Weather Effect: ಬೆಂಗಳೂರಿನಲ್ಲಿ ಬೆಳಿಗ್ಗೆ ಚಳಿ, ಬಿಸಿಲು ನಂತರ ಮತ್ತೆ ಚಳಿ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣ ಬದಲಾಗಿ ಜನರ ಆರೋಗ್ಯವು ಕೆಟ್ಟಿದೆ.
ಎಲ್ಲಿ ನೋಡಿದರಲ್ಲಿ ಕೆಮ್ಮು, ಶೀತ ,ಜ್ವರ, ಕ್ಲಿನಿಕ್ ಗಳ ಮುಂದೆ ಜನಗಳ ಸಾಲು.. ಕೊರೋನಾ ನಂತರ ಹವಾಮಾನವು ಬದಲಾವಣೆಯಿಂದಾಗಿ ಕೋವಿಡ್ ನಂತೆಯೇ ಸಾಮಾನ್ಯ ಲಕ್ಷಣಗಳು ಕಂಡುಬರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ಸಾಮಾನ್ಯ ಶೀತ ಜ್ವರ ನಗಡಿ ಇಂತಹ ಸಮಸ್ಯೆ ಬರುವ ಜನರಿಗೆ ವೈದ್ಯರು ಬಹುತೇಕ ಕರೋನ ಇದೆ ಎಂದು ಹೇಳುತ್ತಾರೆ.

ಹವಾಮಾನ ಬದಲಾವಣೆ:
ಇದರ ಬಗ್ಗೆ ಖ್ಯಾತ ವೈದ್ಯ ರಾಜು ಕೃಷ್ಣಮೂರ್ತಿಯವರು ಉತ್ತಮವಾದ ಸಲಹೆ ನೀಡಿದ್ದಾರೆ. ಜನರು ಮತ್ತೆ ಮನೆಮದ್ದು ಕಷಾಯದ ಮೊರೆಹೋಗುತ್ತಿದ್ದಾರೆ ಇದೊಂದು ಸಾಮಾನ್ಯವಾಗಿ ಹವಾಮಾನದ ಬದಲಾವಣೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆ ಎಂದು ವೈದ್ಯ ರಾಜು ಕೃಷ್ಣಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.
ಜನರು ಭಯಭೀತರಾಗುವುದು ಬೇಡ ವೈದ್ಯರನ್ನು ಸಂಪರ್ಕಿಸಿ ಈಗಿನ ಸಮಸ್ಯೆಗೂ ಕೊರೋನಾ ಲಕ್ಷಣಗಳಿಗೂ ಹೊಂದಾಣಿಕೆಯಾಗುತ್ತದೆ ಹಾಗಾಗಿ ಪರೀಕ್ಷೆಗೆ ಹೋದರೆ ಪಾಸಿಟಿವ್ ಎಂದು ಹೇಳುತ್ತಾರೆ ಇದೊಂದು ಎಂದೇ ಹೇಳಬಹುದು. ಆದಷ್ಟು ಬೇಗ ಇದರಿಂದ ಹೊರಬಂದು ನೆಮ್ಮದಿಯ ಜೀವನ ನಡೆಸುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.
ಜ್ವರ ಗಂಟಲು ನೋವುಗಳು ಕೋವಿಡ್ ಲಕ್ಷಣಗಳಲ್ಲ ಹೆಚ್ಚಿನವು ಸಾಮಾನ್ಯ ಶೀತ ಜ್ವರ ಬರುತ್ತದೆ. ಹವಾಮಾನ ವೈಪರೀತ್ಯದಿಂದ ಬರುವ ಶೀತ, ಕೆಮ್ಮು, ಜ್ವರ, ಮೈಕೈನೋವು, ಕಫದ ಜೊತೆ ಅದೇ ಲಕ್ಷಣ ಹೊಂದಿರುವ ಕೊರೋನಾ ಸೋಂಕು ಜನರನ್ನು ಬಾಧಿಸುತ್ತಿದೆ. ಶೇಕಡ 80ರಷ್ಟು ಜನರಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಇದಕ್ಕೆ ಸ್ವಯಂ ಚಿಕಿತ್ಸೆ ಪಡೆಯುವ ಬದಲಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಆದರೆ ಜನರು ಭಯಪಡುವ ಅಗತ್ಯವಿಲ್ಲ ತಕ್ಷಣ ಚಿಕಿತ್ಸೆ ಪಡೆದರೆ 45 ದಿನಗಳಲ್ಲಿ ಗುಣಮುಖರಾಗಬಹುದು ಎಂದು ವೈದ್ಯ ಡಾ. ಗೌತಮ ಚೌಧರಿ ತಿಳಿಸಿದ್ದಾರೆ.
ಹಾಗಾದ್ರೆ ಸಾಮಾನ್ಯ ಜ್ವರ ಶೀತ ಬಂದರೆ ಮನೆ ಮದ್ದೇನು?
- ತುಳಸಿಯ ಎಲೆ ಹಾಗೂ ಜನ ತುಪ್ಪವನ್ನು ಪ್ರತಿದಿನ ಸೇವಿಸಬಹುದು.
ವಿಳ್ಯದೆಲೆ ರಸವನ್ನು ಹಿಂಡಿ ಜ್ವರ ಕೆಮ್ಮು ಇದ್ದಾಗ ಕುಡಿಯಬಹುದು. ಅಮೃತ ಬಳ್ಳಿ ಕಷಾಯವೂ ಇದಕ್ಕೆ ಉತ್ತಮ ಪರಿಣಾಮಕಾರಿ ಎಂದು ಹೇಳಬಹುದು ಹಾಗೂ ಹಾಲಿಗೆ ಅರಿಶಿನ ಹಾಕಿ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ. - ಬಿಸಿ ನೀರು ಕುಡಿಯಿರಿ ದೇಹವನ್ನ ಯಾವಾಗಲೂ ಬೆಚ್ಚಗಿರಿಸಲು.
- ವೈದ್ಯರ ಸಲಹೆ ಮೇರೆಗೆ ಔಷಧಿ ತೆಗೆದುಕೊಂಡರೆ ಮೂರು-ನಾಲ್ಕು ದಿನಗಳಲ್ಲಿ ಕಡಿಮೆಯಾಗುತ್ತದೆ ಸೀತಮ್ಮ ಒಬ್ಬರಿಂದ ಒಬ್ಬರಿಗೆ ಬೇಗ ಹರಡುವುದರಿಂದ ಅಂತರವಿದ್ದರೂ ಒಳ್ಳೆಯದು.
- ಉಸಿರಾಟದ ತೊಂದರೆ, ಜ್ವರ ತುಂಬಾ ಇದ್ದರೆ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: Egg Storage:ಮೊಟ್ಟೆಗಳನ್ನ ಫ್ರಿಡ್ಜ್ ನಲ್ಲಿ ಇಡಬಾರದ? ಈ ಕುರಿತು ಅಧ್ಯಯನ ಹೇಳಿದ್ದೇನು?