Hospital Bills: (ಜ.13) ನಿಗದಿತ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವ ಬಗ್ಗೆ ರೋಗಿಗಳು ಹಾಗೂ ಅವರ ಕುಟುಂಬದವರು, ಸಾರ್ವಜನಿಕರ ವಲಯದಿಂದ ದೂರು ಕೇಳಿಬಂದಿದೆ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳ ಲಿಸ್ಟ್ ಹೊರಬಿದ್ದಿದೆ.
ಯಾವ ಯಾವ ಆಸ್ಪತ್ರೆಗಳು?
ನಾರಾಯಣ ಹೃದಯಾಲಯ, ವಿಕ್ರಂ, ಮಣಿಪಾಲ್ ಅಪೋಲೋ ಸಮೂಹ ,ಸ್ಪರ್ಶ ಕೊಲಂಬಿಯಾ ಏಷ್ಯಾ, ಎಸ್ತಾರ್, ಟಿ ಎಂ ಎ ಪೈ, ಫೋರ್ಟಿಸ್ ಸಮೂಹ, ಕೆಎಲ್ಇ ಪ್ರಭಾಕರ ಕೋರೆ, ಬಿಎಂ ಪಾಟೀಲ್, ಎಂಎಸ್ ರಾಮಯ್ಯ, ಸಿದ್ಧಾರ್ಥ ಅಕಾಡೆಮಿ ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ 246 ಖಾಸಗಿ ಆಸ್ಪತ್ರೆಗಳು ಕೋಬ್ ಇದರಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಿದೆ. ಒಟ್ಟು 246 ಆಸ್ಪತ್ರೆಗಳ ಪೈಕಿ 111 ಆಸ್ಪತ್ರೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿದೆ ಎಂದು ತಿಳಿದುಬಂದಿದೆ.

ಕೋವಿದ ಮೂರನೇ ಅಲೆ ಸಿದ್ಧತೆ ಕುರಿತು ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಅಧ್ಯಕ್ಷರಾಗಿದ್ದ ಡಾ ದೇವಿ ಶೆಟ್ಟಿ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನಾರಾಯಣ ಹೃದಯಾಲಯ ಆಸ್ಪತ್ರೆ ಯು ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಆಸ್ಪತ್ರೆಗಳ ಪಟ್ಟಿಯಲ್ಲಿದೆ.
ಡಿಸೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 136160 ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 117690, ಸೋಂಕಿತರಿಗೆ ಸರ್ಕಾರದಿಂದ ವಿವರಿಸಲಾಗಿದೆ. 197 ಪ್ರಕರಣಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡಿರುವ 52 ಖಾಸಗಿ ಆಸ್ಪತ್ರೆಗಳ ವಿರುದ್ಧ ನೇರವಾಗಿ ಅಥವಾ ಇಮೈಲ್ ಮೂಲಕ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ.
ಇದರ ಪ್ರಕಾರ 246 ಆಸ್ಪತ್ರೆಗಳು 3.5 ಕೋಟಿ ರೂ ಅಧಿಕ ಶುಲ್ಕ ವಸೂಲಿ ಮಾಡಿದೆ. ಈ ಪೈಕಿ ರೋಗಿಗಳ ಕೇವಲ 73.28 ಲಕ್ಷ ರೂಪಾಯಿ ಮಾತ್ರ ರೋಗಿಗಳಿಗೆ ಮರುಪಾವತಿಸುವುದು ಪಟ್ಟಿಯಿಂದ ತಿಳಿದುಬಂದಿದೆ.
43 ರೋಗಿಗಳಿಗೆ 33,22,352 ರೂಗಳನ್ನು ಹಣವನ್ನು ಮರುಪಾವತಿ ಮಾಡಲಾಗಿದೆ. ಅದೇ ರೀತಿ 48 ಆಸ್ಪತ್ರೆಗಳು 58 ರೋಗಿಗಳ ಪೈಕಿ 7 ಆಸ್ಪತ್ರೆಗಳು ರೋಗಿಗಳಿಗೆ 10,42,339, ರೂಗಳನ್ನು ಮರು ಪಾವತಿ ಮಾಡಿದೆ. 51 ಖಾಸಗಿ ಆಸ್ಪತ್ರೆಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲು ಬಿಬಿಎಂಪಿಗೆ ಶಿಫಾರಸ್ಸು ಮಾಡಿದೆ.
238 ರೋಗಿಗಳು ನೇರವಾಗಿ ಸುವರ್ಣ ಆರೋಗ್ಯ ಟ್ರಸ್ಟ್ ನ ವಿಶೇಷ ವಿಭಾಗಕ್ಕೆ ದೂರು ಸಲ್ಲಿಸಿದ್ದರು ಇದರ ಅನ್ವಯ 1460 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ. 153 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು 30,63,343 ರೂಗಳನ್ನು ಮರುಪಾವತಿಸಿದ ಒಟ್ಟಾರೆ 73,28,034 ರೂಪಾಯಿಗಳನ್ನು ಖಾಸಗಿ ಆಸ್ಪತ್ರೆಗಳು ಕೋ ಬಡ ರೋಗಿಗಳಿಗೆ ಮರುಪಾವತಿಸಿದೆ.



ಅಧಿಕ ಶುಲ್ಕ ಪಾವತಿಸಿ ಕೊಂಡಿರುವ ಬೆಂಗಳೂರಿನ ಆಸ್ಪತ್ರೆಗಳು:
ಆಕ್ಸೆಸ್ ಆಸ್ಪತ್ರೆ,
ಏಸ್ ಸುಹಾಸ್
ಅಡಗಿ ಆಸ್ಪತ್ರೆ
ಆಕಾಶ್ ದೇವನಹಳ್ಳಿ
ಅನನ್ಯ ಆಸ್ಪತ್ರೆ ರಾಜಾಜಿನಗರ
ಅನುಪಮಾ ಯಲಹಂಕ
ಅಪೋಲೋ ಬಿಜಿಎಸ್,
ಅಪೋಲೋ ಹಾಸ್ಪಿಟಲ್ ಎಂಟರ್ಪ್ರೈಸಸ್ ಲಿಮಿಟೆಡ್ ಜಯನಗರ ಶೇಷಾದ್ರಿಪುರಂ,
ಅಪೋಲೋ ಇಂಪೀರಿಯಲ್ ಆಸ್ಪತ್ರೆ ಘಟಕ,
ಅಪೂರ್ವ,
ಆರ್ಕಾ,
ಆರೋಗ್ಯ ಆಧಾರ್,
ಅಶೋಕ,
ಎಸ್ತರ್ ಸಿಎಂಐ,
ಎಸ್ಟರ್ ಆರ್ ವಿ, ಅಸ್ತ್ರ ಸೂಪರ್ ಸ್ಪೆಷಾಲಿಟಿ, ಅತ್ರೆಯ, ಅವೇಕ್ಷಾ, ಆತ್ರೆಮ್ ಬೆಂಗಳೂರು ಬ್ಯಾಪ್ಟಿಸ್ಟ್, ಬಿಜಿಎಸ್ ಗ್ಲೋಬಲ್, ಭಗವಾನ್ ಮಹಾವೀರ ಜೈನ್, ಭಾರತಿ ನರ್ಸಿಂಗ್ ಹೋಮ್, ಬಿಗ್ ಆಸ್ಪತ್ರೆ, ಕ್ಯಾಂಪಬೆಲ್, ಚೈತನ್ಯ ಮಲ್ಟಿ, ಸಿಟಿ ಸೆಂಟ್ರಲ್, ಕೊಲಂಬಿಯಾ, ವೈಟ್ಫೀಲ್ಡ್ ಯಶವಂತಪುರ, ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ, ಡಾ ಬಿಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡಾ. ಚಂದ್ರಮ್ಮ ದಯಾನಂದ ಸಾಗರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜು.
ಸೇರಿದಂತೆ ಬೆಂಗಳೂರು ನಗರದಲ್ಲಿ ಅಧಿಕ ಅಸ್ಪತ್ರೆಗಳ ಸದಸ್ಯರಿಂದ ಅತಿ ಹೆಚ್ಚು ಶುಲ್ಕ ವಸೂಲಿಯನ್ನು ಮಾಡಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಕೆಲವರು, ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಸಾಲ ಪಡೆದು ಆಸ್ಪತ್ರೆಯ ಶುಲ್ಕವನ್ನು ಭರಿಸುತ್ತಿದ್ದರು. ಅಲ್ಲದೆ ಮೃತಪಟ್ಟವರ ಮೃತದೇಹವನ್ನು ನೀಡದೆ ಆಸ್ಪತ್ರೆಯಿಂದ ಗಲಾಟೆ ಮಾಡಿ ಕುಟುಂಬ ಸದಸ್ಯರು ಪೊಲೀಸರಿಂದ ಪ್ರಕರಣಗಳು ಬೆಳಕಿಗೆ ಬಂದಿದೆ.