Air Bag: (ಜ.15): ವಾಹನ ಚಾಲಕರಿಗೆ ಇನ್ನು ಮುಂದೆ ಈ ನಿಯಮ ಕಡ್ಡಾಯವಾಗಲಿದೆ. ವಾಹನ ಚಾಲಕರ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಹತ್ವದ ಘೋಷಣೆ ಮಾಡಿದೆ. 8 ಮಂದಿ ಕುಳಿತುಕೊಳ್ಳಬಹುದಾದ ಎಲ್ಲ ವಾಹನಗಳಿಗೆ ಏರ್ ಬ್ಯಾಗ್ ಕಡ್ಡಾಯಗೊಳಿಸುವ ನಿಯಮ ಜಾರಿಗೆ ತರಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಟ್ವೀಟ್ ಮಾಡಿದ್ದು ಎಂಟು ಮಂದಿ ಪ್ರಯಾಣ ಮಾಡಬಹುದಾದ ವಾಹನಗಳಲ್ಲಿ ಕನಿಷ್ಠ 6 ಏರ್ ಬ್ಯಾಗ್ ಕಡ್ಡಾಯ ಎಂಬ ಕರಡು ಜಿಎಸ್ಆರ್ ಅಧಿಸೂಚನೆಗೆ ಅನುಮೋದನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಪ್ರಯಾಣ ಮಾಡುವಾಗ ಎಲ್ಲ ಜನರ ಸುರಕ್ಷತೆಗಾಗಿ ನಿರ್ಧಾರ ಕ್ರಮಕೈಗೊಳ್ಳಲಾಗಿದೆ ಆಗಿರುವುದರಿಂದ ಅನುಕೂಲವಾಗಲಿದೆ ಅಥವಾ ಯಾವುದೇ ಕಂಪನಿಯ ಮಾದರಿಯ ವಾಹನವೇ ಏರ್ ಬ್ಯಾಗ್ ಹಾಕುವುದು ಕಡ್ಡಾಯ ಎಂದು ಹೇಳಿದ್ದಾರೆ.

ವಾಹನ ಚಾಲನೆಯಲ್ಲಿ ಅಪಘಾತವಾದಾಗ ಏರ್ ಬ್ಯಾಗ್ ಜೀವರಕ್ಷಕ ವಾಗಿ ಕಾರ್ಯನಿರ್ವಹಿಸುತ್ತದೆ. ಅಪಘಾತ ತಡೆ ಹಾಗೂ ಚಾಲಕರ ಸುರಕ್ಷತೆಗಾಗಿ ಚಾಲಕ ಹಾಗೂ ಆತನ ಪಕ್ಕದ ಸೀಟಿಗೆ ಏರ್ ಬ್ಯಾಗ್ ಕಡ್ಡಾಯ ಎಂಬ ನಿಯಮವನ್ನು ಈ ಹಿಂದೆ ಜಾರಿಗೊಳಿಸಲಾಗಿತ್ತು.
ಆದರೆ ಹಿಂಬದಿ ಅಥವಾ ಮುಂಬದಿಗೆ ಅಪಘಾತಕ್ಕೀಡಾದಾಗ ಹಿಂದಿನ ಸೀಟುಗಳಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಅಪಘಾತಗಳನ್ನು ತಪ್ಪಿಸಲು ಹೆಚ್ಚುವರಿ ಏರ್ ಬ್ಯಾಗ್ ಅಳವಡಿಸುವುದರಿಂದ ಮತ್ತಷ್ಟು ಪ್ರಾಣಾಪಾಯವನ್ನು ತಪ್ಪಿಸಬಹುದು.
The Ministry had already mandated the implementation of fitment of the driver airbag w.e.f 01st July 2019 and front co-passenger airbag w.e.f 01st January 2022. #RoadSafety #SadakSurakshaJeevanRaksha
— Nitin Gadkari (@nitin_gadkari) January 14, 2022
ಈ ನಿಯಮವು ಅನುಬಂಧ M 1 ವರ್ಗದ ವಾಹನಗಳಿಗೆ ಅಂದರೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಜನರು ಪ್ರಯಾಣ ಮಾಡಬಹುದಾದ ಕಾರುಗಳಿಗೆ ಮಾತ್ರ ಅನ್ವಯವಾಗಲಿದೆ.
ಸಾಮಾನ್ಯವಾಗಿ ಕಾರುಗಳ ಮುಂಭಾಗ ಏರ್ ಬ್ಯಾಗ್ ಅಳವಡಿಸಲು ಕನಿಷ್ಠ 5ರಿಂದ 8 ಸಾವಿರ ರುಪಾಯಿ ಖರ್ಚಾಗಲಿದೆ. ಇದೀಗ ಹಿಂಬದಿಗೆ ಏರ್ ಬ್ಯಾಗ್ ಅಳವಡಿಸಲು ಮತ್ತಷ್ಟು ಹಣ ಜಾಸ್ತಿ ಆಗುವ ಸಾಧ್ಯತೆಗಳು ಇದೆ.
ಏರ್ ಬ್ಯಾಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಇದನ್ನೂ ಓದಿ: Train Accident: ಪಶ್ಚಿಮ ಬಂಗಾಳದಲ್ಲಿ ರೈಲು ದುರಂತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ