UP Election: (ಜ.13) ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದ್ದು, ಪಟ್ಟಿಯಲ್ಲಿ 50 ಮಹಿಳೆಯರು ಸೇರಿದ್ದಾರೆ. ವಿಶೇಷವೆಂದರೇ ಅಭ್ಯರ್ಥಿಗಳ ಪೈಕಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಮತ್ತು ಸೋನ್‌ಭದ್ರಾದಲ್ಲಿನ ಉಂಭ ಗ್ರಾಮದಲ್ಲಿ ಭೂಮಿಗಾಗಿ ಆದಿವಾಸಿಗಳ ಕಾನೂನು ಹೋರಾಟವನ್ನು ಮುನ್ನಡೆಸಿದ್ದ ರಾಮರಾಜ್ ಗೊಂಡ್ ಅವರ ಹೆಸರು ಕೂಡ ಸೇರ್ಪಡೆಯಾಡಗಿದೆ.

ಹೊಸ ರಾಜಕೀಯ ಸೃಷ್ಟಿ:
ಒಟ್ಟು 125 ಅಭ್ಯರ್ಥಿಗಳಲ್ಲಿ 40 ಮಹಿಳಾ ಅಭ್ಯರ್ಥಿಗಳು, 40 ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಐತಿಹಾಸಿಕ ನಿರ್ಧಾರದಿಂದ ಉತ್ತರ ಪ್ರದೇಶದಲ್ಲಿ ಹೊಸ ರೀತಿಯ ರಾಜಕೀಯವನ್ನು ತರಲು ನಾವು ಆಶಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವರ್ಚುವಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಶಹಜಹಾನ್‌ಪುರದಲ್ಲಿ ಭೇಟಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಂದ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಮತ್ತು ಸಿಎಎ ವಿಚಾರವಾಗಿ ಜೈಲಿನಲ್ಲಿದ್ದ ಕಾಂಗ್ರೆಸ್ ನಾಯಕ ಸದಾಫ್ ಜಾಫರ್ ಕೂಡ ಸೇರಿದ್ದಾರೆ.