ಬೆಂಗಳೂರು: (ಜ.13) Ravi D Chennannanavar: ಖಡಕ್ ಪೋಲಿಸ್ ಎಂದು ಹೇಳಿದಾಗ ನೆನಪಾಗುವುದು ರವಿ ಡಿ ಚನಣ್ಣನವರ್! ಇಂತಹ ಖಡಕ್ ಪೊಲೀಸ್ ಅಧಿಕಾರಿ ಎಲ್ಲ ಜಿಲ್ಲೆಯಲ್ಲೂ ಇರಬೇಕು ಎಂದು ಸಾಮಾನ್ಯವಾಗಿ ಅನಿಸುತ್ತದೆ. ಆದರೆ ಬೇಲಿನೇ ಎದ್ದು ಹೊಲ ಮೇಯುತ್ತಿದೆ ಎಂದು ತಿಳಿದಾಗ ಅದು ವ್ಯಕ್ತಿಯ ಮೇಲೆ ಅಪನಂಬಿಕೆ ಹುಟ್ಟುವುದು ಸಹಜ. ಜನ ಇಟ್ಟುಕೊಂಡಿರುವ ಗೌರವಕ್ಕೆ ಧಕ್ಕೆ ತರುವಂತಹ ಆಪಾದನೆ ಚನ್ನಣ್ಣನವರ್ ಅವರ ಮೇಲಿದೆ.
ರವಿ ಡಿ ಚನ್ನಣ್ಣನವರ್ ಅವರು ಸಾವಿರಾರು ಜನರಿಗೆ ಸ್ಪೂರ್ತಿಯ ಎಂದೆ ಹೇಳಬಹುದು ಪೊಲೀಸ್ ಇಲಾಖೆಯಲ್ಲಿ ಇಂತಹ ಪ್ರತಿಭಾವಂತ ಅಧಿಕಾರಿಗಳನ್ನು ನೋಡುವುದೇ ಅಪರೂಪ. ತಮ್ಮ ಅಧಿಕಾರ ಹಾಗೂ ಮಾತಿನ ವೈಖರಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಅಪರಾಧಿಗಳೊಂದಿಗೆ ಶಾಮೀಲಾಗಿ, ಇವರೇನಾ ಪೊಲೀಸ್ ಅಧಿಕಾರಿ ಎಂದು ಹೇಳುತ್ತಿದ್ದಾರೆ.ಹೌದು ರವಿ ಡಿ ಚನ್ನಣ್ಣನವರ್ ಅವರು ಆರೋಪಿಗಳೊಂದಿಗೆ ಶಾಮೀಲಾಗಿ ಲಂಚ ಪಡೆದಿದ್ದಾರೆ.

ಪ್ರಕರಣವೇನು?
ಸಪ್ಟೆಂಬರ್ 28, 2021 ರಂದು ರವಿ ಡಿ ಚನ್ನಣ್ಣನವರ್ ಹಾಗೂ ಅವರ ಟೀಮ್ ಲಂಚ ಪಡೆದಿರುವ ಆರೋಪ ದೂರು ಸಲ್ಲಿಸಲಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಯದರ್ಶಿ ರವಿಕುಮಾರ್, ಒಳಾಡಳಿತ ಕಾರ್ಯದರ್ಶಿಗೆ ದೂರಿನ ಬಗ್ಗೆ ಗಂಭೀರ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ರವಿ ಚಣ್ಣನವರ್ ಅವರ ಲಂಚ ಹಾಗೂ ಹಣ ವರ್ಗಾವಣೆ ಕುರಿತಾಗಿ ಸಮಗ್ರ ಮಾಹಿತಿಯನ್ನು ಇನ್ಸ್ಪೆಕ್ಟರ್ ಹಾಗೂ ದೂರು ನೀಡಿದ್ದ ಮಂಜುನಾಥ್ ಅವರ ಆಡಿಯೋದಲ್ಲಿ ಬಹಿರಂಗವಾಗಿದೆ.
ರವಿ ಅವರಿಗೆ 25 ಲಕ್ಷ, ಡಿವೈಎಸ್ಪಿಗೆ 15 ಲಕ್ಷ, ಡಿವೈಎಸ್ಪಿ ಕಚೇರಿಯಲ್ಲಿರುವ ಮತ್ತು ಅಧಿಕಾರಿಗೆ 10 ಲಕ್ಷ ಹಣ ನೀಡಿರುವುದಾಗಿ ಅಶೋಕ್ ಎಂಬಾತ ಬಾಯಿಬಿಟ್ಟಿರುವುದಾಗಿ ದೂರು ದಾಖಲಿಸಿರುವ ಮಂಜುನಾಥ್ ಅವರು ತಿಳಿಸಿದ್ದಾರೆ.
ಲಂಚ ನೀಡುವುದಕ್ಕೆ ಕಾರಣ:
ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿ ಯ ಅಶೋಕ್ ಅವರು ತಿಮ್ಮರಾಯಸ್ವಾಮಿ ಬ್ಲೂ ಮೆಟಲ್ಸ್ ಕ್ರಷರ್ ನಡೆಸುತ್ತಿದ್ದರು. ಕ್ರಷರ್ ಮುಚ್ಚುವ ಹಂತದಲ್ಲಿದೆ, ಹೊಸದಾಗಿ ಉದ್ಯಮ ನಡೆಸಲು ಮಂಜುನಾಥ್ ಅವರಿಂದ 40 ಲಕ್ಷ ಹಣ ಪಡೆದಿದ್ದರು. ಫ್ಯಾಕ್ಟರಿ ಮಾರಿದರೆ ಅದರಲ್ಲಿ ಬರುವ ಹಣದಿಂದ ಹೊಸದಾಗಿ ಆದಿ ಭೈರವ ಬ್ಲೂ ಮೆಟಲ್ ನಡೆಸಬಹುದು ಎಂದು ಮಂಜುನಾಥ್ ಅವರನ್ನು ಅಶೋಕ ನಂಬಿಸಿದ್ದರು.
ಮಾತನ್ನು ನಂಬಿದ ಮಂಜುನಾಥ್ ಅವರು ತಮ್ಮ ಕಾರ್ಖಾನೆಯಲ್ಲಿ 2019, ಮೇ 14ರಂದು ಎಸ್ಸೆ ಕಾರ್ಪೊರೇಟ್ ಕಂಪನಿಗೆ 3.96 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿ ವೆಂಕಟೇಶನ್ ಎಂಬುವವರಿಗೆ ನೋಂದಾಣಿ ಮಾಡಿಕೊಟ್ಟಿದ್ದರು. ಇದರಿಂದ ಬಂದ ಹಣವನ್ನು ಹಿಡಿ ರೂಪದಲ್ಲಿ ಅತ್ತಿಬೆಲೆ ಗೆಸ್ಟ್ ಲೈನ್ ಹೋಟೆಲ್ ನಲ್ಲಿ ಅಶೋಕ ಎಂಬುವವರಿಗೆ ನೀಡಿದ್ದಾರೆ.

ಈ ಹಣವನ್ನು ಬ್ಯಾಂಕಿಗೆ ಜಮೆ ಮಾಡಿ ಇದಾದ ಮೂರು ಎರಡು ಮೂರು ದಿನಗಳಲ್ಲಿ ಅಶೋಕ್ ಎಂಬಾತ ಅಷ್ಟು ಹಣ ನಿನ್ನ ಖಾತೆಯಲ್ಲಿ ಇದ್ದರೆ ನನಗೆ ಐತಿ ತೊಂದರೆಯಾಗುತ್ತದೆ ಅದರಿಂದ ನಾನು ಹೇಳಿದವರ ಖಾತೆಗಳಿಗೆ ವರ್ಗಾವಣೆ ಮಾಡು ಎಂದು ಹೇಳಿದ್ದಾರೆ.
ಇದರಂತೆ ಅಶೋಕ ಹೇಳಿದ ಖಾತೆಗಳಿಗೆ ಹಣ ಹಾಕಿದ್ದಾರೆ ಮಂಜುನಾಥ್, ಅಶೋಕ್ ಮಾಡಿದ ವಂಚನೆಗೆ ಮಂಜುನಾಥ್ ಅವರು ನನಗೆ ನ್ಯಾಯ ಕೊಡಿಸುವಂತೆ ಆಗಿನ ಗ್ರಾಮಾಂತರ ಎಸ್ಪಿ ಆಗಿದ್ದ ರವಿ ಡಿ ಚೆನ್ನಣ್ಣನವರ್ ಅವರಿಗೆ ಮನವಿ ಮಾಡಿದ್ದರು. ನ್ಯಾಯ ದೊರಕಿಸುವಂತೆ ಹೇಳಿ ಆಪಾದಿತರ ಮೇಲೆ ಎಫ್ಐಆರ್ ದಾಖಲಿಸಿ ಲಂಚ ಪಡೆದಿದ್ದಾರೆ ಎನ್ನುವ ಆಪಾದನೆ ಮಂಜುನಾಥ ಮಾಡಿದ್ದಾರೆ.

ಕಷ್ಟದಲ್ಲಿದ್ದರೂ ಅವರು ಹೇಳಿದಷ್ಟು ಹಣ ಕೊಟ್ಟಿದ್ದೇನೆ ಇದಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳು ನನ್ನ ಬಳಿ ಇದೆ ಸಾಕ್ಷಿ ಸಮೇತ ತೋರಿಸುತ್ತೇನೆ ಎಂದು ಮಂಜುನಾಥ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಬಗ್ಗೆ ಸತ್ಯ ಬಯಲಾಗಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ