ಲಕ್ನೋ:( ಜ.12) Dirty Food: ಮನೆಯ ತಿನಿಸುಗಳು ಇಷ್ಟವಾಗದೇ ಹೊರಗಿನ ಆಹಾರವನ್ನು ಬಯಸುವವರಿಗೆ ಇದೊಂದು ಉದಾಹರಣೆ. ಹೊರಗೆ ಎಷ್ಟು ಸ್ವಚ್ಛವಾಗಿ ಮಾಡುತ್ತಾರೆ ಅಥವಾ ಯಾವ ಪದಾರ್ಥಗಳಿಂದ ಆಹಾರ ತಯಾರಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ತಿಳಿಯುವುದಿಲ್ಲ. ಆದರೂ ಅಭಿರುಚಿ ಎಂಬಂತೆ ಹೊರಗಿನ ಜಂಕ್ ಫುಡ್ ಅಥವಾ ಮತ್ತಿತರ ಫಾಸ್ಟ್ ಫುಡ್ ಗಳನ್ನು ತಿನ್ನುತ್ತಾರೆ.
ಎಷ್ಟು ಬಾರಿ ಕಳಪೆ ಗುಣಮಟ್ಟದ ಆಹಾರ ಗಳು ಅಥವಾ ಅಸಹ್ಯವಾಗಿ ಅಡುಗೆ ಮಾಡುವ ವಿಡಿಯೋಗಳು ವೈರಲ್ ಆದರೂ ಎಚ್ಚೆತ್ತುಕೊಳ್ಳದ ಸಾರ್ವಜನಿಕರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಬಹುದು.ವ್ಯಾಪಾರಿಯೊಬ್ಬ ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಿ ಅಂಗಡಿಯವನನ್ನು ಸೇರಿ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ನೋದ ಹೊರವಲಯದಲ್ಲಿರುವ ಕಾಕೋರಿ ಯ ರಸ್ತೆ ಬದಿಯಲ್ಲಿ ಇರುವ ಅಂಗಡಿಯವನು ರೊಟ್ಟಿಯನ್ನು ಮಾಡುವಾಗ ಹಿಟ್ಟಿನ ಮೇಲೆ ತನ್ನ ಉಗುಳನ್ನು ಉಳಿದಿರುವುದು ಕ್ಯಾಮರಾದಲ್ಲಿ ಸರಿಯಾಗಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜನರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಕೋರಿ ಸಹಾಯಕ ಪೊಲೀಸ್ ಕಮಿಷನರ್ ಅಶುತೋಷ ಕುಮಾರ್, ಡಾಬಾ ಮಾಲೀಕ ಯಾಕೂಬ್, ಡ್ಯಾನಿಶ್, ಮಗು ಮತ್ತು ತರನಾ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ
#Lucknow A cook along with five others was arrested from Kakori area after a video showing him spitting on food went viral. pic.twitter.com/aEaZhlmMYa
— Adeeb Walter (@WalterAdeeb) January 11, 2022