Samanvi: (ಜ.14) ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಳಾಗಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಸ್ಕೂಟರ್ ನಲ್ಲಿ ತೆರಳುವಾಗ ಬೆಂಗಳೂರಿನ ಕೋಣನಕುಂಟೆ ಬಳಿ ಈ ದುರ್ಘಟನೆ ನಡೆದಿದ್ದು ಸ್ಥಳದಲ್ಲಿದ್ದ ವ್ಯಕ್ತಿಗಳು ಅಪಘಾತದ ಬಗ್ಗೆ ವಿವರಿಸಿದ್ದಾರೆ.
ಅಪಘಾತ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ನಾವು ಡಿ ಮಾರ್ಟ್ ಬಳಿ ನಿಂತಿದ್ದೆವು, ಆ ಸಮಯಕ್ಕೆ ತಾಯಿ-ಮಗಳು ಸ್ಕೂಟರ್ನಲ್ಲಿ ಬರುವಾಗ ಯಾರಿಗೆ ಸ್ವಲ್ಪ ಹೆಚ್ಚಾಯಿತು. ಆನಂತರ ಮಹಿಳೆ ಎಡಗಡೆಗೆ ಬಿದ್ದಿದ್ದರೂ ಹಾಗೂ ಹಾಗೂ ಲಾರಿ ಮುಂದೆ ಬಿದ್ದಿತ್ತು ಎಂದು ಜನ ಹೇಳುತ್ತಿದ್ದರು. ಆದರೆ ಮಗುವಿಗೆ ಪ್ರಜ್ಞೆ ತಪ್ಪಿತು ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಇನ್ನೋರ್ವ ಪ್ರತ್ಯಕ್ಷದರ್ಶಿಯವರು ಹೇಳಿದ ಪ್ರಕಾರ, ಈ ರಸ್ತೆ ಹಿಂದೆ ಸಿಗ್ನಲ್ ಇದೆ, ಆದರೂ ವಾಹ ಸವಾರರು ಅತ್ಯಂತ ವೇಗವಾಗಿ ಬರುತ್ತಾರೆ ಇನ್ನೊಂದು ರಸ್ತೆ ಅಡ್ಡ ಇರುವುದರಿಂದ ಸುತ್ತಿಕೊಂಡು ಬರಬೇಕು ಹಾಗಾಗಿ ಈ ರಸ್ತೆಯಲ್ಲಿ ಸ್ಥಳೀಯರು ಅಡ್ಡ ಹೋಗುತ್ತಾರೆ ಎದುರಿನಿಂದ ಬರುವ ವಾಹನಗಳಿಂದ ಆಕ್ಸಿಡೆಂಟ್ ಆಗುವ ಸಂಭವಗಳು ಜಾಸ್ತಿ ಎಂದು ಹೇಳಿದ್ದಾರೆ. ಫುಟ್ಪಾತ್ ಅನೇಕ ಗಾಡಿಗಳು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ ಇದನ್ನು ಪೊಲೀಸರು ಹಲವು ಬಾರಿ ಗಮನಿಸಿದ್ದರು ವ್ಯಾಪಾರ ನಡೆಯುತ್ತದೆ ಎಂದು ಹೇಳಿದ್ದಾರೆ. ವಾಹನಗಳು ಓಡಾಡುವುದಕ್ಕೆ ತುಂಬಾ ಚಿಕ್ಕದಾಗಿದೆ ಎಂದು ತಿಳಿಸಿದ್ದಾರೆ.
ಬಾಲಕಿ ನಿಧಾನಕ್ಕೆ ಸೃಜನ್ ಸಂತಾಪ:
ಬಾಲ ಕಲಾವಿದೆ ನನ್ನಮ್ಮ ಸೂಪರ್ಸ್ಟಾರ್ ರಿಯಾಲಿಟಿ ಶೋ ಸ್ಪರ್ಧೆಯ ಸಮನ್ವಿ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಕೆಯ ತಾಯಿ ಅಮೃತ ನಾಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ ಎಂದು ನಿರೂಪಕ ಸೃಜನ್ ಲೋಕೇಶ್ ಹೇಳಿದ್ದಾರೆ.
ಪುಟ್ಟ ಕಂದ ಸಮನ್ವಿ ಮಿಸ್ ಯು ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:Samanvi: ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಸ್ಪರ್ಧಿ ಅಪಘಾತದಲ್ಲಿ ಮೃತ್ಯು