Coronavirus: (ಜ.8) ದೇಶದಲ್ಲಿ ಕೊರೊನಾ ಮೂರನೇ ಅಲೆ(Corona 3rd Wave) ಶುರುವಾಗಿದೆ. ಕರ್ನಾಟಕಕ್ಕೂ (Karnataka) ಇದು ಲಗ್ಗೆ ಇಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಾರೆ. ಈ ಶಾಕ್ ಬೆನ್ನಲೆ ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್ ಹೊರ ಬಂದಿದೆ.
ಹೌದು ರಾಜ್ಯದಲ್ಲಿ ಮೂರನೇ ಅಲೆಯಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಕರ್ನಾಟಕಕ್ಕೆ ಈ ಬಾರಿ ದೊಡ್ಡ ಹಾನಿ ಮಾಡಲಿದೆ ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ (Indian Institute of Science) ಹೇಳಿದೆ.

ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಅಂಕಿ ಅಂಶಗಳನ್ನು ಅಧರಿಸಿ( Statistical Study) ಸ್ಟಾಟಿಸ್ಟಿಕಲ್ ಸ್ಟಡಿ ಮಾಡಿರುವ ತಜ್ಞರು ರಾಜ್ಯದಲ್ಲಿ ಫೆಬ್ರವರಿಯಲ್ಲಿ ಭಾರಿ ಪ್ರಮಾಣದಲ್ಲಿ (corona Case) ಕೊರೊನಾ ಪ್ರಕರಣಗಳು ಪತ್ತೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನ ಪ್ರಕಾರ ರಾಜ್ಯದಲ್ಲಿ ಫೆಬ್ರವರಿಯಲ್ಲಿ (Highest Case) ಕೊರೊನಾ ಗರಿಷ್ಠ ಪ್ರಮಾಣ ತಲುಪಲಿದ್ದು ಪ್ರತಿ ದಿನ 80 ಸಾವಿರದಿಂದ 80k to 1lakh) ಒಂದು ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲೆ ಕೊರೊನಾ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೇ ಫೆಬ್ರವರಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಲಿದ್ದು (medical Facility) ವೈದ್ಯಕೀಯ ಮೂಲ ಸೌಕರ್ಯಗಳು ಕೊರತೆಯಾಗಬಹುದು ಎಂದು ಸಲಹೆ ನೀಡಿದ್ದಾರೆ.
ಜನವರಿ ಮಧ್ಯಭಾಗದಿಂದ ರಾಜ್ಯದಲ್ಲಿ ರೌದ್ರ ನರ್ತನ ಆರಂಭವಾಗಲಿದ್ದು ಫೆಬ್ರವರಿ ಮಧ್ಯಭಾಗದಲ್ಲಿ ಗರಿಷ್ಠ ಪ್ರಮಾಣ ತಲುಪಿ ಮಾರ್ಚ್ ಅಂತ್ಯಕ್ಕೆ ಇಳಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: VTU College:ಕೋವಿಡ್ ನಿಯಮದಡಿ ವಿಟಿಯು ಕಾಲೇಜು ನೆಡೆಸಲು ಅನುಮತಿ