Rashmika Mandanna: (ಜ.8) ಅಲ್ಲು ಅರ್ಜುನ್ ಹೀರೋ ಆಗಿರುವ ಪುಷ್ಪ ದ ರೈಸ್ ಚಿತ್ರ ಸೂಪರ್ ಹಿಟ್ ಆಗಿರುವ ಬೆನ್ನಿಗೇ, ಚಿತ್ರದ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರು ಏಕಾಏಕಿ ತಮ್ಮ ಸಂಭಾವನೆಯನ್ನು ಭಾರಿ ಹೆಚ್ಚಳ ಮಾಡಿರುವ ಸುದ್ದಿ ಹರಿದಾಡುತ್ತಿದೆ.
ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಪುಷ್ಪ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದ ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ ಅವರು ಸಂಭಾವನೆ ಏರಿಕೆ ಮಾಡಿರುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದ ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ ಅವರು ಭಾರೀ ಮೊತ್ತವನ್ನು ಡಿಮಾಂಡ್ ಮಾಡಿರುವ ಸುದ್ದಿ ಬಂದಿದೆ. ಮೊದಲ ಭಾಗಕ್ಕೆ ಎರಡು ಕೋಟಿ ಸಂಭಾವನೆ ಪಡೆದಿದ್ದ ರಶ್ಮಿಕಾ ಅವರು ಪುಷ್ಪ ಚಿತ್ರಕ್ಕೆ ಮೂರು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ರಶ್ಮಿಕ ಅವರು ಪಡೆದರೆ, ಇದು ಅವರ ವೃತ್ತಿಜೀವನದ ದೊಡ್ಡ ಸಂಭಾವನೆ ಎನಿಸಿಕೊಳ್ಳಲಿದೆ.
ಮೊದಲು ಪುಷ್ಪಾ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಫೆಬ್ರವರಿ ತಿಂಗಳಿನಲ್ಲಿ ಪುಷ್ಪ ಚಿತ್ರದ ಎರಡನೇ ಭಾಗ ಕೈಗೆತ್ತಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. 2022ರ ಕೊನೆಯ ಭಾಗದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Sonu Sood:’ಸ್ಟೇಟ್ ಐಕಾನ್’ ಸ್ಥಾನಕ್ಕೆ ರಾಜಿನಾಮೆ ನೀಡಿದ ನಟ ಸೋನು ಸೂದ್! ಅಸಲಿ ಕಾರಣವೇನು?