ಬಿಹಾರ: (ಜ.18) Special Baby: ವಿಶ್ವದಲ್ಲೇ ಅನೇಕ ವಿಚಾರಗಳು ವಿಶೇಷವಾಗಿರುತ್ತದೆ ಅಂದಹಾಗೆ ನೀವು ಕೇಳಿರಬಹುದು, ಮೇಕೆಗೆ ಎರಡು ತಲೆ, ಹೀಗೆ ಅನೇಕ ವಿಷಯಗಳು ಕಾಣಸಿಗುತ್ತದೆ. ಅಂದಹಾಗೆ ಬಿಹಾರದಲ್ಲಿ ಒಂದು ವಿಚಿತ್ರ ಮಗು ಜನನ ವಾಗಿದೆ. ಬಿಹಾರದ ಕಥೆಹಾರ್ ಜಿಲ್ಲೆಯ ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ವಿಶೇಷ ಮಗುವಿಗೆ ಜನನ ನೀಡಿದ್ದಾಳೆ. ಮಗುವಿಗೆ ನಾಲ್ಕು ಕೈ ಹಾಗೂ ನಾಲ್ಕು ಕಾಲು ಇರುವುದು ವಿಶೇಷವಾಗಿದೆ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಮಗುವನ್ನು ನೋಡಲು ಜನರು ಬರುತ್ತಿದ್ದಾರೆ.
ಮಗು ಹುಟ್ಟಿರುವ ಸುದ್ದಿ ಗೊತ್ತಾದಂತೆ ಎರಡು ಕುಟುಂಬದವರು ಸಂತಸ ಹಂಚಿಕೊಂಡಿದ್ದಾರೆ ಆದರೆ ಮಗುವಿಗೆ ಕೈ ಹಾಗೂ ಕಾಲುಗಳಿಗೆ ವಿಚಿತ್ರವಾಗಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ.

ಕುಟುಂಬದವರ ಆಕ್ರೋಶ:
ಅಷ್ಟಕ್ಕೂ ಮಹಿಳೆಯು ವಿಚಿತ್ರ ಮಗುವಿಗೆ ಜನನ ನೀಡಿದ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆರಿಗೆ ಮಾಡಿಸಿ ಕೊಳ್ಳುವುದರ ಮೊದಲು ಮಹಿಳೆಗೆ ಅನೇಕ ಬಾರಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ವೈದ್ಯರು ಯಾವುದೇ ಮಾಹಿತಿಯನ್ನು ಕುಟುಂಬದವರಿಗೆ ತಿಳಿಸಿಲ್ಲ. ಸ್ಕ್ಯಾನ್ ಮಾಡಿಸಿದಾಗ ಮಗು ಆರೋಗ್ಯವಾಗಿದೆ ಎಂದು ಹೇಳುತ್ತಿದ್ದರು. ಮಗು ಈಗ ವಿಚಿತ್ರವಾಗಿ ಜನಿಸಿದೆ ಎಂದು ವೈದ್ಯರ ವಿರುದ್ಧ ದೂರಿದ್ದಾರೆ.
ವಿಚಿತ್ರ ಮಗುವಿಗೆ ಜನನ ನೀಡಿದ ಮಹಿಳೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯರು, ಮಗು ದೈಹಿಕವಾಗಿ ವಿಕಲಾಂಗವಾಗಿದೆ ಹಾಗೂ ಮಹಿಳೆಯ ಗರ್ಭದಲ್ಲಿ ಅವಳಿ ಮಕ್ಕಳು ಇತ್ತು, ಅವುಗಳು ಸರಿಯಾಗಿ ಬೆಳವಣಿಗೆ ಆಗದೇ ಈ ರೀತಿ ಜನಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:Covid Positive: ಬಿಎಂಟಿಸಿ, ನಮ್ಮ ಮೆಟ್ರೋ 250 ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್