Heart Melting Story: (ಜ.17) ಮಾಲೀಕರಿಗೂ ಪ್ರಾಣಿಗಳ ಮಧ್ಯೆ ಅವಿನಾಭವ ಸಂಬಂಧಗಳು ಹುಟ್ಟುತ್ತದೆ.ಸಾಕುಪ್ರಾಣಿಗಳು ಮನೆಯಲ್ಲಿರುವ ಮಾಲೀಕರನ್ನು ಹೆಚ್ಚು ಪ್ರೀತಿ ಮಾಡುತ್ತೆ, ಮಾಲೀಕರ ಗಮನವನ್ನು ಸೆಳೆಯಲು ನೂರಾರು ಯತ್ನಗಳನ್ನು ಕೂಡ ಮಾಡುತ್ತದೆ. ಅದೇ ಮಾಲೀಕ ಹುಷಾರ್ ಇಲ್ಲದೆ ಇರುವಾಗ ಅಥವಾ ಕೊನೆಯುಸಿರೆಳೆದಾಗ ಪ್ರಾಣಿಗಳು ತುಂಬಾ ದುಃಖ ಪಡುತ್ತದೆ ಅದರಲ್ಲೂ ನಾಯಿಗಳು ಅತಿ ಹೆಚ್ಚು ಸಂಕಟ ಪಡುತ್ತದೆ. ಆದರೆ ಇಲ್ಲಿ ಬೆಕ್ಕು ತನ್ನ ಮಾಲೀಕನ ನೆನಪಿನಲ್ಲೇ ಇನ್ನೂ ಕಾಲ ಕಳೆಯುತ್ತಿದೆ.

ಮನುಷ್ಯರಂತೆಯೇ ಸಾಕು ಪ್ರಾಣಿಗಳಿಗೂ ಅದರಲ್ಲೂ ಬೆಕ್ಕಿಗೆ ನಾಯಿಗಳಂತೆ ಜಾಸ್ತಿ ನಂಬಿಕೆ ಇಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿ ಅದು ಸುಳ್ಳಾಗಿದೆ. ತನ್ನ ಮಾಲಿಕ ಅಗಲಿದ ಮೇಲೆ ಬೆಕ್ಕೊಂದು ತುಂಬಾ ಬೇಸರದಿಂದ ದಿನ ಕಳೆಯುತ್ತಿದ್ದೆ.
ಸರ್ಬಿಯಾದ ಮಾಜಿ ಮುಫ್ತಿ ಅಂದರೆ ಧರ್ಮಗುರು ಶೇಖ್ ಮುವಾಮೆರ್ ಜುಕೊರ್ಲಿ ಅವರ ಬೆಕ್ಕು ಎರಡುವರೆ ತಿಂಗಳಿನಿಂದಲೂ ಅವರ ಸಮಾಧಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕಳೆದ ವರ್ಷ ನವೆಂಬರ್ 6ರಂದು ಧರ್ಮಗುರು ಮೃತಪಟ್ಟಿದ್ದರು. ಅಂದಿನಿಂದಲೂ ಅವರ ಸಮಾಧಿಯ ಮೇಲೆ ಬೆಕ್ಕು ಕುಳಿತುಕೊಂಡಿದೆ.
ಸೈಬೀರಿಯಾದಲ್ಲಿ ಇಂದಿನ ವಾತಾವರಣ ತುಂಬಾ ಚಳಿಯಿಂದ ಕೂಡಿದೆ. ವಿಪರೀತ ಚಳಿಯಿಂದ ಹಿಮದ ಗಾಳಿ ಜಾಸ್ತಿಯಾಗಿದೆ ಆದರೆ ಸಮಾಧಿ ಮೇಲೆ ಕುಳಿತಿರುವ ಸಮಾಧಿಯ ಮೇಲೆ ಕುಳಿತುಕೊಂಡಿದೆ. ಬೆಕ್ಕಿನ ಭಾವನೆಗಳು ಅರ್ಥವಾಗುವುದು ತುಂಬಾ ಕಷ್ಟ ಆದರೆ ಈ ಬೆಕ್ಕಿನ ಕಥೆಯನ್ನು ಕೇಳಿದರೆ ನಿಜಕ್ಕೂ ಮಾಲೀಕನ ಮೇಲಿದ್ದ ಪ್ರೀತಿ, ಅವರೊಟ್ಟಿಗೆ ಇದ್ದ ಅವಿನಾಭಾವ ಸಂಬಂಧ ಎಂತಹದ್ದು ಎನ್ನುವುದು ನಿಜವಾಗಿದೆ.
ಬೆಕ್ಕು ಸಮಾಧಿ ಮೇಲೆ ಕುಳಿತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
After Mufti Muamer Zukorlić passed away last week, his Cat has not left his Grave since his Funeral, and is always seen standing by the Grave of the Mufti.
— Lavader (@LavBosniak) November 9, 2021
Even in death, his Cat wants to be close to him no matter what. pic.twitter.com/BKP8bYD6MY
Update: His Cat is still there… https://t.co/frwD8H1S2K pic.twitter.com/Lfq4eRHCiR
— Lavader (@LavBosniak) January 10, 2022
Pandit Birju Maharaj: ಪದ್ಮವಿಭೂಷಣ ಪುರಸ್ಕೃತ, ಖ್ಯಾತ ಕಥಕ್ ನೃತ್ಯಗಾರ ಬಿರ್ಜೂ ಮಹಾರಾಜ್ ನಿಧನ