Couple Travel: (ಜ.16) ಜಗತ್ತನ್ನು ಸುತ್ತುವವರಿಗೆ, ಸಾಹಸ ಮಾಡುವವರಿಗೆ ವಯಸ್ಸು ಅಡ್ಡ ಬರುವುದಿಲ್ಲ. ಸಾಮಾನ್ಯವಾಗಿ ಯುವಕ-ಯುವತಿಯರು ಗೊತ್ತಿಲ್ಲದ ಸ್ಥಳಗಳಿಗೆ ಸೋಲೋ ಟ್ರಕ್ಕಿಂಗ್ ಮಾಡುತ್ತಾರೆ. ಬೇರೆ ಬೇರೆ ದೇಶಗಳು, ಅಲ್ಲಿಯ ಭಾಷೆ, ಸಂಸ್ಕೃತಿ, ಇನ್ನಿತರ ವಿಶೇಷ ವಿಚಾರಗಳನ್ನು ತಿಳಿಯಲು ಬಯಸುತ್ತಾರೆ. ಅದೇ ರೀತಿ ಇನ್ನೊಂದು ದಂಪತಿ ತಮ್ಮ ಎನ್ ಫೀಲ್ಡ್ ಬುಲೆಟ್ ಹಾಗೂ ಸೈಡ್ ಕಾರಿನೊಂದಿಗೆ ಭಾರತದ ಎಲ್ಲ ರಾಜ್ಯಗಳನ್ನು ಸುತ್ತಿದ್ದಾರೆ. ಅಷ್ಟಕ್ಕೂ ಇವರ ವಯಸ್ಸನ್ನ ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ.

ಪ್ರವಾಸದ ಕಥೆ:
ಗುಜರಾತ್ ವಡೋದರಾದ 77 ವರ್ಷದ ಮೋಹನ್ಲಾಲ್ ಚೌಹಾಣ್ ಹಾಗೂ ಅವರ ಪತ್ನಿ 21 ವರ್ಷದ ಅವರ ಪ್ರಯಾಣದ ಕಥೆ. ಇವರಿಬ್ಬರೂ ಬರೋಬ್ಬರಿ ಮೂವತ್ತು ಸಾವಿರ ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಇವರು ತಮ್ಮ ಪ್ರಾಣವನ್ನು ಪ್ರಾರಂಭ ಮಾಡುವುದಕ್ಕೆ ತುಂಬಾ ಕಷ್ಟವಾಗಿತ್ತು ಯಾಕೆಂದರೆ ಇವರು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಮಾಜಿ ಉದ್ಯೋಗಿಯಾಗಿದ್ದರು. 2011ರಲ್ಲಿ ಮೋಹನ್ ಲಾಲ್ ಅವರಿಗೆ ಹೃದಯಾಘಾತವಾಗಿ ವೈದ್ಯರು ಮೆಟ್ಟಲುಗಳನ್ನು ಹತ್ತಬಾರದು ಹಾಗೂ ಮನೆಯಲ್ಲೇ ಕುಳಿತು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನೆಯಲ್ಲಿ ಕುಳಿತುಕೊಳ್ಳುವ ಸ್ವಭಾವದವರಲ್ಲ ಮೋಹನ್ ಲಾಲ್ . ಹಾಗೆಯೇ ಅವರು ತಮ್ಮ ಸ್ವಂತ ನಿಯಮಗಳ ಮೇಲೆ ಬದುಕಲು ಬಯಸಿದ್ದರು ಹಾಗಾಗಿ 2015 ರಲ್ಲಿ ಸ್ವಯಂನಿವೃತ್ತಿ ತೆಗೆದುಕೊಂಡು ಏಕಾಂಗಿ ಪ್ರವಾಸವನ್ನು ಮಾಡಲು ಪ್ರಾರಂಭಿಸಿದರು ಅಷ್ಟೇ ಅಲ್ಲದೆ ತಮ್ಮ ಪ್ರವಾಸದಲ್ಲಿ ತನ್ನ ಪತ್ನಿಯೂ ಕೂಡಾ ಸೇರಬೇಕೆಂದು ಬಯಸಿದ್ದರು.

2010ರಲ್ಲಿ ಮೋಹನ್ ಲಾಲ್ ಅವರ ಪತ್ನಿಗೆ ಕಾಲು ಮುರಿತ ವಾಗಿತ್ತು, ಇದರಿಂದ ಅವರು ಹೆಚ್ಚು ಹೊತ್ತು ಓಡಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪತ್ನಿಗೆ ಸುರಕ್ಷಿತ ಪ್ರಯಾಣಕ್ಕಾಗಿ ಬುಲೆಟ್ ಗೆ ಸೈಡ್ ಕಾರ್ ಜೋಡಿಸಿದರು.
2016ರಲ್ಲಿ ತಮ್ಮ ಪ್ರವಾಸವನ್ನು ಆರಂಭಿಸಿದರು ದಂಪತಿಗಳು ಮೊದಲು ವಾಡೋದರ ಪ್ರಯಾಣ ಆರಂಭಿಸಿ, ಮಹಾರಾಷ್ಟ್ರ ಕೇರಳ, ಗೋವಾ ಹಾಗೂ ತಮಿಳುನಾಡು ಹೀಗೆ ಪ್ರಯಾಣವನ್ನು ಆರಂಭಿಸಿದರು.ತಮ್ಮ ಪ್ರಯಾಣದ ವೆಚ್ಚಗಳನ್ನು ಲೀಲಾಬೆನ್ ಅವರು ನಿಭಾಯಿಸುತ್ತಿದ್ದರು. ಪ್ರತಿದಿನ ಖರ್ಚಿಗಾಗಿ 3000 ದಿಂದ 4000ರೂ ಬಜೆಟ್ ಹಾಕುತ್ತಿದ್ದರು

ಇದರಲ್ಲಿ ಆಹಾರ ಪೆಟ್ರೋಲ್ ವಾಸ್ತವ್ಯ ಸೇರಿದಂತೆ ಇತರ ಖರ್ಚುಗಳು ಒಳಗೊಂಡಿತ್ತು. ಈ ರೀತಿ ತಮ್ಮ ಪ್ರತಿ ಪ್ರವಾಸಕ್ಕೂ ಕೇವಲ ಎರಡು ಲಕ್ಷಗಳನ್ನು ಖರ್ಚು ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ದಂಪತಿಗಳು ಪ್ರಯಾಣಿಸುತ್ತಿದ್ದ ಜಾಗಗಳಲ್ಲಿ ತಾವೇ ಅಡುಗೆಯನ್ನು ತಯಾರಿಸಿಕೊಂಡು ತಿನ್ನುತ್ತಿದ್ದರು.
2018ರಲ್ಲಿ ಮಧ್ಯಪ್ರದೇಶದಲ್ಲಿ ಪ್ರಯಾಣಿಸುವಾಗ ಪತ್ನಿ ಲೀಲಾ ಬೆನ್ ಅವರ ಪಾದದ ಮೂಳೆ ಮುರಿತಕ್ಕೆ ಒಳಗಾಯಿತು. ಹಾಗೂ ಈ ಮೂಲಕ ಶಸ್ತ್ರಚಿಕಿತ್ಸೆಗಾಗಿ ಪಡೆದುಕೊಳ್ಳಬೇಕಾಯಿತು. ಇದಾದ ಬಳಿಕ ತೀವ್ರ ನೋವಿನಿಂದ ಬಳಲುತ್ತಿದ್ದ ಅವರು ಎಂದಿಗೂ ತಮ್ಮ ನೋವನ್ನು ತನ್ನ ಪತಿಯೊಂದಿಗೆ ಹಂಚಿಕೊಳ್ಳಲಿಲ್ಲ. ಬದಲಾಗಿ ತಮ್ಮ ಪ್ರಯಾಣವನ್ನು ಆರಂಭಿಸಲು ಸಿದ್ಧರಾಗಿದ್ದರು. ಮೋಹನ್ ಲಾಲ್ ಅವರು ತಮ್ಮ ಪ್ರೀತಿ ಹೆಂಡತಿಯನ್ನು ನನ್ನ ಬುಲೆಟ್ ಗೆ ಎರಡನೇ ಬ್ಯಾಟರಿ ಎಂದು ಕರೆಯುತ್ತಿದ್ದರು.

ಕರೋನವೈರಸ್ ಕಾರಣದಿಂದಾಗಿ ಪ್ರಪಂಚದಾದ್ಯಂತ ಪ್ರಯಾಣವನ್ನು ನಿಲ್ಲಿಸಲಾಗಿದೆ. ಮೋಹನ್ ಲಾಲ್ ಹಾಗೂ ಲೀಲಾ ಬೆವರು ತಮ್ಮ ಪ್ರಯಾಣದ ಯೋಜನೆಗಳನ್ನು ಸದ್ಯದ ಮಟ್ಟಿಗೆ ತಡೆಹಿಡಿದಿದ್ದಾರೆ. ಪ್ರಯಾಣದ ಬಗ್ಗೆ ಪ್ರೀತಿಯಿಂದ ಮಾತನಾಡಿದ ಲೀಲಾ ಬೆನ್ ಅವರು ನನ್ನ ಪತಿಯೊಂದಿಗೆ ಫ್ರೆಂಡ್ಸ್ ಭಾಗ ಅವರು ನನ್ನ ಉತ್ತಮ ಸ್ನೇಹಿತರಾಗುತ್ತಾರೆ.
ಅವರೊಟ್ಟಿಗೆ ಪ್ರಯಾಣ ಮಾಡುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಪ್ರಯಾಣಿಸಲು ಯಾವುದೇ ವಯಸ್ಸಿಲ್ಲ ಎಂಬುದನ್ನು ಇವರಿಬ್ಬರೂ ಸಾಬೀತುಪಡಿಸಿದ್ದಾರೆ. ನಮ್ಮ ಜೀವ ಇರುವವರೆಗೂ ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ ಎಂದು ದಂಪತಿಗಳಿಬ್ಬರು ಹೇಳಿದ್ದಾರೆ.