Booster Dose: (ಜ.13) ಕೋವಿಡ್ ಜೊತೆಗೆ ಹೊಸ ರೂಪಾಂತರ ಒಮಿಕ್ರಾನ್ ವೈರಸ್ ತನ್ನ ದಾಳಿಯನ್ನು ಹೆಚ್ಚಿಸುತ್ತಲೇ ಇದ್ದು, ಸಾರ್ವಜನಿಕರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ.
ಈಗಾಗಲೇ ಆರೋಗ್ಯ ಕಾರ್ಯಕರ್ತರಿಗೆ, ಕೋವಿಡ್ ವಾರಿಯರ್ಸ್ ಗೆ ಹಾಗೂ ಲಸಿಕೆಯನ್ನು ನೀಡಲಾಗುತ್ತಿದೆ ಆದರೆ ಈ ಬೂಸ್ಟರ್ ಲಸಿಕೆ ಯಾರು ಹಾಕಿಸಿಕೊಳ್ಳಬಹುದು? ಜನವರಿ 10, 2022 ರಿಂದ ಆರಂಭಗೊಂಡಿರುವ ಲಸಿಕೆಯ ಕುರಿತು ಸಾಕಷ್ಟು ಪ್ರಶ್ನೆಗಳು ಮೂಡುತ್ತಿದೆ. ಯಾರಿಗೆ ನೀಡಲಾಗುತ್ತದೆ ಪಡೆಯುವುದು ಹೇಗೆ? ನಾವು ಅರ್ಹರಾಗಿದ್ದೇವಾ? ಲಸಿಕೆಯನ್ನು ಯಾವಾಗ ಪಡೆಯಬೇಕು ಎನ್ನುವ ಗೊಂದಲಗಳು ಎಲ್ಲರಂತೆ ನಿಮಗೂ ಕಾಡಿರಬಹುದು, ನಿಮಗೂ ಅನುಮಾನಗಳು, ಪ್ರಶ್ನೆಗಳು ಇದ್ದಲ್ಲಿ ಈ ಲೇಖನದಲ್ಲಿ ಉತ್ತರವಿದೆ.
ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅರ್ಹತೆಗಳು:
ನೀವು ಆರೋಗ್ಯ ಕಾರ್ಯಕರ್ತರಾಗಿದ್ದರೇ, ಫ್ರಂಟ್ಲೈನ್ ವರ್ಕರ್ಸ್ ಆಗಿದ್ದರೆ, 60 ವರ್ಷ ಮೇಲ್ಪಟ್ಟಿದ್ದರೆ ನೀವು ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಿರಿ ಎಂದರ್ಥ.
ನಿಮ್ಮ ಅರ್ಹತೆಯನ್ನು ಕುರಿತು ಚೆಕ್ ಮಾಡುವುದಕ್ಕೆ https://selfregestration.cowin.gov.in/ ಈ ಲಿಂಕ್ ಬಳಸಬಹುದು.
ಅಲ್ಲಿ ಕೇಳುವಂತಹ ನೀವು ಪ್ರಶ್ನೆಗಳಿಗೆ ಉತ್ತರಿಸಬೇಕು ಅಂದರೆ ನೀವು ಮೊದಲ ಹಾಗೂ ಎರಡನೇ ಲಸಿಕೆ ಪಡೆಯಲು ನೀಡಲಾಗಿದ್ದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ನೀವು ನಿಮ್ಮ ಹಿಂದಿನ ನೊಂದಾಯಿತ ಮೊಬೈಲ್ ಸಂಖ್ಯೆ ನೀಡಿದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರಲಿದೆ. ಓಟಿಪಿ ಸಂಖ್ಯೆ ನೀಡಿ ಲಾಗಿನ್ ಆದರೆ ನಿಮ್ಮ ಬೂಸ್ಟರ್ ಡೋಸ್ ಲಸಿಕೆ ಪಡುವುದಕ್ಕೆ ಎಷ್ಟು ದಿನ ಬಾಕಿ ಇದೆ ಎಂಬುದನ್ನು ತೋರಿಸಲಾಗುತ್ತದೆ.
ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆಯಾಗಿ ನೀಡುವ ಬೂಸ್ಟರ್ ಡೋಸ್ ಲಸಿಕೆಯನ್ನು ಯಾವ ದಿನಾಂಕದಂದು ಪಡೆಯಲು ಅರ್ಹರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ಇದೇ ಜಾಲತಾಣದಲ್ಲಿ ತೋರಿಸುವಂತಹ ನಿಮ್ಮ ಎರಡು ಡೋಸ್ ಲಸಿಕೆಯ ಪಡೆದಿರುವ ಅಂತಹ ಪ್ರಮಾಣಪತ್ರವನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.