Fathima Sheikh: ಆಧುನಿಕ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಎಂದು ಪಾತ್ರರಾಗಿರುವ ಫಾತಿಮಾಶೇಖ್ ಅವರ 191ನೇ ಜನ್ಮದಿನ! ಫಾತಿಮಾಶೇಖ್ ಅವರು ಭಾರತೀಯ ಶಿಕ್ಷಣತಜ್ಞ ಮತ್ತು ಸಮಾಜ ಸುಧಾಕರರಾಗಿದ್ದರು ಜ್ಯೋತಿಬಾಪುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಸಹೋದ್ಯೋಗಿಯಾಗಿದ್ದರು.ಇಂದು 191 ನೇ ಜನ್ಮದಿನವಾದ್ದರಿಂದ ಗೂಗಲ್ ಡೂಡಲ್ ಮೂಲಕ ಗೌರವಿಸಿದೆ.
ಫಾತಿಮಾಶೇಖ್ ಅವರು ಜ್ಯೋತಿಬಾಪುಲೆ ಹಾಗೂ ಸಾವಿತ್ರಿಬಾಯಿ ಪುಲೆ ಅವರೊಂದಿಗೆ ದೀನದಲಿತರ ಸಮುದಾಯಗಳಲ್ಲಿ ಶಿಕ್ಷಣದ ಅರಿವನ್ನು ಮೂಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ದಲಿತ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಶಿಕ್ಷಣ:
1948 ರಲ್ಲಿ ಶಾಲೆಯೊಂದನ್ನು ಸ್ಥಾಪಿಸಿ ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ ಫಾತಿಮಾಶೇಖ್ ಅವರು 1831 ಜನವರಿ 9ರಂದು ಪುಣೆಯಲ್ಲಿ ಜನಿಸಿದರು. ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದರು. ಫಾತಿಮಾ ಕುಟುಂಬ ಫುಲೆ ದಂಪತಿಗಳಿಗೆ ಆಶ್ರಯ ನೀಡಿದರು. ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾಶೇಖ್ ಅವರು ವರ್ಗ ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಿದ ದಲಿತ ಮತ್ತು ಮುಸ್ಲಿಮ್ ಮಹಿಳೆಯರಿಗೆ ಪಾಠ ಕಲಿಸುತ್ತಿದ್ದರು.

ಸಾವಿತ್ರಿಬಾಯಿ ಪುಲೆಯವರ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆಗಳ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.ಪುಣೆಯ ಗಂಜ್ ಪೇಠ್ ನಿವಾಸಿ ಉಸ್ಮಾನ್ ಶೇಖ್ ಎಂಬುವವರು ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿಬಾ ಫುಲೆ ಅವರನ್ನು ತಮ್ಮ ಮನೆಯಲ್ಲಿ ಶಾಲೆಯನ್ನು ಪ್ರಾರಂಭಿಸಲು ಆಹ್ವಾನಿಸಿದರು. ಉತ್ತಮ ಶಿಕ್ಷಣ ಪಡೆದ ಅವರ ತಂಗಿ ಫಾತಿಮಾ ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದರು.
ಫಾತಿಮಾ ತನ್ನ ಸಮುದಾಯದ ಮುಖಂಡರಿಂದ ಪ್ರತಿರೋಧವನ್ನು ಎದುರಿಸಿದಾಗ ಅವಳ ಸಹೋದರ ಅವಳ ಬೆಂಬಲಕ್ಕೆ ನಿಂತರು. ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮುಸ್ಲಿಂ ಸಮುದಾಯದ ಪೋಷಕರಿಗೆ ಫಾತಿಮಾ ಮನವರಿಕೆ ಮಾಡಿದರು. ಎರಡು ಕುಟುಂಬಗಳ ನಡುವಿನ ಬಾಂಧವ್ಯವು 19 ನೇ ಶತಮಾನದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವಿನ ಏಕತೆಯ ಸಂಕೇತವಾಗಿತ್ತು ಎಂದಿದ್ದಾರೆ.