ಬೆಂಗಳೂರು: (ಜ.13) Mekedatu Padayathre:ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಹೈಕೋರ್ಟ್ ಪ್ರಶ್ನಿಸಿ, ಪಾದಯಾತ್ರೆ ತಡೆಯಲಾಗದಷ್ಟು ಸರ್ಕಾರ ಅಸಮರ್ಥವಾಗಿದೆಯೇ ಎಂದು ಕೇಳಿತ್ತು.ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪಾದಯಾತ್ರೆ ಹಾಗೂ ಆ ಉದ್ದೇಶಕ್ಕಾಗಿ ಸಾಗುವ ಜನ ಮತ್ತು ವಾಹನಗಳ ಓಡಾಟ ನಿಷೇಧಿಸಿ ಆದೇಶ ಹೊರಡಿಸಿದೆ.
ಪಾದಯಾತ್ರೆ ಕೈಬಿಡುವುದಿಲ್ಲ:
ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ನಿಗದಿತ ಅವಧಿಯ ಯಾತ್ರೆಯನ್ನು ಮಧ್ಯದಲ್ಲೇ ಕೈಬಿಡುವ ಪ್ರಶ್ನೆಯೇ ಇಲ್ಲ. ಮುಂದುವರಿಸಿಯೇ ತೀರುತ್ತೇವೆ’ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ‘ನಮ್ಮ ನೀರು ನಮ್ಮ ಹಕ್ಕು ಅಥವಾ ಮೇಕೆದಾಟು ಪಾದಯಾತ್ರೆ’ ಹೀಗೆ ಯಾವುದೇ ಹೆಸರಿನಲ್ಲಿ ಅಂತರ್ ಜಿಲ್ಲೆ ಮತ್ತು ರಾಮನಗರ ಜಿಲ್ಲೆಯೊಳಗೆ ವಾಹನಗಳು ಹಾಗೂ ಜನರ ಓಡಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ವಾಹನಗಳು ಓಡಾಟ ಹಾಗೂ ಜನರ ಸಾಗಣೆಗೆ ನಿರ್ಬಂಧಿಸಲು ಜಿಲ್ಲಾಧಿಕಾರಿಗಳು, ಎಸ್ಪಿಗಳು, ಪೊಲೀಸ್ ಕಮಿಷನರ್ ಮತ್ತು ಸಾರಿಗೆ ಆಯುಕ್ತರು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು.
ಮುಂದಿನ ಆದೇಶದವರೆಗೆ ವಾಹನಗಳ ಓಡಾಟ ಮತ್ತು ಯಾವುದೇ ವ್ಯಕ್ತಿ ಎಚ್ಚರಿಸಿದ್ದಾರೆ.ಆದೇಶವನ್ನು ಉಲ್ಲಂಘಿಸಿದರೆ ವಿಕೋಪ ನಿರ್ವಹಣೆ ಕಾಯ್ದೆ 2005 ರ ಸೆಕ್ಷನ್ 51 ಮತ್ತು 60 ರ ಅಡಿ ಹಾಗೂ ಐಪಿಸಿ 188 ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ
ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಲು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆದುಕೊಂಡು ಬರಲಾಗುತ್ತಿದೆ. ಇದರಿಂದ ರಾಜ್ಯದ ಅಪಾರ ಸಂಖ್ಯೆಯ ಜನರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಲಾಗಿದೆ. ಅಲ್ಲದೆ, ಕೋವಿಡ್ ಪರಿಸ್ಥಿತಿಯೂ ಬಿಗಡಾಯಿಸಲಿದೆ ಎಂದು ಅವರು ಆದೇಶದಲ್ಲಿ ವಿವರಿಸಿದ್ದಾರೆ.
‘ಜನತಾದಳದ ದೊಡ್ಡ ನಾಯಕ ಕುಮಾರಣ್ಣ ನಾವು ರಾಮನಗರದಿಂದ ಪಾದಯಾತ್ರೆ ಮಾಡಬಾರದು ಎನ್ನುತ್ತಾರೆ. ನಿನ್ನೆ ಅಶ್ವತ್ಥನಾರಾಯಣ ಸುದ್ದಿಗೋಷ್ಠಿ ನಡೆಸಿ ತಾವೇ ಮೇಕೆದಾಟು ಅಣೆಕಟ್ಟೆ ಕಟ್ಟುವುದಾಗಿ ಹೇಳಿದ್ದಾರೆ. ಹಾಗೆ ನಡೆದುಕೊಂಡರೆ ಸಂತೋಷ. ‘ಏನಾದರೂ ಮಾಡಿ ಗಲಾಟೆ ಮಾಡಿ’ ಎಂದೂ ಅವರು ಪ್ರಚೋದನೆ ನೀಡಿ ಹೋಗಿದ್ದಾರೆ. ಹೀಗಾಗಿಯೇ ಇಂದು ಎಲ್ಲ ಕಡೆ ಪೊಲೀಸರು ನಿಂತಿದ್ದಾರೆ. ಪೊಲೀಸರು ಏನೇ ದೊಣ್ಣೆ ಹಿಡಿದು ನಿಂತರೂ ಯಾರು ಹೆದರಬೇಕಾಗಿಲ್ಲ’ ಎಂದರು.