ಬೆಂಗಳೂರು: (ಜ.17) Narayana Guru: ಖ್ಯಾತ ಸಮಾಜ ಸುಧಾರಕ ನಾರಾಯಣ ಗುರುಗಳಿಗೆ ಬಿಜೆಪಿ ಸರ್ಕಾರ ಅವಮಾನಿಸಿದೆ ಬಿಜೆಪಿ ಸರ್ಕಾರ ದೇಶಕ್ಕೆ ಕ್ಷಮೆ ಕೇಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ನಾರಾಯಣ ಗುರುಗಳಿಗೆ ಮಾಡಿರುವ ಅವಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಏನು ಪ್ರತಿಕ್ರಿಯಿಸದೇ ಇರುವುದು ಆಶ್ಚರ್ಯವಾಗಿದೆ? ಹಾಗಾದ್ರೆ ಅವಮಾನಕ್ಕೆ ಮೋದಿ ಅವರ ಸಹಮತ ಇದೆ ಎಂದೇ ಅರ್ಥವಿದೆಯೆಂದು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಗಳಲ್ಲಿ ಪ್ರಶ್ನಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣಗುರುಗಳ ಜಯಂತಿಯನ್ನು ಅಧಿಕೃತವಾಗಿ ಆಚರಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿದೆ ಹಾಗೂ ಇದರಿಂದಾಗಿ ಗುರುಗಳ ಚಿಂತನೆ ಹಾಗೂ ಆದರ್ಶ ಸಂದೇಶಗಳು ರಾಜ್ಯದ ಮೂಲೆ ಮೂಲೆಗೆ ತಲುಪುತ್ತದೆ ಎಂಬ ಹೆಮ್ಮೆ ಇತ್ತು. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಪ್ರಾಮುಖ್ಯತೆ ಕೊಟ್ಟು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಹಿಂದೂ ಧರ್ಮದ ಸುಧಾರಕ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶವನ್ನು ನಿರಾಕರಿಸಿ ಅವಮಾನ ಮಾಡಿರುವುದು ಖಂಡನೀಯ.
ಶತಮಾನಗಳ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತಶಾಹಿ ವ್ಯವಸ್ಥೆಯ ನಡೆದದ್ದು ಹಿಂದೂ ಧರ್ಮದ ಸುಧಾರಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು ನಾರಾಯಣ ಗುರುಗಳು. ಅಂತವರನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಅವಮಾನಿಸಿದೆ. ಹಿಂದೂ ಧರ್ಮದ ಬಗ್ಗೆ ನಿಮಗೆ ಮಾತನಾಡಲು ನೈತಿಕತೆ ಇದೆಯೇ ಮೂಗಿನಡಿಯಲ್ಲೇ ನಾರಾಯಣ ಗುರುಗಳಿಗೆ ಹವಮಾನ ಮಾಡಿರುವುದಕ್ಕೆ ಮೋದಿ ಅವರ ಸಹಮತ ಎಂದು ಪ್ರಶ್ನಿಸಿದ್ದಾರೆ.
ಏನಿದು ವಿವಾದ?
ಕೇಂದ್ರ ಸರ್ಕಾರ ನಡೆಸುವ ಗಣರಾಜ್ಯೋತ್ಸವದಲ್ಲಿ ಬರವಣಿಗೆಗೆ ಈ ವರ್ಷ ಕೇರಳ ರಾಜ್ಯವು ಕಳಿಸಿದ್ದ ಸ್ತಬ್ಧಚಿತ್ರವನ್ನು ತಿರಸ್ಕೃತ ಮಾಡಿ ಬದಲಿಗೆ ಶಂಕರಾಚಾರ್ಯರ ಮೂರ್ತಿಯನ್ನು ಬಳಸಲು ಸೂಚಿಸಿತ್ತು. ಬಳಿಕ ಕೇರಳ ಸ್ತಬ್ಧಚಿತ್ರಪ್ರದರ್ಶನಕ್ಕೆ ಅನುಮತಿಯನ್ನು ನಿರಾಕರಿಸಿತು.

ಮಹಾನ್ ವ್ಯಕ್ತಿಗಳು ಗೌರವಿಸಿದ್ದರು:
ನಾರಾಯಣ ಗುರುಗಳನ್ನು, ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧೀಜಿ ಅಂಬೇಡ್ಕರ್ ಅವರು ಗೌರವಿಸಿದ್ದರು ಆದರೆ ಬಿಜೆಪಿ ಸರ್ಕಾರ ಅವಮಾನಿಸಿದೆ. ಗುರುಗಳ ಕ್ರಾಂತಿಕಾರಿ ಸಂದೇಶವನ್ನು ಸಾರುವ ಜೊತೆಗೆ ಮಹಿಳೆಯರ ಸುರಕ್ಷತೆ, ಜಟಾಯು ಪಕ್ಷಿಯ ಪ್ರತಿಮೆ ಹಾಕಿ ಸಿದ್ಧಪಡಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ತಿರಸ್ಕರಿಸಿ ಅವಮಾನ ಮಾಡಿರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Pandit Birju Maharaj: ಪದ್ಮವಿಭೂಷಣ ಪುರಸ್ಕೃತ, ಖ್ಯಾತ ಕಥಕ್ ನೃತ್ಯಗಾರ ಬಿರ್ಜೂ ಮಹಾರಾಜ್ ನಿಧನ