂರು ಬಾರಿ ಬಾರಿ ಸ್ಪಂದಿಸಿದ್ದೇವು. ಆದರೆ ನಾಲ್ಕನೇ ಬಾರಿಗೆ ಯಾವುದೇ ಕಾರಣ ನೀಡದೆ ಏಕಾಏಕಿ ತಿರಸ್ಕರಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೇಸತ್ತು ಸಿಎಂ ಮಸಾಲೆ ನವರು ಪಿಎಂ ಮೋದಿ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು. ಒಟ್ಟಾರೆ ತಮಿಳುನಾಡಿನ ಭಾವನೆಗೆ ಧಕ್ಕೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಒಂದು ಸ್ತಬ್ಧಚಿತ್ರವನ್ನು ಹೊರತುಪಡಿಸಿ ಪಶ್ಚಿಮ ಬಂಗಾಳ ,ಕೇರಳ ಸೇರಿದಂತೆ ರಾಜ್ಯಗಳ ಸ್ಥಬ್ಧಚಿತ್ರಗಳ ಪ್ರದರ್ಶನಕ್ಕೆ ಕೇಂದ್ರಸರ್ಕಾರ ಕಾರಣ ನೀಡದೆ ನಿರಾಕರಿಸಿತ್ತು.
அன்றைய ஏகாதிபத்தியத்தை எதிர்த்ததன் அடையாளமான தமிழ்நாட்டின் அலங்கார ஊர்தி சென்னையில் நடைபெறும் #RepublicDay-வில் இடம்பெறும்! தமிழ்நாடு முழுவதும் காட்சிப்படுத்தப்படும்!
— M.K.Stalin (@mkstalin) January 18, 2022
தமிழ்நாட்டின் விடுதலைப் போராட்ட வரலாற்றை மறைக்கும் எந்த முயற்சியும் ஒருபோதும் பலிக்காது! pic.twitter.com/qMp3tPD60u