ನವದೆಹಲಿ: (ಜ.17) Republic Day Tabloid: ಗಣರಾಜ್ಯೋತ್ಸವದ ಪರೇಡ್ನಲ್ಲಿ ಸ್ತಬ್ಧಚಿತ್ರದ ಪ್ರದರ್ಶನದ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಘರ್ಷ ಉಂಟಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ (Kerala Cm Pinaray Vijayan), ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (West Bengal Cm Mamatha Banerjee) ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಪಶ್ಚಿಮ ಬಂಗಾಳದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್, ಕೇರಳ ಸರ್ಕಾರದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಇವೆರಡು ಸ್ತಬ್ಧಚಿತ್ರಗಳಿಗೆ ಕೇಂದ್ರ ಸರ್ಕಾರ ನಿರಾಕರಿಸಿದೆ ಹಾಗೂ ನಿರಾಕರಿಸಿದ ಬಗ್ಗೆ ಕಾರಣವನ್ನು ತಿಳಿಸಿಲ್ಲ ಇದರಿಂದ ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಮಮತಾ ಬ್ಯಾನರ್ಜಿಯವರು ಈ ಸರ್ಕಾರದ ಈ ಮನೋಭಾವದಿಂದ ಬಂಗಾಳಿ ಜನರಿಗೆ ನೋವುಂಟಾಗಿದೆ. ನೇತಾಜಿಯವರ ಸ್ತಬ್ಧಚಿತ್ರ ತಿರಸ್ಕರಿಸುವ ಮೂಲಕ ಅವರ ಹೋರಾಟವನ್ನು ಅವಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಸ್ತಬ್ಧಚಿತ್ರ ಆಯ್ತೆ:
ದಕ್ಷಿಣ ಭಾರತದಿಂದ ಕರ್ನಾಟಕದ ಸ್ತಬ್ಧಚಿತ್ರ ಮಾತ್ರ ಆಯ್ಕೆಯಾಗಿರುವುದು ಇತರ ರಾಜ್ಯಗಳಿಗೆ ಅನ್ಯಾಯ ಉಂಟಾಗಿದೆ. ಈ ಪೈಕಿ ತಮಿಳುನಾಡು ಮಹಾರಾಷ್ಟ್ರ ಗೋವಾ ಆಂಧ್ರಪ್ರದೇಶ ಕೂಡ ಪಟ್ಟಿಯಲ್ಲಿ ಸೇರಿದೆ.ಕೇಂದ್ರ ಕರದ ನಿರ್ಧಾರದಿಂದ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ದಕ್ಷಿಣ ಭಾರತದ ಅನುಪಸ್ಥಿತಿ ದೊಡ್ಡ ಪ್ರಮಾಣದಲ್ಲಿ ಎದ್ದು ಕಾಣಲಿದೆ.
9 ನಿಯಮಗಳ ಪ್ರಕಾರ ರಾಜ್ಯದ ಮೂರು ಪ್ರಶ್ನೆಗಳನ್ನು ಕೇಂದ್ರದ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಅದರ ಜೊತೆಗೆ ವಿಷಯದ ಮಹತ್ವವನ್ನು ವಿವರಿಸಲಾಗುತ್ತದೆ ಒಂದು ವೇಳೆ ರಾಜ್ಯದ ಮೊದಲ ಆದ್ಯತೆಯ ವಿಷಯ ಕೇಂದ್ರದ ತಕರಾರು ಗಳಲ್ಲಿ ಇದ್ದಲ್ಲಿ ಎರಡನೇ ಅಥವಾ ಮೂರನೇ ವಿಷಯವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ.
ಆದರೆ ಕೇಂದ್ರ ಸರ್ಕಾರ ಯಾವ ನಿಯಮವನ್ನು ಪಾಲಿಸದೆ ಕರ್ನಾಟಕ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ನಿರಾಕರಿಸಿದೆ. ಹಾಗೂ ಈವರೆಗೂ ಇದರ ಬಗ್ಗೆ ಕೇಂದ್ರ ಸರ್ಕಾರ ನಿಖರ ಕಾರಣ ನೀಡಿಲ್ಲ.
ರಾಜ್ಯೋತ್ಸವದ ಪರೇಡ್ನಲ್ಲಿ ರಾಜ್ಯಪತ್ರದಲ್ಲಿ ನಡೆಯಲಿರುವ ದಕ್ಷಿಣ ಭಾರತವನ್ನು ಕರ್ನಾಟಕ ಮಾತ್ರ ಪ್ರತಿನಿಧಿಸುತ್ತದೆ ಕರ್ನಾಟಕದ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯಾಧಾರಿತ ಸ್ತಬ್ಧಚಿತ್ರ ಕರ್ನಾಟಕದಿಂದ ಆಯ್ಕೆಯಾಗಿದೆ. ಗಣರಾಜ್ಯೋತ್ಸವದಲ್ಲಿ ಸತತ 13 ನೇ ಬಾರಿಗೆ ಕರ್ನಾಟಕಕ್ಕೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ.
ಇದನ್ನೂ ಓದಿ:Narayana Guru:ಹಿಂದೂ ಧರ್ಮದ ಬಗ್ಗೆ ಮಾತಾಡುವ ನೈತಿಕತೆ ಇದಿಯೇ? : ವಿಪಕ್ಷನಾಯಕ ಸಿದ್ದರಾಮಯ್ಯ