Google Play Store : (ಜ.11) ಪ್ಲೇಸ್ಟೋರ್ ನಿಯಮಗಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ವಿಧಿಸಿದ್ದ ಅವಧಿಯ ಕುರಿತು ಸಿಸಿಐ ಕ್ರಮ ಪ್ರಶ್ನಿಸಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಸಮೂಹ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ಕೃಷ್ಣ ಎಸ ದೀಕ್ಷಿತ್ ನೇತೃತ್ವದಲ್ಲಿ ವಿಚಾರಣೆ ನಡೆಸಿತು.
ಪ್ಲೇ ಸ್ಟೋರ್ ಬಿಲ್ಲಿಂಗ್ ನೀತಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು ನಡೆಸುವ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು ತಿಳಿಸಿದೆ.ವಿಚಾರಣೆಯ ವೇಳೆ ಗೂಗಲ್ ಇಂಡಿಯಾ ಮತ್ತು ಅಲೈಯನ್ಸ್ ಐ ಡಿಜಿಟಲ್ ಇಂಡಿಯಾ ಫೆಡರೇಶನ್ ಪರ ವಕೀಲರಾಗಿರುವ ಗೌತಮಾದಿತ್ಯ ಹಾಗೂ ಅಭಿ ರಾಯ್ ಅವರು ಜಂಟಿ ವರದಿ ಸಲ್ಲಿಸಿದ್ದರು.

ಏನಿದು ಪ್ಲೇ ಸ್ಟೋರ್ ವಿವಾದ?
ಡಿಜಿಟಲ್ ಮಾಹಿತಿಯನ್ನು ಪ್ಲೇಸ್ಟೋರ್ ಮೂಲಕ ಮಾರಾಟ ಮಾಡಲು ಬಳಸುವ ಅಪ್ಲಿಕೇಶನ್ಗಳು ಬಿಲ್ಲಿಂಗ್ ವ್ಯವಸ್ಥೆಯನ್ನು ಬಳಸಬೇಕು. ನಿಯಮಗಳ ಬದಲಾವಣೆಯಾಗುವುದರಿಂದ ಪೇ ಬಿಲ್ಲಿಂಗ್ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದೆ ಎಂದು ಗೂಗಲ್ ಹೇಳಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತದ ಡೆವಲಪರ್ಗಳು ಹಾಗೂ ನವೋದ್ಯಮ ಗಳು ಆತಂಕ ವ್ಯಕ್ತಪಡಿಸಿತ್ತು. ಭಾರತದ ಅಪ್ಲಿಕೇಶನ್ ಡೆವಲಪರ್ಗಳು ತಮ್ಮ ಡಿಜಿಟಲ್ ಸೇವೆಗಳನ್ನು ಪೇ ಬಿಲ್ಲಿಂಗ್ ವ್ಯವಸ್ಥೆಯ ಮೂಲಕವೇ ಮಾರಾಟ ಮಾಡಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಆಕ್ಷೇಪಿಸಿದರು.
ಅರ್ಜಿ ಇತ್ಯರ್ಥ:
ಪ್ಲೇ ಸ್ಟೋರ್ ನೀತಿಯ ಕುರಿತಂತೆ ಸಿಸಿಐ ವಿಚಾರಣೆಗೆ ನೀಡಲಾಗಿರುವ ಸಹಕಾರವನ್ನು ಮುಂದುವರಿಸಲಿದೆ. ಹಾಗೂ ಮುಂದಿನ ಅಕ್ಟೋಬರ್ 31, 2022 ವರೆಗೆ ಪ್ಲೇ ಸ್ಟೋರ್ ನೀತಿ ಜಾರಿ ಮಾಡುವುದಿಲ್ಲ ಎಂದು ಗೂಗಲ್ ತಿಳಿಸಿದೆ
ಈ ಹೇಳಿಕೆಯನ್ನು ಪರಿಗಣಿಸಿ ಪ್ರಕರಣದಲ್ಲಿ ಮಧ್ಯಂತರ ಪರಿಹಾರ ಕೋರಿ ADIF ಸಲ್ಲಿಸಿರುವ ಅರ್ಜಿಯನ್ನು ಮುಕ್ತಾಯಗೊಳಿಸಬಹುದು ಹಾಗೂ ಮುಂದೆ ಯಾವುದಾದರೂ ತಕರಾರುಗಳು ಇದ್ದರೆ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಇದ್ದಕ್ಕೆ ಪೀಠವು ಸಹ ಸಮ್ಮತಿ ಸೂಚಿಸಿದೆ.