ಪಶ್ಚಿಮ ಬಂಗಾಳ (ಜ.14): Train Accident: ಪಶ್ಚಿಮ ಬಂಗಾಳದಲ್ಲಿ ಹಳಿತಪ್ಪಿ ರೈಲು ದುರಂತ ಸಂಭವಿಸಿತ್ತು. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಗುಹವಾಟಿ-ಬಿಕಾನೇರ್ ಎಕ್ಸ್ಪ್ರೆಸ್ ರೈಲು ಮಾಯ್ನ ಗುರಿ ನಗರದ ಬಳಿ ರೈಲು ಹಳಿ ತಪ್ಪಿತ್ತು. ರೈಲಿನ ಸುಮಾರು 12 ಬೋಗಿಗಳು ಹಳಿತಪ್ಪಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಇಂದೂ ಕೂಡ ಸಾಗುತ್ತಿದ್ದು ಸುಮಾರು 45 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಸರ್ಕಾರದ ಮೂಲಗಳ ಪ್ರಕಾರ ರೈಲು ಅಪಘಾತದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹತ್ತು 10 ಮಂದಿಯ ಸ್ಥಿತಿ ಗಂಭೀರವಾಗಿದ್ದು ಗಾಯಗೊಂಡವರಲ್ಲಿ 24 ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ತೀರಾ ಗಂಭೀರ ಸ್ಥಿತಿಗೆ ತಲುಪಿರುವ ಪ್ರಯಾಣಿಕರನ್ನು ಸಿಲಿಗುರಿಯ ಉತ್ತರ ಬಂಗಾಳದ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
ಬೋಗಿಗಳಲ್ಲಿ ಸಿಲುಕಿದ ಪ್ರಯಾಣಿಕರು:
ರೈಲು ದುರಂತದಲ್ಲಿ ಪ್ರಯಾಣಿಕರು ಬೋಗಿಯೊಳಗೆ ಸಿಲುಕಿದ್ದರು. ಗ್ಯಾಸ ಕಟ್ಟರ್ ನಿಂದ ಬೋಗಿಗಳನ್ನು ಕತ್ತರಿಸಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಪಘಾತದ ಕುರಿತು ಉನ್ನತ ಮಟ್ಟದ ರೈಲ್ವೆ ಆಯುಕ್ತರು ತನಿಖೆಗೆ ಆದೇಶಿಸಿತ್ತು ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ಡಿಜಿ ರೈಲ್ವೆ ಮಂಡಳಿಯು ದೆಹಲಿಯಿಂದ ಅಪಘಾತದ ಸ್ಥಳಕ್ಕೆ ತೆರಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ಪರಿಹಾರ ಹಾಗೂ ಗಂಭೀರ ಗಾಯಗೊಂಡವರಿಗೆ 10 ಲಕ್ಷ, ಲಘುವಾಗಿ ಗಾಯಗೊಂಡವರಿಗೆ 25ಲಕ್ಷ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Journalist’s Life:ಪತ್ರಕರ್ತರ ಕೆಲಸವು ಬ್ಲೇಡ್ ಮೇಲಿನ ನೃತ್ಯ: ಸಿಜೆಐ ರಮಣ