Mekedatu Padayathra: (ಜ.9): ಕಾಂಗ್ರೆಸ್ ಪಕ್ಷದಿಂದ ಇಂದು ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಕನಕಪುರ ತಾಲೂಕಿನ ಕಾವೇರಿಯ ಸಂಗಮ ಬಳಿಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಪಾದಯಾತ್ರೆಯಲ್ಲಿ ಕಾಂಗ್ರೆಸ್ನ ನೂರಕ್ಕೂ ಹೆಚ್ಚು ಶಾಸಕರು, ವಿಧಾನಪರಿಷತ್ ಸದಸ್ಯರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಇಂದಿನಿಂದ ಜನವರಿ 19ರ ವರೆಗೆ ಪಾದಯಾತ್ರೆ ನಡೆಯಲಿದ್ದು, 165 ಕ್ಕೂ ಹೆಚ್ಚು ಕಿಲೋಮೀಟರ್ ಹೆಜ್ಜೆಹಾಕಲು ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ತಂಡ ತಯಾರಾಗಿದೆ. ಪಾದಯಾತ್ರೆಯ ಮೊದಲ ದಿನವಾದ ಇಂದು ಸಂಗಮದಿಂದ ದೊಡ್ಡ ಆಲಹಳ್ಳಿ ವರೆಗೂ ಪಾದಯಾತ್ರೆ.
ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರ ನಿರ್ಧಾರ
ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಧ್ಯಾಹ್ನದ ಭೋಜನ ಮುಗಿಸಿದರು, ಮುದ್ದೆ, ಅವರೇಕಾಳು ಸಾಂಬರ್, ಅನ್ನ ಸಾಂಬರ್, ರಸಮ್, ಪೂರಿ, ಹಪ್ಪಳ, ಮೊಸರನ್ನ, ಮೈಸೂರು ಪಾಕ್ ಸಿದ್ಧವಾಗಿವಾಗಿತ್ತು ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರ ನಿರ್ಧಾರ ಮಾಡಿದ್ದು ಕಾನೂನು ಪ್ರಕಾರ ಮಾತ್ರ ಕ್ರಮ ಜರುಗಿಸುವುದಕ್ಕೆ ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಆಲಹಳ್ಳಿಯಲ್ಲಿ ವಾಸ್ತವ್ಯ
ಸಂಜೆ ವೇಳೆಗೆ ದೊಡ್ಡಆಲಹಳ್ಳಿಯನ್ನ ಪಾದಯಾತ್ರೆ ತಲುಪುತ್ತದೆ. ದೊಡ್ಡಆಲಹಳ್ಳಿಯಲ್ಲೇ ನಾಯಕರು ವಾಸ್ತವ್ಯ ಹೂಡಲಿದ್ದಾರೆ.ರಾಜ್ಯದ ದಿಕ್ಸೂಚಿ ಬದಲಾಗಲು ಪಾದಯಾತ್ರೆ ಮಾಡ್ತಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವುದು, ವಿದ್ಯುತ್ ಉತ್ಪಾದನೆಗಾಗಿ ಯೋಜನೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಗೆ ಯಾರು ಬಂದ್ರೂ ಆಹ್ವಾನವಿದೆ – ಸಿದ್ದರಾಮಯ್ಯ
ನಮ್ಮ ನೀರಿಗಾಗಿ ಈಗಾಗಲೇ ಸಾಕಷ್ಟು ಹಾದಿ ಸವೆಸಿದ್ದೇವೆ, ಹೆಜ್ಜೆ ಇಟ್ಟಿದ್ದೇವೆ, ಯೋಜನೆ ಜಾರಿಯಾಗುವವರೆಗೂ ಸಾಗುತ್ತಲೇ ಇರುತ್ತೇವೆ, ಇದು ನಮ್ಮ ಬದ್ಧತೆ.
— Karnataka Congress (@INCKarnataka) January 9, 2022
ರಾಜ್ಯದ ಯಶಸ್ಸಿಗೆ ಮೈಲುಗಲ್ಲಾಗುವ
ಮೇಕೆದಾಟು ಯೋಜನೆಗಾಗಿ ಮೊದಲ ದಿನದ ಪಾದಯಾತ್ರೆ ಸಾಗುವ ವಿವರ ಇಂತಿದೆ.
ಬನ್ನಿ ನಮ್ಮ ನೀರಿಗಾಗಿ ಹೆಜ್ಜೆ ಹಾಕೋಣ.#MekedatuPadayatre pic.twitter.com/gJBV3TUh5l
ಬೆ.7.30 : ಮೇಕೆದಾಟು ಪಾದಯಾತ್ರೆಗೆ ಕಾವೇರಿ ತಟದಲ್ಲಿ ಇಂದು ಮುಂಜಾನೆ ಚಾಲನೆ ನೀಡಲಾಯಿತು.
ನಗಾರಿ ಬಾರಿಸುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ
ಮೇಕೆದಾಟು ಯೋಜನೆಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಾದಯಾತ್ರೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಸ್ವಾಮೀಜಿಗಳು ಡಿಕೆ ಶಿವಕುಮಾರ್,ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಿದರು.
ಪಾದಯಾತ್ರೆ ಇರುವುದರಿಂದ ಸಂಗಮ ಚೆಕ್ ಪೋಸ್ಟ್ ನಲ್ಲಿ ಯಾವುದೇ ತಪಾಸಣೆಗಳು ಇಲ್ಲದೆ ವಾಹನಗಳನ್ನು ಬಿಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ಸ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಇನ್ನಿತರ ಪ್ರಮುಖರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಕಲಾವಿದರ ಬೆಂಬಲ
ಪಾದಯಾತ್ರೆಗೆ ನಟ ಶಿವರಾಜಕುಮಾರ್ ಬೆಂಬಲ, ಶಿವರಾಜ್ ಕುಮಾರ್ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.ಮೇಕೆದಾಟು ಯೋಜನೆಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಸಾಧುಕೋಕಿಲಾ ಹೇಳಿಕೆ ನೀಡಿದ್ದಾರೆ. ನಾನು ಕಲಾವಿದ ಎಲ್ಲಾ ಕಡೆ ಇರುತ್ತೇನೆ ಡಿಕೆ ಶಿವಕುಮಾರ್ ಅವರು, ಆತ್ಮೀಯರಾಗಿರುವುದರಿಂದ ಹಿನ್ನೆಲೆ ಸಂಗೀತ ಸಂಯೋಜನೆ ಮಾಡುವಂತೆ ಕೇಳಿದ್ದರು ನಮ್ಮ ಹೋರಾಟ ಅದರಿಂದ ನಾನು ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪಾದಯಾತ್ರೆ ಆರಂಭ
ವೇದಿಕೆ ಕಾರ್ಯಕ್ರಮ ಮುಕ್ತಾಯವಾಗಿ ಇದೀಗ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ.
ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ
ಜ್ವರದಿಂದ ಬಳಲುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕನಕಪುರ ತಾಲೂಕಿನ ಹೆಗ್ಗನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಂಜೆ ದೊಡ್ಡ ಆಲಹಳ್ಳಿಗೆ ಆಗಮನ
ರಾಮನಗರದ ಹೆಗ್ಗನೂರು ಬಳಿ 10 ಎಕರೆಯಲ್ಲಿ ಊಟ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲವೇ ನಿಮಿಷದಲ್ಲಿ ಪಾದಯಾತ್ರೆ ಆರಂಭಗಾಗಲಿದೆ.ಸಂಜೆ ವೇಳೆಗೆ ಡಿಕೆ ಶಿವಕುಮಾರ್ ಹುಟ್ಟೂರು ದೊಡ್ಡ ಆಲಹಳ್ಳಿಗೆ ಪಾದಯಾತ್ರೆ ತಲುಪಲಿದೆ.
ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದಾರೆ.ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆಗ್ಗನೂರು ಎಂಬಲ್ಲಿಂದ ಪಾದಯಾತ್ರೆ ಮತ್ತೆ ಆರಂಭ ಆಗಿದೆ. ವಿಶ್ರಾಂತಿ ಬಳಿಕ ಕಾಂಗ್ರೆಸ್ ಪಾದಯಾತ್ರೆ ಮುಂದುವರಿದಿದೆ.
ಮಹಿಳಾ ಪೊಲೀಸ್ ವಾಹನ ಡಿಕ್ಕಿ
ಪಾದಯಾತ್ರೆ ವೇಳೆ ಮಹಿಳೆಗೆ ಪೊಲೀಸ್ ವಾಹನ ಡಿಕ್ಕಿ,ಏಳಗಳ್ಳಿ ಗ್ರಾಮದ ಬಳಿ ಪೊಲೀಸ್ ಡಿಕ್ಕಿಯಾಗಿ ಮಹಿಳೆಗೆ ಗಾಯವಾಗಿದೆ.
ಆಲದಹಳ್ಳಿ ತಲುಪಿದ ಪಾದಯಾತ್ರೆ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ದೊಡ್ಡ ಆಲಹಳ್ಳಿಗೆ ತಲುಪಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಆಲದಹಳ್ಳಿಯಲ್ಲಿ ಡಿ.ಕೆ. ಶಿವಕುಮಾರ್ಗೆ ಭರ್ಜರಿ ಸ್ವಾಗತ