ಬೆಂಗಳೂರು: (ಜ,19) 2nd PUC Exam Provisional Timetable: ಪದವಿಪೂರ್ವ ಶಿಕ್ಷಣ ಇಲಾಖೆಯ 2021 22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಎಪ್ರಿಲ್ 16ರಿಂದ ಮೇ 4ರವರೆಗೂ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಯ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಲು ಬಯಸಿದ್ದಲ್ಲಿ [email protected] ಇಮೇಲ್ ಗೆ ಆಕ್ಷೇಪಣೆ ಸಲ್ಲಿಸಲು ಫೆ.1ರ ವರೆಗೂ ಅವಕಾಶ ನೀಡಲಾಗಿದೆ.
ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಯು ಮಾರ್ಚ್ 28 ರಿಂದ ಏಪ್ರಿಲ್ 13 ರವರೆಗೆ ನಿಗದಿಯಾಗಿದೆ. ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸುವ ಹೊಣೆಯನ್ನು ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ವಹಿಸಲಾಗಿದೆ. ಪ್ರಥಮ ದ್ವಿತೀಯ ಪಿಯುಸಿ ಭಾಷೆಯ ವಿಷಯಗಳಲ್ಲಿ ಶೇಕಡ 30ರಷ್ಟು ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಭಾಷಾ ವಿಷಯಗಳಲ್ಲಿ ಶೇಕಡ 70ರಷ್ಟು ಪಠ್ಯಕ್ರಮಕ್ಕೆ, ಚಿಕ್ಕ ವಿಷಯಗಳಲ್ಲಿ ಶೇಕಡ 100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆ ನಡೆಸಲಾಗುತ್ತದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಐಚ್ಛಿಕ ವಿಷಯಗಳ ಪ್ರಶ್ನೆ ಪತ್ರಿಕೆ ತಯಾರಿಕೆಯ ಬೇಳೆ ಬಹು ಆಯ್ಕೆ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗಿದೆ. ಫೆಬ್ರವರಿ 17ರಿಂದ ಮಾರ್ಚ್ 25 ರವರೆಗೆ ಪ್ರಾಯೋಗಿಕ ಹಾಗೂ ಮಾರ್ಚ್ 14ರಿಂದ 25ರವರೆಗೆ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿದೆ. ಉಪನಿರ್ದೇಶಕರ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.