ನವದೆಹಲಿ: (ಜ.15) Journalist Kamal Khan: ಹಿರಿಯ ಪತ್ರಕರ್ತ ಕಮಲ್ ಖಾನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖ ಸುದ್ದಿ ವಾಹಿನಿಯಾಗಿರುವ NDTV ಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಉತ್ತರಪ್ರದೇಶದ ಲಕ್ನೋ ದಲ್ಲಿರುವ ಬಟ್ಲರ್ ಕಾಲೋನಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಮಾಲ್ ಖಾನ್ ಅವರ ನಿಧನಕ್ಕೆ ಮಾಧ್ಯಮದಿಂದ ಹಾಗೂ ಅನೇಕ ರಾಜಕಾರಣಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಏನೇ ಕೆಲಸ ಮಾಡಿದರೂ ಉತ್ತಮವಾಗಿ ಮಾಡಬೇಕೆಂಬ ತತ್ವವನ್ನು ಕಮಲ್ ಖಾನ್ ಅವರು ಹೊಂದಿದ್ದರು. ಅತ್ಯಂತ ಹೃದಯವಂತ ಪತ್ರಕರ್ತ ಬದುಕಿನ ಕೊನೆಯ ದಿನವೂ ಕೆಲಸ ಮಾಡಿದ್ದರು ಎಂದು ಅವರ ಸಹೋದ್ಯೋಗಿಯೊಬ್ಬರು ಸ್ಮರಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಪತ್ರಕರ್ತೆ ಸುಪ್ರಿಯ ಶ್ರೀನಾಥ್ ಅವರು ಈ ಬಗ್ಗೆ ಸೂಕ್ತ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ. ಗಟ್ಟಿ ಪತ್ರಕರ್ತ ಹಾಗೂ ಮಹಾನ್ ವ್ಯಕ್ತಿ ಎಂದು ಕಮಲ್ ಖಾನ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಕಮಲ್ ಖಾನ್ ಅವರು ಎಲ್ಲರಿಗೂ ಆಪ್ತರಾಗಿ ಕೆಲಸಮಾಡುತ್ತಿದ್ದರು ಅವರ ಕೌಶಲ್ಯತೆ , ಹಿಂದಿಯಲ್ಲಿ ಮಾತನಾಡುತ್ತಿದ್ದ ಶೈಲಿ ಎಲ್ಲರಿಗೂ ಇಷ್ಟವಾಗುತ್ತಿತ್ತು.ರಾಮನಾಥ್ ಗೋಯೆಂಕಾ ಪ್ರಶಸ್ತಿ ಮತ್ತು ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದಿದ್ದರು.
NDTV ವಾಹಿನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು ಅವರ ಕುಟುಂಬಕ್ಕೆ ಭರಿಸಲಾಗದ ನಷ್ಟ ಸಂಭವಿಸಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಾಹಿನಿ ತಿಳಿಸಿದೆ. ಪತ್ನಿ ರುಚಿ ಹಾಗೂ ಮಗ ಅಮನ್ ಅವರನ್ನು ಅಗಲಿದ್ದಾರೆ.