ಉಡುಪಿ: (ಜ.16) : Scarf: ಕರಾವಳಿಯಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾಗಿ ಇರುವುದಕ್ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಾದ ಬಳಿಕ ಹಲವೆಡೆ ವಿದ್ಯಾಸಂಸ್ಥೆಗಳಲ್ಲಿ ಸ್ಕಾರ್ಫ್ ವಿವಾದ ಮತ್ತೊಮ್ಮೆ ಸುದ್ದಿಯಾಗಿದೆ.
ಕಾಲೇಜುಗಳಲ್ಲಿ ಸ್ಕಾರ್ಫ್ ಕುರಿತು ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದ್ದು, ಇದು ಮುಸ್ಲಿಮರ ಸಂವಿಧಾನದತ್ತ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.
ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದತ್ತ ದೊಡ್ಡಸಂಖ್ಯೆಯಲ್ಲಿ ಮುಖ ಮಾಡಿದ್ದಾರೆ. ವೈದ್ಯಕೀಯ ತಾಂತ್ರಿಕ ಕಾನೂನು ಸೇರಿದಂತೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆಯರು ಹೆಜ್ಜೆ ಹಾಕುತ್ತಿದ್ದಾರೆ ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಬಹುದು.
ಇಂತಹ ಸಂದರ್ಭದಲ್ಲಿ ಕರಾವಳಿಯ ಭಾಗದಲ್ಲಿ ವಿದ್ಯಾರ್ಥಿನಿಯರು ತಮ್ಮ ಸಾಂಪ್ರದಾಯಿಕ ಉಡುಪು ಸ್ಕಾರ್ಫ ಧರಿಸಿ ಬಂದಿರುವುದಕ್ಕೆ ವಿವಾದ ವ್ಯಕ್ತವಾಗಿದೆ ಈ ಹಿನ್ನೆಲೆಯಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ, ಮುಸ್ಲಿಮರ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಹಗರಣ ವಾಗಿದೆ ಎಂದು ಹೇಳಿದ್ದಾರೆ.

ತರಗತಿಯಿಂದ ಹೊರಹಾಕಿದ ವಿದ್ಯಾಸಂಸ್ಥೆ:
ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಿ ಬಂದ ಕಾರಣಕ್ಕೆ 6 ಮಂದಿ ವಿದ್ಯಾರ್ಥಿನಿಯರನ್ನು ಹಲವು ದಿನಗಳಿಂದ ತರಗತಿಯಿಂದ ಹೊರ ಹಾಕಲಾಗಿದೆ. ಮಂಗಳೂರು ಸಮೀಪದ ಐಕಳ ಪಾಂಪೈ ಕಾಲೇಜಿನಲ್ಲೂ ಸಂಘಪರಿವಾರದ ಪ್ರಚೋದನೆಗೊಳಗಾದ ಕೆಲವೊಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು ಸ್ಕಾರ್ಫ್ ನಿಷೇಧ ಮಾಡಬೇಕೆಂದರು.
ಚಿಕ್ಕಮಗಳೂರಿನ ಕೊಪ್ಪದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಇದೇ ರೀತಿಯ ವಿವಾದ ಹುಟ್ಟು ಹಾಕಲಾಯಿತು. ವಾಸ್ತವದಲ್ಲಿ ಈಗ ವಸ್ತ್ರ ಸಂಹಿತೆ ಜಾರಿಯಲ್ಲಿರುವುದು ಎಸ್ಸೆಸ್ಸೆಲ್ಸಿ ವರೆಗೆ ಮಾತ್ರ. ಈ ನಡುವೆ ಪಿಯು, ಪದವಿ ಕಾಲೇಜುಗಳಲ್ಲಿ ಯಾವುದೇ ವಸ್ತ್ರ ಸಂಹಿತೆ ಜಾರಿಯಲ್ಲಿ ಇಲ್ಲದಿರುವಾಗ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಬಾರದೆನ್ನುವುದು ವಿತಂಡ ವಾದವಾಗಿದೆ. ಅದರೊಂದಿಗೆ ಸ್ಕಾರ್ಫ್ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕುವ ಪ್ರಾಂಶುಪಾಲರ ನಡೆಯೂ ಅವಿವೇಕತನದ್ದಾಗಿದೆ.
ಈಗಾಗಲೇ ಕಾಲೇಜು ಮಟ್ಟದಲ್ಲಿ ರೂಪಿಸಿರುವ ವಸ್ತ್ರ ಸಂಹಿತೆಯನ್ನು ಪಾಲಿಸಿಕೊಂಡು ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿದ್ದಾರೆ. ಜೊತೆಗೆ ಬಹುತೇಕ ಯೂನಿಫಾರಂನ ಶಾಲನ್ನೇ ಸ್ಕಾರ್ಫ್ ಅನ್ನಾಗಿ ಬಳಸಲಾಗುತ್ತಿದೆ. ವಾಸ್ತವಾಂಶ ಹೀಗಿರುವಾಗ ಸಾಂಪ್ರಾದಾಯಿಕ ಸ್ಕಾರ್ಫ್ ಅನ್ನು ಧರಿಸಬಾರದೆಂಬ ಒತ್ತಡ ಹೇರುವುದು ಸಂವಿಧಾನ ಬಾಹಿರವಾಗಿದೆ.