Rocking Star Yash Birthday:ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹುಟ್ಟು ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಲು ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ ಕೆಜಿಎಫ್ ಚಾಪ್ಟರ್ 2 ಪೋಸ್ಟರ್!

ರಾಕಿಂಗ್ ಸ್ಟಾರ್ ಯಶ್ ಅವರು 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ದಿನದಂದೇ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ. ಕೆಜಿಎಫ್ 2 ಸಿನಿಮಾದ ಪೋಸ್ಟರ್ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರ ದಿಕ್ಕನ್ನೇ ಬದಲಾಯಿಸಿತ್ತು.
ಸದ್ಯ ಕೆಜಿಎಫ್ 2 ಚಿತ್ರದ ಪೋಸ್ಟರ್ ಹೊಂಬಾಳೆ ಫಿಲ್ಮ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡೇಂಜರ್ ಅಹೆಡ್ ಎನ್ನುವ ಶೀರ್ಷಿಕೆ ನೀಡಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈಗಂತೂ ಕೆಜಿಎಫ್ 2 ಚಪ್ಟರ್ ಪೋಸ್ಟರ್ ಎಲ್ಲರ ಮೊಬೈಲ್ ವಾಟ್ಸಪ ಸ್ಟೆಟಸ್, ಫೇಸ್ಬುಕ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಲೇ ಇದೆ.
Caution⚠️ Danger ahead !
— Hombale Films (@hombalefilms) January 8, 2022
Birthday wishes to our ROCKY BHAI @Thenameisyash.#KGFChapter2 @prashanth_neel @VKiragandur @HombaleGroup @duttsanjay @TandonRaveena @SrinidhiShetty7 @VaaraahiCC @excelmovies@AAFilmsIndia @DreamWarriorpic @PrithvirajProd #KGF2onApr14 #HBDRockingStarYash pic.twitter.com/TVeHXcsCzx
ಸರಳ ಹುಟ್ಟುಹಬ್ಬ ಆಚರಣೆ:
ರಾಕಿ ಬಾಯ್ ಯಶ್ ಅವರು ಹುಟ್ಟು ಹಬ್ಬವನ್ನು ರಾತ್ರಿ ಮನೆಯಲ್ಲೇ ಪತ್ನಿ ಮಕ್ಕಳೊಂದಿಗೆ ಸರಳವಾಗಿ ಕೇಕು ಕಟ್ ಮಾಡಿ ಸಂಭ್ರಮಿಸಿದ್ದಾರೆ. ಇನ್ನು ಪತ್ನಿ-ನಟಿ ರಾಧಿಕಾ ಪಂಡಿತ್ ಅವರು ಯಶ್ ಅವರಿಗಾಗಿ ಸ್ಪೆಷಲ್ ಕೇಕ್ ಮಾಡಿಸಿದ್ದಾರೆ.
ಕೆಜಿಎಫ್ 2 ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ಏಪ್ರಿಲ್ 14ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವುದು ಮತ್ತೊಂದು ಖುಷಿಯ ವಿಚಾರ.
BOSS Birthday Cake 🎈🎂❤️#HBDRockingStarYASH@TheNameIsYash #KGFChapter2 #YashBOSS … pic.twitter.com/cpGFHg95ya
— Telugu Yash Fans Club ™ కె జి ఎఫ్ (@YashTeluguFc) January 7, 2022