ಬೆಂಗಳೂರು: (ಜ.15) Guest Lectures: ಕರ್ನಾಟಕ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬದಂದು ಶುಭಸುದ್ದಿ ನೀಡಿದೆ. ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲಿದೆ ಯುಜಿಸಿ ನಿಯಮ ಅನುಸರಿಸಿ ಅರ್ಹತೆ ನಿಗದಿಪಡಿಸಲಾಗುವುದು.
ಈವರೆಗೆ ₹13000 ವೇತನ ಪಡೆಯುತ್ತಿದ್ದವರು ಮುಂದಿನ ದಿನಗಳಲ್ಲಿ ₹ 32000 ವೇತನ ಪಡೆಯಲಿದ್ದಾರೆ.ಹಾಗೂ ₹11,000 ವೇತನ ಪಡೆಯುತ್ತಿದ್ದವರು ₹28,000 ವೇತನ ಪಡೆಯಲಿದ್ದಾರೆ.ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ಪಾವತಿ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಕಳೆದ ಒಂದು ತಿಂಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಅಂತೂ ಹಲವು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ.
ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ನಿರ್ಧಾರವು ಸಂಕ್ರಾಂತಿಗೆ ನೀಡುವ ಕೊಡುಗೆ ಎಂದು ಶ್ರೀ ಎನ್ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಉಪನ್ಯಾಸಕರ ಬೇಡಿಕೆ ಸ್ವರಗಳಾಗಿ ಸಮ್ಮತಿ ಸೂಚಿಸುವ ವಿಲೇವಾರಿ ಮಾಡಿದ್ದಾರೆ. ಸರ್ಕಾರದ ವತಿಯಿಂದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.


