ಮಂಡ್ಯ:(ಜ.18) Shri Rangapatna Masjid: ಹಿಂದುಗಳು ಅತಿಬೇಗ ಜಾಗೃತರಾಗಿ ಮಸೀದಿಯನ್ನು ಹೊಡೆಯಬೇಕು ಎಂಬುವ ಹೇಳಿಕೆ ಸದ್ಯ ವೈರಲ್ ಆಗಿದೆ. ಬಾಬ್ರಿ ಮಸೀದಿಯ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಧ್ವಂಸ ಮಾಡುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ ವಿಡಿಯೋ ವೈರಲ್ ಆಗಿದೆ. ವಿವಾದಾತ್ಮಕ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಸಮಾಜದ ಕೋಮು ಸೌಹಾರ್ದತೆಗೆ ಹಾನಿಯಾಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಋಷಿಕುಮಾರ ಸ್ವಾಮೀಜಿ ಮಸೀದಿ ಮುಂದೆ ನಿಂತುಕೊಂಡು ವಿಡಿಯೋ ಮಾಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ, ಇದು ಮೊದಲು ದೇವಾಲಯವಾಗಿತ್ತು, ಇದನ್ನು ಕೆಡವಿದ್ದಾರೆ ಎಂದು ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿಮಸೀದಿ ರೀತಿಯಲ್ಲಿ ಕೆಡವಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗಿನ ಜಾವ 4.30ರಲ್ಲಿ ಚಿಕ್ಕಮಗಳೂರು ಮಠದಲ್ಲಿ ಸ್ವಾಮೀಜಿಯನ್ನು ವಶಪಡಿಸಿಕೊಂಡಿದ್ದು ಶ್ರೀರಂಗಪಟ್ಟಣದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.