ಎಸ್ಐ ಶಾಕ್! ಎಸ್ಪಿ ರಾಕ್
ತುಮಕೂರು: (ಜ 14) SP Car: ಆರೋಪಿಗಳನ್ನು ಬಾಡಿಗೆ ಕಾರು ತೆಗೆದುಕೊಂಡು ಬರುವಂತೆ ಎಸ್ಐ ದಂಡಿನಶಿವರ ಉಡಾಫೆ ಮಾತುಗಳನ್ನು ಆಡಿದ್ದರು ಇದರ ಬೆನ್ನಲ್ಲೇ ದೂರುದಾರರಿಗೆ ತಮ್ಮ ಕಾರನ್ನು ನೀಡುವ ಮೂಲಕ ಎಸ್ಐ ಗೆ ಪೊಲೀಸ್ ವರಿಷ್ಠಾಧಿಕಾರಿ ಶಾಕ್ ನೀಡಿದ್ದಾರೆ.
ಇಂಥದೊಂದು ಘಟನೆ ನಡೆದಿದ್ದು ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ ಕಚೇರಿಯಲ್ಲಿ. ಕೋಡಿಹಳ್ಳಿ ಯಲ್ಲಿ ಶಿವಮ್ಮ ಎನ್ನುವವರ ಮೇಲೆ ಹಲ್ಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಮ್ಮನ ಪುತ್ರ ಅರುಣ್, ಪ್ರಕಾಶ್ ಹಾಗೂ ಚಂದನ್ ಅವರ ಮೇಲೆ ದೂರು ನೀಡಿದ್ದರು
ಘಟನೆ ನಡೆದು ಮೂರು ತಿಂಗಳು ಆದರೂ ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸಿರಲಿಲ್ಲ ಬಗ್ಗೆ ಆರೋಪಿಗಳನ್ನು ಹುಡುಕಲು ಪ್ರಶ್ನಿಸಿದ್ದಕ್ಕೆ ಎಸ್ ಐ ಉಡಾಫೆ ಮಾತುಗಳನ್ನಾಡಿ, ಆರೋಪಿಗಳನ್ನು ಹುಡುಕಲು ಬಾಡಿಗೆ ಕಾರು ತೆಗೆದುಕೊಂಡು ಬರುವಂತೆ ಬೇಜವಾಬ್ದಾರಿಯ ಮಾತು ಹೇಳಿದ್ದರು.ಪಿಎಸ್ಐ ಶಿವಲಿಂಗಯ್ಯ ಹಾಗೂ ಸಿಪಿಐ ನವೀನ್ ಕೂಡ ಎಸ್ಐ ಮಾತಿಗೆ ಸಾಥ್ ನೀಡಿದರು.

ಎಸ್ಪಿ ಕಾರಿನಲ್ಲೇ ಬಂದ ದೂರುದಾರ:
ದೂರುದಾರ ಇವರ ಮಾತುಗಳಿಂದ ರೊಚ್ಚಿಗೆದ್ದು ವಿಚಾರವನ್ನು ಎಸ್ಪಿ ರಾಹುಲ್ ಕುಮಾರ್ ಅವರಿಗೆ ತಿಳಿಸಿದ್ದಾರೆ. ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧವೇ ದೂರು ನೀಡಿದ್ದರು. ಅನಂತರ ಎಸ್ಪಿ ರಾಹುಲ್ ಅವರು ತಾವು ಓಡಾಡುವ ಸರ್ಕಾರಿ ಕಾರನ್ನೇ ದೂರುದಾರ ನಾಗೇಂದ್ರ ಅವರಿಗೆ ಕೊಟ್ಟು ಕಳುಹಿಸಿದ್ದರು. ದೂರುದಾರ ಎಸ್ಪಿ ಅವರ ಕಾರಿನಲ್ಲಿ ಬಂದಿದ್ದನ್ನು ಕಂಡು ಪೊಲೀಸರು ಭಯಭೀತರಾಗಿದ್ದಾರೆ.
ಎಸ್ಬಿ ರಾಹುಲ್ ಅವರ ಸ್ಪಂದನೆ ಇಂದ ಪ್ರಕರಣಕ್ಕೆ ಬಲ ಬಂದಂತಾಗಿದೆ ಪ್ರಕರಣಗಳ ಇತ್ಯರ್ಥ ಆಗುವ ಸೂಚನೆಗಳಿವೆ ಅಧಿಕಾರಿಗಳ ಬೇಜವಾಬ್ದಾರಿ ಮಾತುಗಳಿಗೆ. ಎಸ್ಪಿ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.