Makara Sankranti: ದಕ್ಷಿಣ ಭಾರತದ ತಮಿಳುನಾಡು ಆಂಧ್ರಪ್ರದೇಶ ಕರ್ನಾಟಕ ಸೇರಿದಂತೆ ಅದ್ಧೂರಿಯಾಗಿ ಆಚರಿಸುವ ಹಬ್ಬ ಮಕರ ಸಂಕ್ರಾಂತಿ. ಹಿಂದೂ ಸಂಪ್ರದಾಯಗಳಲ್ಲಿ ಮಕರ ಸಂಕ್ರಾಂತಿಯು ಅತ್ಯಂತ ಮಂಗಳಕರ ದಿನ ಪಾಶ್ಚಾತ್ಯ ಕ್ಯಾಲೆಂಡರ್ ಪ್ರಕಾರ ಹಿಂದುಗಳಿಗೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಾಗೂ ಭಾರತದಾದ್ಯಂತ ಹಬ್ಬಕ್ಕೆ ವಿವಿಧ ಹೆಸರುಗಳಲ್ಲಿ ಕರೆಯಲಾಗುತ್ತದೆ.
ಮುಂಜಾನೆ ಸ್ನಾನ ಮಾಡಿದ ನಂತರ ಮನೆಯಲ್ಲಿ ಕಬ್ಬು ಕಡಲೆಕಾಯಿ ಎಳ್ಳು-ಬೆಲ್ಲ ಗೆಣಸು ಹಾಗೂ ಪೊಂಗಲ್ ಖಾದ್ಯ ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಪೂಜಿಸುತ್ತಾರೆ. ಆನಂತರ ದೇವಾಲಯಗಳಿಗೆ ಭೇಟಿ ನೀಡಿ ದಾನ ಪುಣ್ಯವನ್ನು ಅರ್ಪಿಸುತ್ತಾರೆ.

ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಹೆಸರು:
ದಕ್ಷಿಣ ಭಾರತದಲ್ಲಿ ಅಂದರೆ ತಮಿಳುನಾಡು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿಯನ್ನು ಪೊಂಗಲ್ ಎಂದು ಕರೆಯುತ್ತಾರೆ.
ಇನ್ನು ಪಂಜಾಬ್ ಹಾಗೂ ಹರಿಯಾಣದಲ್ಲಿ ಲೋಹ್ರಿ ಎಂದು ಕರೆಯಲಾಗುತ್ತದೆ ಮೊದಲ ದಿನ ಇದನ್ನು ಆಚರಿಸಲಾಗುತ್ತದೆ. ಇನ್ನು ಅಸ್ಸಾಮಿನಲ್ಲಿ ಮಾಘ ಬಿಹು, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಖಿಚಡಿ ಎಂದು ಕರೆಯುತ್ತಾರೆ
ಗುಜರಾತಿನಲ್ಲಿ ಗಾಳಿಪಟ ಹಾರಿಸುವ ಹಬ್ಬ ಎಂದು ಪ್ರಸಿದ್ಧಿ. ದೊಡ್ಡ ದೊಡ್ಡ ಕುಟುಂಬಗಳು ಸಂಬಂಧಿಕರು ನೆರೆಮನೆಯವರು ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ.
ಸಂಕ್ರಾಂತಿ ಶುಭದಿನದಂದು ಸೂರ್ಯನು ಕರ್ಕರಾಶಿ ಇಂದ ಮಕರರಾಶಿಗೆ ಸಂಕ್ರಮಣ ಮಾಡುತ್ತಾನೆ ಶನಿಯಿದ್ದರೆ ಮಕರ ರಾಶಿ ಎಂದು ನಂಬಲಾಗುತ್ತದೆ. ಶನಿಯು ಸೂರ್ಯಾದಿ ಪತಿಯ ಮಗ ಆದ್ದರಿಂದ ಬೇರೆ ರೀತಿಯಲ್ಲಿ ಹೇಳುವುದಾದರೆ ಸೂರ್ಯ ಭಗವಂತ ಅವನೊಂದಿಗೆ ಇರಲು ತನ್ನ ಮಗನ ಸ್ಥಳಕ್ಕೆ ಬರುತ್ತಾನೆ. ಹೀಗಾಗಿ ಹಿಂದಿನ ಕಥೆಯ ಪ್ರಕಾರ ಹಳೆಯ ಕಹಿ ಮತ್ತು ಜಗಳಗಳನ್ನು ಮರೆತು ಪ್ರೀತಿ ಮತ್ತು ಕಾಳಜಿಯಿಂದ ಹೊಸ ಹೆಜ್ಜೆ ಹಾಕುವುದು ಎಂದರ್ಥ.

ರೈತರಿಗೆ ಸುಗ್ಗಿ ಕಾಲ:
ಭಾರತದ ಬೆನ್ನೆಲುಬು ರೈತರಿಗೆ ಸಂಕ್ರಾಂತಿ ಹಬ್ಬ ಪ್ರಮುಖವಾದದ್ದು. ರೈತ ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆ ವರ್ಷವಿಡಿ ಬೆಳೆಗಳನ್ನು ಬೆಳೆಯುವ ಭೂಮಿಯಲ್ಲಿ ಶ್ರಮಿಸುತ್ತಾರೆ. ಮಕರ ಸಂಕ್ರಾಂತಿಯು ರೈತರಿಗೆ ಗೌರವದ ಹಬ್ಬ.
ಧಾನ್ಯ ಲಕ್ಷ್ಮಿ ಮನೆಗೆ ಬರುವ (ಸುಗ್ಗಿ) ಸಂದರ್ಭ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತಿದ್ದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಇದಕ್ಕೆ ಇರುವುದನ್ನು ನಾವು ಕಾಣಬಹುದು.
ಉತ್ತರಾಯಣ ಆರಂಭ:
ಮಕರ ಸಂಕ್ರಾಂತಿಯ ದಿನದಿಂದ ಪ್ರಾರಂಭವಾಗಿ ಹಬ್ಬ-ಹರಿದಿನ 16 ತಿಂಗಳ ಕಾಲ ಉತ್ತರಾಯಣದಲ್ಲಿ ಮರಣ ಹೊಂದಿದ ವ್ಯಕ್ತಿಯು ನೇರವಾಗಿ ಸ್ವರ್ಗವನ್ನು ತಲುಪುತ್ತಾನೆ ಎಂಬುದು ನಂಬಿಕೆ ಹಾಗೂ ಆ ವ್ಯಕ್ತಿಯು ಮರು ಜನ್ಮವನ್ನು ಹೊಂದುವುದಿಲ್ಲ ಎಂದು ನಂಬಲಾಗಿದೆ. ಮಹಾಭಾರತದ ಭೀಷ್ಮನು ಉತ್ತರಾಯಣ ಕಾಲ ಪ್ರಾರಂಭವಾಗುವ ವರೆಗೆ ತನ್ನನ್ನು ಮುಕ್ತಗೊಳಿಸಲು ಹಾಗೂ ಇಹಲೋಕಕ್ಕೆ ತಿಳಿಸಲು ಕಾಯುತ್ತಿದ್ದನೆಂದು ಹೇಳಲಾಗಿದೆ.
ಹಬ್ಬದ ಆಚರಣೆ:
ಸಂಕ್ರಾಂತಿ ಹಬ್ಬದ ದಿನದಂದು ಹೆಣ್ಣುಮಕ್ಕಳು ಅಲಂಕಾರ ಮಾಡಿಕೊಂಡು ಹೊಸ ವಸ್ತ್ರವನ್ನು ತೊಟ್ಟು ಮನೆಮನೆಗೂ ಎಳ್ಳು ಬೆಲ್ಲವನ್ನು ಹಂಚುತ್ತಾರೆ. ಪರಸ್ಪರ ಎಳ್ಳು-ಬೆಲ್ಲವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸುತ್ತಾರೆ. ಎಳ್ಳು-ಬೆಲ್ಲವನ್ನು ತಿಂದು ಒಳ್ಳೆ ಯನ್ನು ಮಾತನಾಡೋಣ ಎಂಬ ಸಂದೇಶ ಮಕರ ಸಂಕ್ರಾಂತಿಯ ಹಬ್ಬದಂದು ಹೇಳಲಾಗುತ್ತದೆ.
ಮಕರಜ್ಯೋತಿ
ಕೇರಳದಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನ ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಇದೆ