ಬೆಂಗಳೂರು: (ಜ.16) Jolly Ride: ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾರಾಂತ್ಯದ ಕರ್ಫ್ಯೂ ವಿಧಿಸಲಾಗಿದ್ದು ಇದು ಎರಡನೇ ವಾರದ ವೀಕೆಂಡ್ ಕರ್ಪ್ಯು ಆಗಿದೆ. ಈ ನಿಟ್ಟಿನಲ್ಲಿ ಪ್ರತಿ ವೀಕೆಂಡ್ ನಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದರು ಕೆಲವೊಂದು ಘಟನೆಗಳು ಬೆಂಗಳೂರು ನಗರದಲ್ಲಿ ನಡೆದಿದೆ.
ರಸ್ತೆಯಲ್ಲಿ ಅನಗತ್ಯ ವಾಹನ ಸಂಚಾರ ಮಾಡುವವರಿಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. 5:00 ಗಂಟೆ ಯಿಂದಲೇ ವಾಹನ ತಪಾಸಣೆಗೆ ಆರಂಭಿಸುವ ಪೊಲೀಸರು ವಿಚಾರಣೆಗೆ ಒಳಪಡಿಸಿ, ಅಗತ್ಯವಿದ್ದವರಿಗೆ ಅನುಮತಿ ನೀಡಿ. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ನಗರದಲ್ಲಿ ಒಟ್ಟು 42 ವಾಹನಗಳ ಜಪ್ತಿ ಮಾಡಿದ್ದಾರೆ. ಈ ನಡುವೆ ಸುಳ್ಳು ಹೇಳಿಕೊಂಡು ಮಹಿಳೆಯರು ಕಾರಿನಲ್ಲಿ ಹೋಗುತ್ತಿರುವುದನ್ನು ಪೊಲೀಸರು ಪರಿಶೀಲಿಸಿ ಕಾರು ಜಪ್ತಿ ಮಾಡಲಾಗಿದೆ.

ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಐವರು ಮಹಿಳೆಯರು ಕಾರಿನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಪೊಲೀಸರು ತಡೆದು ಕೇಳಿದಾಗ ಮದುವೆಗಾಗಿ ಹೋಗುತ್ತಿದ್ದೇವೆ ಎಂದು ಮಹಿಳೆಯರು ತಿಳಿಸಿದ್ದಾರೆ. ಮದುವೆ ಆಹ್ವಾನ ಪತ್ರ ಕೇಳಿದಾಗ ಯಾವ ಪತ್ರಿಕೆಯೂ ಕಾರಿನಲ್ಲಿ ಸಿಗಲಿಲ್ಲ. ಬಳಿಕ ಪರಿಶೀಲಿಸಿದಾಗ ಯಾವ ಮದುವೆಗೆ ಹೋಗುತ್ತಿರಲಿಲ್ಲ ಸುಮ್ಮನೆ ಹೊರಗಡೆ ಬಂದಿದ್ದಾರೆ ಎಂಬುದು ಗೊತ್ತಾಗಿದೆ. ಸುಳ್ಳು ಹೇಳಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರನ್ನು ಜಪ್ತಿ ಮಾಡಿದ್ದರೆ. ಐವರು ಆಟೋದಲ್ಲಿ ಮನೆಗೆ ಹಿಂತಿರುಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.