National Youth Day: (ಜ.12) ಏಳಿ ಎದ್ದೇಳಿ.. ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ವಾಕ್ಯ ಕೇಳಿದರೆ ಸಾಕು, ನರನಾಡಿಗಳೆಲ್ಲ ಸ್ವಾಮಿ ವಿವೇಕಾನಂದ ಎಂದು ಹೆಸರು ಕಣಕಣದಲ್ಲೂ ದೇಶಭಕ್ತಿಯನ್ನು ತುಂಬಿಕೊಂಡಿದ್ದ ಭಾರತದ ಚೇತನ ಸ್ವಾಮಿ ವಿವೇಕಾನಂದ.
ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ. ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವ ಶಕ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ, ನನಗೆ ನೂರು ಜನ ಗಟ್ಟಿಮುಟ್ಟಾದ ಯುವಕರನ್ನು ಕೊಡಿ ನಾನು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎಂದು ಹೇಳುತ್ತಿದ್ದರು.
ಯುವಕರು ಹೇಡಿಗಳ ಆಗಬಾರದು ನೀವು ಎಂದು ಪರಾವಲಂಬಿಗಳನ್ನ ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಸ್ವಾಮೀಜಿಯವರು ಯುವಮನಸ್ಸುಗಳನ್ನು ಎಚ್ಚರಿಸುತ್ತಿದ್ದರು.

ಯುವ ದಿನ ಆಚರಣೆಯ ಹಿನ್ನಲೆ:
1948 ರಲ್ಲಿ ಭಾರತ ಸರ್ಕಾರ ಈ ದಿನವನ್ನು ಯಾವ ದಿನವಾಗಿ ಆಚರಿಸುವಂತೆ ಘೋಷಣೆ ಮಾಡಿತು.1985 ರಿಂದ ಪ್ರತಿವರ್ಷ ಯುವ ದಿನವಾಗಿ ಆಚರಿಸಲಾಗುತ್ತದೆ
ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಅಮೆರಿಕದ ಸೋದರಿಯರೆ ಮತ್ತು ಸಹೋದರರೇ ಎಂದು ಹೇಳುವ ಮೂಲಕ ವಿವೇಕಾನಂದರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಮುಂದೆ ಎತ್ತಿ ಹಿಡಿದಿದ್ದರು. ಬಳಿಕ ಅಮೆರಿಕ ಇಂಗ್ಲೆಂಡ್ ಯುರೋಪ್ ಹಾಗೂ ಭಾರತದಲ್ಲಿ ಮಾಡಿದ ಭಾಷಣ ಅವರ ಪತ್ರಗಳು ನಡೆಸಿದ ಚರ್ಚೆಗಳು ಇಂದಿಗೂ ಗ್ರಂಥಗಳಾಗಿವೆ.
ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿ ಎಂದು ನೊಬೆಲ್ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರು ಹೇಳಿದ್ದರು.
ಯುವ ದಿನದ ಆಚರಣೆ:
ವಿವೇಕಾನಂದರ ಜಯಂತಿ ಎಂದು ಈ ಮೊದಲು ಆಚರಿಸಲಾಗುತ್ತಿತ್ತು ಇದೀಗ ಶಾಲೆ-ಕಾಲೇಜುಗಳಲ್ಲಿ ವಿವೇಕಾನಂದರ ಜೀವನ, ಬೋಧನೆಗಳ ಬಗ್ಗೆ ಉಪನ್ಯಾಸ ಪ್ರವಚನಗಳು ಸ್ಪರ್ಧೆಗಳು ನಡೆಯುತ್ತವೆ.