Secular TV
Saturday, March 25, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Prime Minister Security:ಭಾರತದಲ್ಲಿ ಪ್ರಧಾನಿ ಅವರ ಟೈಟ್ ಸೆಕ್ಯೂರಿಟಿ ಹೇಗಿರುತ್ತೆ ಗೊತ್ತಾ? ಎಸ್ಪಿಜಿ ಸೆಕ್ಯುರಿಟಿ ಹೇಗಿರುತ್ತೆ ? ಇಲ್ಲಿದೆ ಸಂಪೂರ್ಣ ಮಾಹಿತಿ

Secular TVbySecular TV
A A
Reading Time: 2 mins read
Prime Minister Security:ಭಾರತದಲ್ಲಿ ಪ್ರಧಾನಿ ಅವರ ಟೈಟ್ ಸೆಕ್ಯೂರಿಟಿ ಹೇಗಿರುತ್ತೆ ಗೊತ್ತಾ?  ಎಸ್ಪಿಜಿ ಸೆಕ್ಯುರಿಟಿ ಹೇಗಿರುತ್ತೆ ? ಇಲ್ಲಿದೆ ಸಂಪೂರ್ಣ ಮಾಹಿತಿ
0
SHARES
Share to WhatsappShare on FacebookShare on Twitter

ಪ್ರಧಾನಿ ಭದ್ರತೆ ಮಾಡಲು ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತೆ? ಬ್ಲೂ ಬುಕ್, SGP ಅಂದ್ರೆ ಏನು?

Prime Minister Security: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಭದ್ರತೆ ವೈಫಲ್ಯವಾಗಿರುವ (Security Failed) ಚರ್ಚೆಗಳು ಕೇಳಿ ಬರ್ತಿದೆ. ಜನವರಿ 5 ಕ್ಕೆ ಪಂಜಾಬ್ ನಲ್ಲಿ ಭದ್ರತೆ ವೈಫಲ್ಯ ವಾಗಿದ್ದು ಈ ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದೊಂದು ರಾಷ್ಟ್ರೀಯ ಭದ್ರತಾ ವೈಫಲ್ಯ (National Security Faliure) ಅಂತ ವಿಶ್ಲೇಷಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ 15-20 ನಿಮಿಷ ಪ್ಲೈವರ್ ಮೇಲೆ ನಿಂತಿದ್ದು ಅಷ್ಟೊಂದು ಗಂಭೀರ ಪ್ರಕರಣವಾ.!? ಈ ಬಗ್ಗೆ ಯಾಕಿಷ್ಟು ಚರ್ಚೆಯಾಗ್ತಿದೆ.

ಪ್ರಧಾನಮಂತ್ರಿ… ಭಾರತದಲ್ಲಿ ಅತಿದೊಡ್ಡ ಮತ್ತು ಪ್ರಭಾವಿ ಹುದ್ದೆ. ಒಂದು ರೀತಿಯಲ್ಲಿ ಹೇಳೊದಾದ್ರೆ ಇಡೀ ದೇಶವನ್ನು ಮುನ್ನೇಡೆಸುವ ನಾಯಕ.. (Nation Leader) ಭಾರತದಲ್ಲಿ ಸಂವಿಧಾನದ ಪ್ರಕಾರ ರಾಷ್ಟ್ರಪತಿ ಹುದ್ದೆ ಅತಿದೊಡ್ಡ ಹುದ್ದೆಯಾಗಿದ್ದರೂ, ಪ್ರಧಾನಿ ಹುದ್ದೆಗೆ ಅತ್ಯಂತ ಹೆಚ್ಚು ಮಹತ್ವವಿದೆ. ಹೀಗಾಗೇ ಈ ಹುದ್ದೆಯಲ್ಲಿರುವ ವ್ಯಕ್ತಿಗೆ ಅತ್ಯಂತ ಹೆಚ್ಚು ಭದ್ರತೆಯನ್ನು ನೀಡಲಾಗುತ್ತೆ.

PM secutiry Explained

ಈಗ ಪ್ರಧಾನಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 5 ರಂದು ಪಂಜಾಬ್‌ (Panjab) ಫಿರೋಜ್‌ಪುರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಬೇಕಿತ್ತು. ಇದಕ್ಕೆ ಹೊರಟ್ಟಿದ್ದ ಅವರು ಭದ್ರತೆ ವೈಫಲ್ಯದ ಕಾರಣ ವಾಪಸ್ ಆದರೂ ಅಂತಾ ಎಲ್ಲ ಕಡೆ ವರದಿಯಾಗುತ್ತಿದೆ. ಪಾಕಿಸ್ತಾನದ ಗಡಿಯಿಂದ (Pakisthan Border) ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಹುನೇನಿವಾಲ್ ಪ್ರದೇಶದಲ್ಲಿ ಅವರ ಗಾಡಿಯನ್ನು ಹಿಂತಿರುಗಿಸಿಕೊಂಡು ಬರಲಾಗಿದೆ. ರೈತರ ಪ್ರತಿಭಟನಾಕಾರರು ಪ್ರಧಾನಿ ಕಾರಿಗೆ ಘೇರಾವ್ ಹಾಕುವ ಸಾಧ್ಯತೆ ಹಿನ್ನಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತಾ ಹೇಳಲಾಗುತ್ತಿದೆ‌.

ಪ್ರಧಾನಿ ನರೇಂದ್ರ ಮೋದಿ 15-20 ನಿಮಿಷ ಫ್ಲೈವೊರ್ (Flyover) ಮೇಲೆ ನಿಂತಿದ್ದು ಅತಿದೊಡ್ಡ ಭದ್ರತಾ ವೈಫಲ್ಯ ಎನ್ನಲಾಗುತ್ತಿದೆ. ಖಂಡಿತಾ ಹೌದು ಅತಿದೊಡ್ಡ ವೈಫಲ್ಯವೇ ಸರಿ. ಕಾರಣ ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ಪೂರ್ವ ನಿಯೋಜಿತವಾಗಿರುತ್ತವೇ, ಮತ್ತು(Pre Planned) ಅಲ್ಲಿಗೆ ಹೋಗಿ ಬರುವುದೇಗೆ ಎನ್ನುವ ಬಗ್ಗೆ ಮುಂಚೆಯೇ ಪ್ಲ್ಯಾನ್ ಮಾಡಲಾಗಿರುತ್ತೆ. ಇದಕ್ಕೆ. ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿರುತ್ತೆ. ಅವರ ಜೀವದ ರಕ್ಷಣೆಗೆ ಅಂತ್ಲೆ ಎಸ್ಪಿಜಿ ಅನ್ನೊ (SPG – Special Protection Group) ವಿಶೇಷ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗಿರುತ್ತೆ.

ಏನಿದು SPG?

ಎಸ್ಪಿಜಿ ಭಾರತ ಮಟ್ಟಿಗೆ ಇದು ಅತ್ಯುನ್ನತ (SGP) ಭದ್ರತಾ ಪಡೆ. ಇದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವರು ಸೇರಿದಂತೆ ದೇಶದ ಪ್ರಮುಖ ವ್ಯಕ್ತಿಗಳಿಗೆ ‌ ನೀಡುವ ವಿಶೇಷ ಭದ್ರತಾ (Special Protection Group) ಪಡೆಯಾಗಿದೆ. ಕೇಂದ್ರಿಯ ಮೀಸಲು ಪಡೆ, ಕೇಂದ್ರಿಯ ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಪಡೆ, ಇಂಡೋ ಟಿಬೇಟ್ ಪೊಲೀಸ್, ದೆಹಲಿ ಪೊಲೀಸ್ ನಲ್ಲಿರುವ ಅತ್ಯುತ್ತಮ ಸಿಬ್ಬಂದಿಯನ್ನು ಇಲ್ಲಿ ಆಯ್ಕೆ ಮಾಡಿ ಎಸ್ಪಿಜಿಗೆ ನೇಮಕ ಮಾಡಲಾಗಿರುತ್ತೆ.

ಇವರಿಗೆ ವಿಶೇಷ ಪರೀಕ್ಷೆ ಮತ್ತು ದೈಹಿಕ ತರಬೇತಿ (Phycical Tranining)ನೀಡುವ ಮೂಲಕ ಅತ್ಯಂತ ಹೆಚ್ಚು ಉತ್ಕೃಷ್ಟ ಯೋಧರನ್ನಾಗಿ ಸಿದ್ಧ ಮಾಡಲಾಗಿರುತ್ತದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಇವರು ತಾವು ಭದ್ರತೆಗಿರುವ ವ್ಯಕ್ತಿಯನ್ನು ಇವರು ರಕ್ಷಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಅಂದಹಾಗೇ ಈ ವಿಶೇಷ ಪಡೆ ಕೇಂದ್ರ ಗೃಹ ಇಲಾಖೆಯ (Central Govt) ಅಡಿಯಲ್ಲಿ ಕೆಲಸ ಮಾಡುತ್ತೆ.

SGP

ಭಾರತದಲ್ಲಿ ಹಿಂದೆ ಪ್ರಧಾನಮಂತ್ರಿಗಳ ಹತ್ಯೆಯ ಬಳಿಕ ದೇಶದ ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಅವರ ಜತೆ ವಾಸಿಸುವ ಕುಟುಂಬದ ಸದಸ್ಯರ ರಕ್ಷಣೆಗಾಗಿ 1985ರಲ್ಲಿ ವಿಶೇಷ ರಕ್ಷಣಾ ದಳ ಅಥವಾ ಎಸ್‌ಪಿಜಿಯನ್ನು ಸ್ಥಾಪಿಸಲಾಯಿತು. ಈ ಪಡೆ ದಿನ 24 ಗಂಟೆ ಪ್ರಧಾನಿಯನ್ನು (24×7 Secuity) ಕಾಯುತ್ತಿರುತ್ತೆ. ಪ್ರಧಾನಿ ಕಾರ್ಯಕ್ರಮಗಳಿರುವ ಪ್ರದೇಶಗಳಲ್ಲಿ ಈ ಭದ್ರತಾ ಪಡೆಗಳು ಸಂಪೂರ್ಣ ಕಂಟ್ರೋಲ್ ಗೆ ತೆಗೆದುಕೊಂಡಿರುತ್ತದೆ.

ಹೀಗಾಗಿ ಪ್ರಧಾನಮಂತ್ರಿಗಳ ಕಾರ್ಯಕ್ರಮ ಎಲ್ಲೆ ನಿಯೋಜನೆ ಆದರೂ ಅದಕ್ಕೆ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ಮುಂಚಿತವಾಗಿ ಮಾಡಿಕೊಳ್ಳುತ್ತದೆ. ಇಡೀ ವ್ಯವಸ್ಥೆಯಲ್ಲಿ ಗುಲಗಂಜಿಯಷ್ಟು ಲೋಪವಾಗದಂತೆ ಕಾರ್ಯನಿರ್ವಹಿಸುತ್ತದೆ. ಈ ಕರ್ತವ್ಯಕ್ಕೆ ನಿಯೋಜಿತರಾದ ಯೋಧರು, ತಾವಾಗೇ ಕರ್ತವ್ಯದಿಂದ ಬಿಡುಗಡೆ ಪಡೆಯಲು ಅವಕಾಶವಿಲ್ಲ. ಎಸ್‌ಪಿಜಿ ಮಾತ್ರವೇ ಅವರನ್ನು ನಿಯೋಜನೆಯಿಂದ ಬಿಡುಗಡೆ ಮಾಡುವ ಅಧಿಕಾರ ಹೊಂದಿದೆ.

ಪ್ರಧಾನಿಗೆ ಭದ್ರತೆ ಒದಗಿಸಲು ಅಚ್ಚುಕಟ್ಟಾದ, ಸಮಗ್ರ ಹಾಗೂ ಬಹುಸ್ತರದ ವ್ಯವಸ್ಥೆಯನ್ನೂ ರೂಪಿಸಲಾಗಿರುತ್ತದೆ. ವಿಶೇಷ ರಕ್ಷಣಾ ದಳವು ಪ್ರಧಾನಿಯ ಭದ್ರತೆಯ ಜವಾಬ್ದಾರಿ ಹೊತ್ತಿರುತ್ತದೆ. ಎಸ್‌ಪಿಜಿ ನೇತೃತ್ವದ ಭದ್ರತಾ ವ್ಯವಸ್ಥೆಯ ಅಡಿಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳು ಹಾಗೂ ಆಯಾ ರಾಜ್ಯಗಳ ಪೊಲೀಸ್ ಪಡೆಗಳನ್ನು ಪ್ರಧಾನಿ ಭದ್ರತೆಗೆ ನಿಯೋಜಿಸಲಾಗುತ್ತದೆ. ಭದ್ರತೆ ಕುರಿತ ವಿಸ್ತೃತ ಮಾರ್ಗಸೂಚಿಗಳನ್ನು ಎಸ್‌ಪಿಜಿಯ (Blue Book)‘ಬ್ಲೂ ಬುಕ್’ ಒಳಗೊಂಡಿರುತ್ತದೆ.

ಏನಿದು ಬ್ಲೂ ಬುಕ್..?

ಬ್ಲೂ ಬುಕ್(Blue Book) ಎಂಬುದು ಗಣ್ಯರ (VVIP)ಜಾರಿಗೊಳಿಸುವ ಹೊಣೆಯು, ಪ್ರಧಾನಿ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ವಿಶೇಷ ಭದ್ರತಾ ದಳದ್ದಾಗಿರುತ್ತದೆ. ಯಾವ ಶಿಷ್ಟಾಚಾರಗಳನ್ನು ಪಾಲಿಸಬೇಕು, (security Rules)ಯಾವ ಭದ್ರತಾ ನಿಯಮಗಳನ್ನು ಪಾಲಿಸಬೇಕು ಎಂಬ ಸಮಗ್ರ ಮಾಹಿತಿ ಇದರಲ್ಲಿ ಅಡಕವಾಗಿರುತ್ತದೆ. ಪ್ರಧಾನಿಯು ಸಭೆಯಲ್ಲಿ ಭಾಗವಹಿಸಿದರೆ, ರಸ್ತೆಯಲ್ಲಿ ಪ್ರಯಾಣಿಸಿದರೆ, ವಿಮಾನದಲ್ಲಿ ಪ್ರಯಾಣಿಸಿದರೆ, ಏನೇನು ಭದ್ರತೆ ಕೈಗೊಳ್ಳಬೇಕು, ಎಷ್ಟು ಸಿಬ್ಬಂದಿ ನಿಯೋಜಿಸಬೇಕು, ಯಾವ ವಾಹನಗಳನ್ನು ಬಳಸಬೇಕು ಎಂದು ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಲಾಗಿರುತ್ತದೆ. ಈ ಮಾಹಿತಿಯ ಅನ್ವಯ ಎಸ್‌ಪಿಜಿ ಮಾತ್ರವಲ್ಲ, ರಾಜ್ಯ ಪೊಲೀಸರು ನಿಯಮಗಳನ್ನು ಪಾಲನೆ ಮಾಡಬೇಕು.

ಮೂರು ದಿನದ ಮುಂಚೆ ಮೀಟಿಂಗ್

ಯಾವುದೇ ಕಾರ್ಯಕ್ರಮಕ್ಕೆ ಪ್ರಧಾನಿಯವರ ಅಧಿಕೃತ ಭೇಟಿಗೆ ಮೂರು ದಿನ ಮುನ್ನ, ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸ್ಥಳದಲ್ಲಿ ಭದ್ರತೆಯನ್ನು ಕಲ್ಪಿಸಲು ನಿಯೋಜಿಸಲಾಗುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ಎಸ್‌ಪಿಜಿ ‘ಮುಂಗಡ ಭದ್ರತಾ ಸಂಪರ್ಕ’ (ಎಎಸ್‌ಎಲ್) ಸಭೆ ನಡೆಸುತ್ತದೆ. ಇದರಲ್ಲಿ ಎಸ್‌ಪಿಜಿ ಅಧಿಕಾರಿಗಳು, ರಾಜ್ಯದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು, ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಭಾಗಿಯಾಗಿರುತ್ತಾರೆ. ಪ್ರಧಾನಿ ಭೇಟಿ ಕುರಿತ ಪ್ರತಿಯೊಂದು ವಿಚಾರವೂ ಈ ಅಧಿಕಾರಿಗಳ ನಡುವೆ (Meeting)ಚರ್ಚೆಗೊಳಪಡುತ್ತದೆ. ಅಧಿಕಾರಿಗಳ ಈ ಸಭೆ ಮುಗಿದ ಬಳಿಕ, ಭಾಗಿಯಾಗಿದ್ದ ಎಲ್ಲರೂ ಸಹಿ ಮಾಡಿರುವ ಎಎಸ್‌ಎಲ್ ವರದಿ ಸಿದ್ಧವಾಗುತ್ತದೆ. ಈ ವರದಿಯ ಆಧಾರದ ಮೇಲೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ.

ಈ ಉನ್ನತಮಟ್ಟದ ಸಭೆಯಲ್ಲಿ ಪ್ರಧಾನಿಯವರು ಹೇಗೆ ಆಗಮಿಸುತ್ತಾರೆ ಅದು ವಾಯುಮಾರ್ಗ, ರಸ್ತೆ ಮಾರ್ಗ, ರೈಲ್ವೆ ಮಾರ್ಗ ಯಾವುದೇ ಆಗಿರಲಿ, ಅವರು ಆಗಮಿಸಿದ ಬಳಿಕ ಕಾರ್ಯಕ್ರಮ ಸ್ಥಳಕ್ಕೆ ಹೇಗೆ ಹೋಗುತ್ತಾರೆ ಅದು ಹೆಲಿಕಾಪ್ಟರ್ ಅಥವಾ ರಸ್ತೆ ಮಾರ್ಗ ಯಾವುದೇ ಆಗಿರಲಿ ಇದೇಲ್ಲದರ ಪ್ಲ್ಯಾನಿಂಗ್ ಒಳಗೊಂಡಿರುತ್ತದೆ. ಇಷ್ಟು ಮಾತ್ರವಲ್ಲದೇ ಕಾರ್ಯಕ್ರಮ ಸ್ಥಳ, ಪ್ರವೇಶ ದ್ವಾರ, ನಿರ್ಗಮನ ದ್ವಾರ, ಕಾರ್ಯಕ್ರಮಕ್ಕೆ ಬರುವವರು, ಸ್ಥಳದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಹಾಗೂ ವೇದಿಕೆಯ ಗಟ್ಟಿತನದ ಬಗ್ಗೆ ಸಮಗ್ರ ಚರ್ಚೆಯಾಗುತ್ತದೆ. ಕಾರ್ಯಕ್ರಮಗಳಲ್ಲಿ ವೇದಿಕೆಗಳು ಕುಸಿದ ಪ್ರಸಂಗಗಳು ನಡೆದಿವೆ. ಕಾರ್ಯಕ್ರಮ ಸ್ಥಳದ ಅಗ್ನಿ ಸುರಕ್ಷತೆ ಹಾಗೂ ಕಾರ್ಯಕ್ರಮ ನಡೆಯುವ ದಿನದ ಹವಾಮಾನ ವರದಿಯನ್ನೂ ಪರಿಶೀಲಿಸಲಾಗುತ್ತದೆ.

ಒಂದು ವೇಳೆ ಪ್ರಧಾನಿಯವರು ದೋಣಿಯಲ್ಲಿ ಪ್ರಯಾಣಿಸಬೇಕು ಎಂದಿದ್ದರೆ, ದೋಣಿಯ ಸುರಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ. ಪ್ರಧಾನಿ ಸಂಚರಿಸುವ ಜಾಗದಲ್ಲಿ ಪೊದೆಗಳು ಬೆಳೆದಿದ್ದಲ್ಲಿ, ಅದನ್ನು ಸವರಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ರಸ್ತೆಗಳು ಕಿರಿದಾಗಿದ್ದರೆ, ಮಾರ್ಗದರ್ಶನ ನೀಡಲು ಅಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದನ್ನು ಬ್ಲೂ ಬುಕ್‌ನಲ್ಲಿ ಉಲ್ಲೇಖಿಸಾಗಿರುತ್ತದೆ.

ಒಂದು ವೇಳೆ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ ಉಂಟಾದರೆ, ಮುಂಚಿತವಾಗಿ ಅದಕ್ಕೂ ತಯಾರಿ ಮಾಡಲಾಗಿರುತ್ತದೆ. ಪ್ರಧಾನಿಯವರು ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಹವಾಮಾನ ಅಡ್ಡಿಯಾದರೆ, ರಸ್ತೆ ಮಾರ್ಗವನ್ನು ಮೊದಲೇ ಆಯ್ಕೆ ಮಾಡಿಟ್ಟಿರಲಾಗುತ್ತದೆ. ರಸ್ತೆ ಮಾರ್ಗವು ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಪ್ರಧಾನಿಯವರು ವಾಯುಮಾರ್ಗದಲ್ಲಿ ಸಂಚರಿಸಿದರೂ, ಪರ್ಯಾಯ ಎಂದು ಗುರುತಿಸಲಾಗಿರುವ ರಸ್ತೆ ಮಾರ್ಗದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅಂದರೆ, ಕಾರ್ಯಕ್ರಮ ದಿಢೀರ್ ಬದಲಾದರೆ, ಕೊನೆಯ ಕ್ಷಣದಲ್ಲಿ ಎಲ್ಲ ಭದ್ರತಾ ಏರ್ಪಾಡು ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ.

Security

ಹೆಲಿಕಾಪ್ಟರ್ ಹಾರಾಡಬೇಕಾದರೆ, 1,000 ಮೀಟರ್ ದೂರದ ದಾರಿಯು ಪೈಲಟ್‌ಗೆ ಕಾಣುವಂತಿರಬೇಕು. ಕೆಲವೊಮ್ಮೆ ಇದು ಸಾಧ್ಯವಾಗದಿದ್ದಾಗ, ಪರ್ಯಾಯವಾಗಿ ರಸ್ತೆ ಮಾರ್ಗದಲ್ಲಿ ಪ್ರಧಾನಿ ಸಂಚರಿಸಿದ ಉದಾಹರಣೆಗಳಿವೆ. ಚಳಿಗಾಲದ ಸಮಯದಲ್ಲಿ ಮಂಜು ಮುಸುಕುವುದರಿಂದ ಈ ರೀತಿಯ ವಿದ್ಯಮಾನಗಳು ಸಹಜವಾಗಿ ನಡೆಯುತ್ತವೆ. ( ಮೊನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೆರಳಿದಂತೆ ). ಗೊತ್ತುಪಡಿಸಿದ ಮಾರ್ಗದಲ್ಲಿ ತೊಂದರೆಗಳಿವೆ ಎಂದು ಗೊತ್ತಾದರೆ, ಪ್ರವಾಸವನ್ನು ರದ್ದುಪಡಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ರಿಸ್ಕ್ ತೆಗೆದುಕೊಳ್ಳಲಾಗುವುದಿಲ್ಲ.

ಇಂಟಲಿಜೆನ್ಸ್ ಪಾತ್ರ ಪ್ರಮುಖ

ಪ್ರಧಾನಿ ಭದ್ರತೆಗೆ ಇರುವ ಬೆದರಿಕೆಗಳ ಬಗ್ಗೆ ಮಾಹಿತಿ ನೀಡುವುದು ಕೇಂದ್ರೀಯ ಗುಪ್ತಚರ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತೆ. ರಾಜ್ಯ ಪೊಲೀಸರು ಸ್ಥಳೀಯವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಎಸ್‌ಪಿಜಿ, ಅಂತಿಮವಾಗಿ ಪ್ರಧಾನಿ ಭದ್ರತೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಸ್ಥಳೀಯ ಪೊಲೀಸರು ಒಪ್ಪಿಗೆ ನೀಡುವವರೆಗೂ ಪ್ರಧಾನಿ ಸಂಚಾರಕ್ಕೆ ಎಸ್‌ಪಿಜಿ ಅನುಮತಿ ನೀಡುವುದಿಲ್ಲ. ಮೂಲಗಳ ಪ್ರಕಾರ, ರಾಜ್ಯ ಪೊಲೀಸರು ಸಂಭಾವ್ಯ ವಿಧ್ವಂಸಕ ಕೃತ್ಯ ತಡೆಯಲು ಬಿಗಿ ತಪಾಸಣೆಗಳನ್ನು ನಡೆಸಬೇಕು.

ಪ್ರಧಾನಿ ಅವರ ವಾಹನ ಹಾಗೂ ಬೆಂಗಾವಲು ಪಡೆಯನ್ನು(Escort Force) ರಾಜ್ಯ ಪೊಲೀಸರ ವಾಹನವು ಮುನ್ನಡೆಸಬೇಕು. ಆಯಾ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿಯು ಜತೆಗಿರಬೇಕು. ರ‍್ಯಾಲಿ, ಸಮಾವೇಶ ಅಥವಾ ರೋಡ್‌ ಶೋ ವೇಳೆ ಜನರು ಪ್ರಧಾನಿಯನ್ನು ಸುತ್ತುವರಿಯುವ ಸಾಧ್ಯತೆಯಿರುತ್ತದೆ. ಈ ವೇಳೆ ಭದ್ರತಾ ಲೋಪ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಎಸ್‌ಪಿ ದರ್ಜೆಯ, ಸಮವಸ್ತ್ರದಲ್ಲಿ ಇಲ್ಲದ ಸಿಬ್ಬಂದಿಯನ್ನು( mufthi ಈ ವೇಳೆ ನಿಯೋಜಿಸಲಾಗುತ್ತದೆ. ಒಂದು ವೇಳೆ ಪ್ರಧಾನಿಯು ಶಿಷ್ಟಾಚಾರವನ್ನು ಬದಿಗೊತ್ತಿ ಜನರ ಹತ್ತಿರಕ್ಕೆ ಹೋಗಲು ಇಚ್ಛಿಸಬಹುದು. ಆದರೆ, ಅವರ ಭದ್ರತೆಗೆ ಅಪಾಯವಿದೆ ಎಂದು ಎಸ್‌ಪಿಜಿ ಪರಿಗಣಿಸಿದರೆ, ಪ್ರಧಾನಿ ಅವರನ್ನು ತಡೆಯಬಹುದು.

ಇನ್ನು ಪ್ರಧಾನಿ ಎಲ್ಲೇ ಓಡಾಡಿದ್ರು ಅವರಿಗೆ ಅಂತ್ಲೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿರುತ್ತದೆ ಮತ್ತು ಅದಕ್ಕೆ ವಿಶೇಷ ಕಾನ್ವೆ ಸಿದ್ದಪಡಿಸಲಾಗುರುತ್ತೆ. ಎಸ್ಪಿಜಿ ನಿಯಮಗಳ ಪ್ರಕಾರ ಮೊದಲು ವಾರ್ನಿಂಗ್‌ ಅಥಾವ ಪೈಲಟ್‌ ಕಾರ್‌ ಇರುತ್ತದೆ ಇದು ಕಾರ್‌ಕೇಡ್‌ನ ಮುಂಭಾಗದಲ್ಲಿ ಇರುತ್ತದೆ. ಕಾರ್‌ಕೇಡ್‌ ಆಗಮಿಸುತ್ತಿರುವುದರ ಮುನ್ಸೂಚನೆಯಾಗಿ ಈ ಕಾರು ಸೈರನ್ (Sensor) ಮೊಳಗಿಸುತ್ತಾ ಹೋಗುತ್ತದೆ. ಇದಾದ ಬಳಿಕ (technical Vehicle) ಟೆಕ್ನಿಕಲ್ ಕಾರ್ ಸಂಚರಿಸುತ್ತದೆ. ಇದು ನೆಟ್‌ವರ್ಕ್ ಜಾಮರ್‌, ಮತ್ತಿತರ ತಾಂತ್ರಿಕ ಉಪಕರಣಗಳನ್ನು ಹೊಂದಿರುತ್ತದೆ

ನಂತದ ರೈಡರ್ಸ್‌ ಕಾರು ಬರಲಿದ್ದು, ಇದು ಪ್ರಧಾನಿ ಸಾಗುವ ಕಾರಿನ ಮುಂಬದಿ, ಎಡಬದಿ, ಬಲಬದಿ ಮತ್ತು ಹಿಂಬದಿಯಲ್ಲಿ ಇರುತ್ತವೆ. ಪ್ರಧಾನಿ ಸಾಗುತ್ತಿರುವ ಫ್ಲ್ಯಾಗ್‌ ಕಾರ್‌ಗೆ ಎಲ್ಲಾ ಬದಿಯಿಂದಲೂ ಇವು ಬೆಂಗಾವಲು ನೀಡುತ್ತವೆ. ಇವುಗಳ ಸಂಖ್ಯೆ 2ರಿಂದ 6ರವರೆಗೂ ಇರುತ್ತವೆ. ನಂತರದಲ್ಲಿ ಫ್ಲ್ಯಾಗ್‌ ಕಾರ್‌ ಬರಲಿದ್ದು, ಇದು ಪ್ರಧಾನಿ ಸಾಗುವ ಕಾರು. ಇದನ್ನು ಸ್ಟೇಟ್‌ ಕಾರ್, ಫ್ಲ್ಯಾಗ್‌ ಕಾರ್‌ ಎಂದು ಕರೆಯಲಾಗುತ್ತದೆ. ಈ ಕಾರು ಸದ್ಯ 16 ಕೋಟಿ ಮೌಲ್ಯಾಗಿದ್ದು ಅತ್ಯುನ್ನತ ತಂತ್ರಜ್ಞಾನ ಮತ್ತು ಬುಲೆಟ್ ಫ್ರೂಫ್ ಆಗಿದೆ.

pm Security In India

ಪ್ರಧಾನಿ ಕಾರಿನ ಬಳಿಕ ಅಂಬುಲೆನ್ಸ್ ಇರಲಿದ್ದು (Ambulance) ಇದು ತುರ್ತು ಸಂದರ್ಭದಲ್ಲಿ ಪ್ರಧಾನಿಗೆ ಅಗತ್ಯ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುತ್ತದೆ. ಕೊನೆಯಲ್ಲಿ ಕಾರ್‌ಕೇಡ್‌ನ ಎಲ್ಲಾ ವಾಹನಗಳು ಮುಂದೆ ಸಾಗಿವೆ ಎಂಬುದನ್ನು ಖಚಿತಪಡಿಸಿಕೊಂಡ ಟೇಲ್‌ ಕಾರ್(Tale Car) ನೀಯೋಜನೆ ಮಾಡಿರುತ್ತೆ. ಇದು ಪ್ರಧಾನಿ ಪ್ರಯಾಣ ಅಂತಿಮ ಸೂಚನೆ ನೀಡಲಿದೆ. ಮತ್ತು ಮುಂದಿನ ಎಲ್ಲ ಕಾರುಗಳ ಸುರಕ್ಷಿತ ಪ್ರಯಾಣದ ಸೂಚನೆ ನೀಡಲಿದೆ.

ಪ್ರಧಾನಮಂತ್ರಿ ರಾಜ್ಯಗಳ ಪ್ರವಾಸದ ವೇಳೆ ಈ ಎಲ್ಲಾ ಕಾರುಗಳನ್ನು ರಾಜ್ಯ ಸರ್ಕಾರವೇ ಒದಗಿಸಬೇಕು, ಈ ಎಲ್ಲಾ ವಾಹನಗಳ ಚಾಲಕರು ಕರ್ತವ್ಯ ಮುಗಿಯುವವರೆಗೆ ಕಾರಿನಿಂದ ಇಳಿಯಬಾರದು, ಕಾರ್‌ಕೇಡ್‌ ಸಾಗಲಿರುವ ಮಾರ್ಗದಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ ನಂತರವಷ್ಟೇ ಕಾರ್‌ಕೇಡ್‌ ಪ್ರಯಾಣ ಆರಂಭಿಸಬೇಕು, ಟೇಲ್‌ಕಾರ್‌ನಿಂದ ಸಂದೇಶ ಬಂದ ನಂತರವಷ್ಟೇ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ.

RECOMMENDED

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.
Entertainment

ಸೆಟ್ಟೇರಿತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ನಿತಿನ್ ನೂತನ ಸಿನಿಮಾ – ಚಿತ್ರತಂಡಕ್ಕೆ ಶುಭ ಹಾರೈಸಿದ ಮೆಗಾಸ್ಟಾರ್ ಚಿರಂಜೀವಿ.

March 25, 2023
KPCC: ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆ
Just-In

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಲಿಂಗಾಯತ ಸಮುದಾಯದ ನಾಯಕರಿಗೇ ಹೆಚ್ಚು ಮಣೆ ಹಾಕಿದ ಕಾಂಗ್ರೆಸ್‌, ಜಾತಿ ಲೆಕ್ಕಾಚಾರ ಇಲ್ಲಿದೆ ನೋಡಿ…

March 25, 2023
Dk sivakumar: ರಾಜ್ಯದಲ್ಲಿ ಭಾರತ ಜೋಡೋ ಯಶಸ್ಸಿಗೆ ಡಿಕೆಶಿ ಸಂತಸ
Politics

DK Shivkumar On Rahul Gandhi: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರನ್ನು ಅನರ್ಹ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

March 25, 2023
Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್
Entertainment

Naresh-Pavithra Lokesh: ಮತ್ತೆ ಮದುವೆಯಾಗಿ ಮತ್ತೆ ಮದುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡಿದ ನಟ ಡಾ.ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್

March 24, 2023
Ramzan 2023: ನಾಳೆ(ಶುಕ್ರವಾರ)ಯಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಪವಿತ್ರ ರಂಜಾನ್‌ ಉಪವಾಸ ಆರಂಭ
Bangalore

Ramzan 2023: ನಾಳೆ(ಶುಕ್ರವಾರ)ಯಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಪವಿತ್ರ ರಂಜಾನ್‌ ಉಪವಾಸ ಆರಂಭ

March 23, 2023
Iti Acharya: ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು
Entertainment

Iti Acharya: ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು

March 23, 2023
DK Shivkumar: ಖಾಕಿ ತೊಟ್ಟು ಆಟೋ ಚಲಾಯಿಸಿದ ಡಿ.ಕೆ. ಶಿವಕುಮಾರ್
Politics

DK Shivkumar: ಖಾಕಿ ತೊಟ್ಟು ಆಟೋ ಚಲಾಯಿಸಿದ ಡಿ.ಕೆ. ಶಿವಕುಮಾರ್

March 23, 2023
Secular Tv Top Stories : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ  | ಶಾಸಕ ಜಮೀರ್ ಆಸ್ತಿ 2031% ಪಟ್ಟು ಹೆಚ್ಚಳ!
Politics

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ-ವಿಪಕ್ಷ ನಾಯಕ ಸಿದ್ದರಾಮಯ್ಯ

March 23, 2023
Next Post
ಗಣಪತಿ ಮೂರ್ತಿ 2-4 ಅಡಿ ನಿರ್ಬಂಧ ಹಿಂಪಡೆಯಲು ಸರ್ಕಾರಕ್ಕೆ ಡಿಕೆಶಿ ಆಗ್ರಹ

Mekedatu Padayathra: ಪಾಸಿಟಿವ್ ಸಂಖ್ಯೆ ಹೆಚ್ಚಿಸಲು ಪರೀಕ್ಷೆ ಮಾಡುತ್ತಾರೆ: ಡಿ.ಕೆ ಶಿವಕುಮಾರ್

Covid Pills: ಕೋವಿಡ್‌ಗೆ ಬಂತು ಕಡಿಮೆ ಬೆಲೆಯ ಮಾತ್ರೆ: ₹1,400ರಲ್ಲಿ ಪೂರ್ತಿ ಔಷಧ ಲಭ್ಯ

Covid Pills: ಕೋವಿಡ್‌ಗೆ ಬಂತು ಕಡಿಮೆ ಬೆಲೆಯ ಮಾತ್ರೆ: ₹1,400ರಲ್ಲಿ ಪೂರ್ತಿ ಔಷಧ ಲಭ್ಯ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist